»   » ಪೂಜಾ ಬಗ್ಗೆ ಆನಂದ್ ಬಾಯ್ಬಿಟ್ಟ ಮತ್ತೊಂದು ಸತ್ಯ

ಪೂಜಾ ಬಗ್ಗೆ ಆನಂದ್ ಬಾಯ್ಬಿಟ್ಟ ಮತ್ತೊಂದು ಸತ್ಯ

Posted By:
Subscribe to Filmibeat Kannada
'ಎಲ್ಲಾ ಬಣ್ಣ ಮಸಿ ನುಂಗಿತು' ಎಂಬಂತೆ ತಾರೆ ಪೂಜಾಗಾಂಧಿ ವಿಚಾರದಲ್ಲೂ ಹಾಗೆಯೇ ಆಗಿದೆ. ಕಾರಣಗಳು ಏನೇ ಇರಬಹುದು ಆಕೆಯ ಮದುವೆ ಕನಸು ನುಚ್ಚು ನೂರಾಗಿದೆ. ಈ ಸಂಬಂಧ ಮುರಿದು ಬೀಳಲು ಮತ್ತೊಂದು ಮಹತ್ವದ ಕಾರಣವನ್ನು ಆನಂದ್ ಗೌಡ ನೀಡಿದ್ದಾರೆ.

ಈ ಬಣ್ಣದ ಬೆಡಗಿಯರೇ ಹೀಗೆ. ಬಣ್ಣಬಣ್ಣದ ಜನಕ್ಕೆ ಮರುಳಾಗುತ್ತಾರೆ. ತಾವು ಕಪ್ಪಗಿರುವುದೇ ತಪ್ಪಾಗಿ ಹೋಯಿತು. ನೇರಳೆ ಹಣ್ಣು ಬಲು ಕಪ್ಪು ತಿಂದು ನೋಡಿದರೆ ಬಲು ಸವಿ. ಅದೇ ರೀತಿ ಬೆಳ್ಳಗಿರೋದೆಲ್ಲಾ ಹಾಲಲ್ಲ, ಹೊಳೆಯೋದೆಲ್ಲ ಚಿನ್ನವೂ ಅಲ್ಲವಲ್ಲಾ.

ಇರಲಿ ಈಗ ನೇರವಾಗಿ ವಿಷಯಕ್ಕೆ ಬರೋಣ. ಆನಂದಗೌಡ ಜೊತೆ ಮದುವೆ ಕ್ಯಾನ್ಸಲ್ ಆಗಲು ಅವರ ಕಪ್ಪು ವರ್ಣವೂ ಕಾರಣವಾಗಿದೆ. ಈ ಬಗ್ಗೆ ಸ್ವತಃ ಆನಂದ ಗೌಡ ಅವರು ಸ್ಪಷ್ಟಪಡಿಸಿದ್ದು. ಪೂಜಾಗಾಂಧಿ ಅವರು ತಮ್ಮ ಜೊತೆ ಸಂಬಂಧ ಕಳೆದುಕೊಳ್ಳಲು ತಮ್ಮ ಬಣ್ಣವೇ ಕಾರಣವಾಗಿದೆ.

ತನ್ನ ಚಿತ್ರಗಳಲ್ಲಿ ರೊಮ್ಯಾನ್ಸ್ ಮಾಡಲಿಕ್ಕೆ ಪೂಜಾಗೆ ಬಿಳಿತೊಗಲಿನ ನಾಯಕ ನಟರೇ ಬೇಕಾಗಿತ್ತು. ಕಪ್ಪಗಿರುವ ನಾಯಕರನ್ನು ಆಯ್ಕೆ ಮಾಡಬೇಡಿ ಎಂದು ಪೂಜಾಗಾಂಧಿ ಮೊದಲೇ ನಿರ್ಮಾಪಕರಿಗೆ ಸೂಚಿಸುತ್ತಿದ್ದರಂತೆ. ಒಟ್ಟಿನಲ್ಲಿ 'ಗೌರವರ್ಣ'ದ ನಾಯಕ ನಟನನ್ನು ಕರೆತರುವಲ್ಲಿ ಅವರು ಯಶಸ್ವಿಯಾಗುತ್ತಿದ್ದರಂತೆ.

ಇತ್ತೀಚೆಗಿನ ಅವರ 'ಹಂತಕಿ' ಚಿತ್ರಕ್ಕೂ ಗೌರವರ್ಣದ ನಾಯಕ ನಟನನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಿತ್ರಕ್ಕೆ ಮೊದಲು ತಿಲಕ್, ಸಂತೋಷ್ ಎಂಬಿಬ್ಬರು ನಾಯಕರನ್ನು ಆಯ್ಕೆ ಮಾಡಲಾಗಿತ್ತಂತೆ. ಆದರೆ ಇಲ್ಲೂ ಪ್ರಸಾರ ಕಪ್ಪು ಬಿಳುಪು ಎಂಬ ಕಾರಣಕ್ಕೆ ಅವರನ್ನು ಕ್ಯಾನ್ಸಲ್ ಮಾಡಲಾಯಿತು.

ಕಡೆಗೆ ಆನಂದ್ ಗೌಡ ಅವರೇ ಮುಂಬೈನಿಂದ ಬಿಳಿತೊಗಲಿನ ತರುಣ್ ಆರೋರಾ ಎಂಬ ನಟನನ್ನು ಕರೆತರಲು ಸಹಾಯ ಮಾಡಿದರಂತೆ. ಅವರ ಮನೆಗೆ ಹೋದಾಗ ನನ್ನನ್ನು ಕೋಕಾಕೋಲಾ, ಕರಿಯ ಎಂದು ಅವರ ತಾಯಿ ಹೀಯಾಳಿಸಿದ್ದಾರೆ. ಇದಕ್ಕೆ ಪೂಜಾ ಕೂಡ ಹೊರತಾಗಿರಲಿಲ್ಲ.

ಪೂಜಾಗಾಂಧಿ ಅವರ ವರ್ಣಭೇದ ನೀತಿಗೆ ರೋಸಿ ಹೋಗಿ ನಾನೇ ಈ ಮದುವೆ ಕ್ಯಾನ್ಸಲ್ ಮಾಡಿಕೊಂಡೆ ಎಂದಿದ್ದಾರೆ ಆನಂದಗೌಡ. ಅಂದಹಾಗೆ ಪೂಜಾಗಾಂಧಿ ಅವರು ಜೆಡಿಎಸ್ ತೊರೆಯಲೂ ಇದೇ ಕಾರಣವೇ? ಆನಂದಗೌಡ ಅವರೇ ಇದಕ್ಕೆ ಉತ್ತರಿಸಬೇಕು. (ಏಜೆನ್ಸೀಸ್)

English summary
Anand Gowda, who was engaged to actress Pooja Gandhi few dasy ago reveals onemore truth about the actress. The actress wanted only white skinned actors to romance in the movies as it would appeal the audience.
Please Wait while comments are loading...