ವರಮಹಾಲಕ್ಷ್ಮಿ ಹಬ್ಬಕ್ಕೆ ಮೂರು ಸಿನಿಮಾಗಳ ಮುಖಾಮುಖಿ

Recommended Video

ಒಂದೇ ದಿನ ಬರಲಿದ್ದಾರೆ ಶಿವಣ್ಣ, ಸುದೀಪ್, ಶ್ರೀ ಮುರಳಿ..! | FILMIBEAT KANNADA

ಪ್ರತಿ ಬಾರಿ ಹಬ್ಬಕ್ಕೆ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಲೇ ಇರುತ್ತದೆ. ಚಿತ್ರತಂಡಗಳು ಹಬ್ಬದ ಉಡುಗೊರೆಯಾಗಿ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುತ್ತಾ ಇರುತ್ತಾರೆ.

ಅದೇ ರೀತಿ ಈ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಮೂರು ದೊಡ್ಡ ಸಿನಿಮಾಗಳು ಬಿಡುಗಡೆ ತಯಾರಿ ನಡೆದಿದೆ. ನಟ ಶಿವರಾಜ್ ಕುಮಾರ್ ಅಭಿನಯದ 'ಆನಂದ್', ಸುದೀಪ್ ನಟನೆಯ 'ಪೈಲ್ವಾನ್' ಹಾಗೂ ಶ್ರೀಮುರಳಿ ಅವರ 'ಭರಾಟೆ' ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ.

'ಆನಂದ್', 'ಪೈಲ್ವಾನ್' ಹಾಗೂ 'ಭರಾಟೆ' ಮೂರು ಸಿನಿಮಾಗಳು ವರಮಹಾಲಕ್ಷ್ಮಿ ಹಬ್ಬದಂದು ಪ್ರೇಕ್ಷಕರ ಮುಂದೆ ಬರುತ್ತಿವೆ. ಮುಂದೆ ಓದಿ...

ಮತ್ತೆ 'ಆನಂದ್' ಆದ ಶಿವಣ್ಣ

ಮತ್ತೆ 'ಆನಂದ್' ಆದ ಶಿವಣ್ಣ

ಶಿವರಾಜ್ ಕುಮಾರ್ ಮೊದಲ ಸಿನಿಮಾದ ಹೆಸರು 'ಆನಂದ್'. ಈಗ ಅದೇ ಟೈಟಲ್ ನಲ್ಲಿ ಶಿವರಾಜ್ ಕುಮಾರ್ ಸಿನಿಮಾ ಮಾಡುತ್ತಿದ್ದಾರೆ. ದ್ವಾರಕೀಶ್ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಪಿ ವಾಸು ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. 'ಶಿವಲಿಂಗ' ಬಳಿಕ ಮತ್ತೆ ಶಿವಣ್ಣ - ಪಿ ವಾಸು ಒಂದಾಗಿದ್ದಾರೆ. ರಚಿತಾ ರಾಮ್ ಸಿನಿಮಾದ ನಾಯಕಿ.

ಹಬ್ಬಕ್ಕೆ 'ಪೈಲ್ವಾನ್' ಪ್ರವೇಶ

ಹಬ್ಬಕ್ಕೆ 'ಪೈಲ್ವಾನ್' ಪ್ರವೇಶ

'ಪೈಲ್ವಾನ್' ಸಿನಿಮಾ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರವಾಗಿದೆ. ನಿರ್ದೇಶಕ ಕೃಷ್ಣ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಈಗಾಗಲೇ ಬಹಿರಂಗ ಆಗಿದ್ದು, ಆಗಸ್ಟ್ 9ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಹಿಂದಿ, ಭೋಜಪುರಿ, ಮರಾಠಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಕಾಂಕ್ಷ ಸಿಂಗ್ ಚಿತ್ರದ ಹೀರೋಯಿನ್.

'ಭರಾಟೆ'ಯ ಬಿಡುಗಡೆ

'ಭರಾಟೆ'ಯ ಬಿಡುಗಡೆ

ನಿರ್ದೇಶಕ ಚೇತನ್ ಕುಮಾರ್ ಅವರ 'ಭರಾಟೆ' ಸಿನಿಮಾ ಕೂಡ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾ ಕೆಲಸಗಳು ಇನ್ನು ಬಾಕಿ ಇದ್ದು, ಇಡೀ ಚಿತ್ರತಂಡ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಒಂದು ಹಾಡಿನ ಚಿತ್ರೀಕರಣ ನಡೆದಿದೆ.

ಟ್ರೆಂಡ್ ಆದ 'ಭರಾಟೆ' ಮೇಕಿಂಗ್ ವಿಡಿಯೋ

'ಭರಾಟೆ' ಸಿನಿಮಾದ ಹಾಡಿಗೆ ಶ್ರೀಮುರಳಿ ಜೊತೆಗೆ ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ. ಆ ಹಾಡಿನ ಮೇಕಿಂಗ್ ವಿಡಿಯೋ ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಗಿದೆ. ಸದ್ಯ ಈ ಮೇಕಿಂಗ್ ವಿಡಿಯೋಯನ್ನು ಆರು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ.

More from Filmibeat

English summary
Shiva Rajkumar 'Ananad', Shri Murali's Bharate and Sudeep's Pailwan kannada movies will be releasing on the occasion of varamahalakshmi festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X