»   » ಭರಣಾ ಪವಾಡ, ಪಲ್ಲವಿ ಬೊಂಬಡ

ಭರಣಾ ಪವಾಡ, ಪಲ್ಲವಿ ಬೊಂಬಡ

Subscribe to Filmibeat Kannada

ಪಲ್ಲವಿ ಪ್ರಕಾಶ್‌ ಕ್ರುದ್ಧರಾಗಿದ್ದರು. ವಾಣಿಜ್ಯ ಮಂಡಳಿ ಕೊಟ್ಟ ಮಾತು ತಪ್ಪಿತ್ತು. ನಾಗಾಭರಣ ರಾತ್ರೋ ರಾತ್ರಿ ಮಾಡಿದ ಪವಾಡ ಗಿಟ್ಟಿತ್ತು.

ಹೆಂಗಸರು ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಬಿಡುಗಡೆಯಾಗಿರುವ ತಮ್ಮ ಚಿತ್ರ ‘ಅಮ್ಮ ನಿನ್ನ ತೋಳಿನಲ್ಲಿ ’ ಚಿತ್ರವನ್ನು ಕಲ್ಪನಾ ಚಿತ್ರಮಂದಿರದಲ್ಲಿ ಮುಂದುವರೆಸುವುದಾಗಿ ವಾಣಿಜ್ಯ ಮಂಡಳಿ ಸಮಿತಿ ಸಭೆ ಸಂಜೆ 4 ಗಂಟೆಗೆ ಭರವಸೆ ಕೊಟ್ಟಿತು. ಅದಾದ ನಾಲ್ಕೇ ತಾಸುಗಳಲ್ಲಿ ಮಂಡಳಿ ಇರಾದೆ ಬದಲು. ‘ನೀಲಾ’ ಬರಲಿ, ಅಮ್ಮ ತೋಳಿನಿಂದ ಕಳಚಿಕೊಳ್ಳಲಿ ಅಂದಿತು.


ಅಕ್ಟೋಬರ್‌ 5ರವರೆಗೆ ನೀಲಾ ಚಿತ್ರ ಕಲ್ಪನಾ ಚಿತ್ರಮಂದಿರದಲ್ಲಿ ಮಾರ್ನಿಂಗ್‌ ಷೋ ಮಾತ್ರ ಪ್ರದರ್ಶಿತವಾಗಲಿ. ಉಳಿದ ಮೂರು ಆಟ ಅಮ್ಮ ನಿನ್ನ ತೋಳಿನಲ್ಲಿಗೇ ಇರಲಿ ಅಂತ 4 ಗಂಟೆಗೆ ಅಪ್ಪಣೆ ಕೊಡಿಸಿದ ಮಂಡಳಿ, ರಾತ್ರಿ 8 ಗಂಟೆಗೆ ನಾಗಾಭರಣ ಧರಿಸಿತ್ತು. ನಾಲ್ಕೂ ಆಟಗಳು ನೀಲಾಗೇ ಮೀಸಲು ಅಂತ ದಿಢೀರ್‌ ಬದಲಾವಣೆ. ಅದಕ್ಕೇ ಪಲ್ಲವಿ ಪ್ರಕಾಶ್‌ ಶುಕ್ರವಾರ ಸುದ್ದಿಗೋಷ್ಠಿ ಕರೆದು, ಮಂಡಳಿಯನ್ನು ತರಾಟೆಗೆ ತೆಗೆದುಕೊಂಡದ್ದು.

ಯಾವ ಥಿಯೇಟರ್‌ಗೆ ಯಾವ ಸಿನಿಮಾ? ಯಾವುದನ್ನು ಮುಂದುವರೆಸಬೇಕು? ಇಂಥಾ ಚಿತ್ರ ಎತ್ತಂಗಡಿಗೆ ರೆಡಿ ಎಂದು ನಿರ್ಣಯಿಸುವ ಕರ್ನಾಟಕ ವಾಣಿಜ್ಯ ಮಂಡಳಿ ಸಮಿತಿ ಸಭೆ ಹೀಗೆ ಸಡಿಲವಾದರೆ ಹೇಗೆ ಸ್ವಾಮಿ?

ರವಿಗೂ ಕತ್ತಲು : ರವಿಚಂದ್ರನ್‌ ಸಿನಿಮಾಗೂ ಥಿಯೇಟರ್‌ ಸಮಸ್ಯೆ ಬಂದೊದಗಿದೆ. ’ಪ್ರೇಮಕ್ಕೆ ಸೆ’ೖ ಸೆಪ್ಟೆಂಬರ್‌ 28ಕ್ಕೇ ತೆರೆಗೆ ಬರಬೇಕಿತ್ತು. ‘ಅಮ್ಮ’ ಹಾಗೂ ‘ನೀಲಾ’ ಬಿಡುಗಡೆ ಪೋಟಿಯ ಯಾದಿಯಲ್ಲಿದ್ದವು. ಕೊನೆಗೆ ರವಿ ಗೆಲ್ಲಲಾಗಲಿಲ್ಲ. ಪ್ರೇಮಕ್ಕೆ ಸೈ ನೋಡಲು ಇನ್ನೂ ಒಂದು ವಾರ ಕಾಯಬೇಕು. ಇವೆಲ್ಲದರ ನಡುವೆ ‘ನೀಲಾ’ಭರಣ ನಗುತ್ತಲೇ ಇದ್ದಾರೆ. ಫಸ್ಟ್‌ ಇಂಪ್ರೆಷನ್‌ ನೋಡಿದರೆ ಈ ನಗುವಿನ ಆಯುಷ್ಯ ವಾರ ಮಾತ್ರ ಎನಿಸುತ್ತಿದೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada