For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಹೊಸ ಚಿತ್ರಕ್ಕೆ ಬಾಲಿವುಡ್‌ನ ನವ ನಟಿ ನಾಯಕಿ?

  |

  ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಚಿತ್ರ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರದ ನಾಯಕಿ ಮತ್ತು ವಿಲನ್ ಆಯ್ಕೆ ಹಲವು ದಿನಗಳಿಂದ ಚರ್ಚೆಯಲ್ಲಿದೆ. ಮಹೇಶ್ ಬಾಬುಗೆ ವಿಲನ್ ಆಗಿ ಸುದೀಪ್ ನಟಿಸುತ್ತಾರೆ ಎಂಬ ಸುದ್ದಿ ಕೆಲವು ದಿನ ಹರಿದಾಡಿತ್ತು. ಬಳಿಕ ಈ ಪಾತ್ರವನ್ನು ಉಪೇಂದ್ರ ನಿಭಾಯಿಸುತ್ತಾರೆ ಎಂದು ಹೇಳಲಾಗಿತ್ತು.

  ಮಹೇಶ್ ಬಾಬುಗೆ ಜೋಡಿಯಾಗಿ ಕೀರ್ತಿ ಸುರೇಶ್ ನಟಿಸುವುದು ಕೂಡ ಖಾತರಿಯಾಗಿತ್ತು. ಇದನ್ನು ಲೈವ್ ಸೆಷನ್ ಒಂದರಲ್ಲಿ ಸ್ವತಃ ಅವರೇ ಖಚಿತಪಡಿಸಿದ್ದರು. ಇದರ ಮಧ್ಯೆ ಆಗಸ್ಟ್ 9ರಂದು 'ಸರ್ಕಾರು ವಾರಿ ಪಾಟ' ಚಿತ್ರತಂಡದಿಂದ ಭರ್ಜರಿ ಸುದ್ದಿಯೊಂದು ಹೊರಬೀಳುವ ಸಾಧ್ಯತೆ ಇದೆ. ಈ ಭಾನುವಾರ ಮಹೇಶ್ ಬಾಬು ಜನ್ಮದಿನ. ಅಂದು ಈ ಚಿತ್ರತಂಡ ವಿಶೇಷ ಆಡಿಯೋ ಉಡುಗೊರೆ ನೀಡುವುದಾಗಿ ತಿಳಿಸಿದೆ. ಮುಂದೆ ಓದಿ.

  ಮಹೇಶ್ ಬಾಬು- ಜೂ. ಎನ್‌ಟಿಆರ್ ಫ್ಯಾನ್ಸ್ ಕಿತ್ತಾಟಕ್ಕೆ ಕಾರಣವಾಯ್ತು ಒಂದು ಡೈಲಾಗ್!ಮಹೇಶ್ ಬಾಬು- ಜೂ. ಎನ್‌ಟಿಆರ್ ಫ್ಯಾನ್ಸ್ ಕಿತ್ತಾಟಕ್ಕೆ ಕಾರಣವಾಯ್ತು ಒಂದು ಡೈಲಾಗ್!

  ಎರಡನೆಯ ನಾಯಕಿಯಾಗಿ ಅನನ್ಯಾ?

  ಎರಡನೆಯ ನಾಯಕಿಯಾಗಿ ಅನನ್ಯಾ?

  ಬಾಲಿವುಡ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಸುದ್ದಿಯಾಗುತ್ತಿರುವ ನಟಿ ಅನನ್ಯಾ ಪಾಂಡೆ, 'ಸರ್ಕಾರು ವಾರಿ ಪಾಟ' ಚಿತ್ರತಂಡವನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಕೀರ್ತಿ ಸುರೇಶ್ ಅವರೊಂದಿಗೆ ಎರಡನೆಯ ನಾಯಕಿಯಾಗಿ ಅನನ್ಯಾ ಪಾಂಡೆ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬಂದಿಲ್ಲ.

  ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅನನ್ಯಾ

  ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅನನ್ಯಾ

  'ಸ್ಟುಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ 2019ರಲ್ಲಿ ಬಾಲಿವುಡ್ ಚಿತ್ರರಂಗ ಪ್ರವೇಶಿಸಿದ್ದ ನಟ ಚುಂಕಿ ಪಾಂಡೆ ಮಗಳು, 'ಪತಿ ಪತ್ನಿ ಔರ್ ವೋ', 'ಆಂಗ್ರೇಜಿ ಮೀಡಿಯಂ' ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜತೆಗೆ ಅವರು ಪುರಿ ಜಗನ್ನಾಥ್ ನಿರ್ದೇಶನದ ಇನ್ನೂ ಹೆಸರಿಡದ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ನಾಯಕರಾಗಿರುವ ಈ ಚಿತ್ರಕ್ಕೆ 'ಫೈಟರ್' ಎಂದು ತಾತ್ಕಾಲಿಕ ಹೆಸರು ಇಡಲಾಗಿದೆ.

  ಮಹೇಶ್ ಬಾಬು 'ಸರ್ಕಾರು ವಾರಿ ಪಾಟ' ಸಿನಿಮಾದ ಕೀರ್ತಿ ಸುರೇಶ್ ಪಾತ್ರ ರಿವೀಲ್ಮಹೇಶ್ ಬಾಬು 'ಸರ್ಕಾರು ವಾರಿ ಪಾಟ' ಸಿನಿಮಾದ ಕೀರ್ತಿ ಸುರೇಶ್ ಪಾತ್ರ ರಿವೀಲ್

  ಟ್ರೋಲ್ ಆಗಿದ್ದ ಅನನ್ಯಾ

  ಟ್ರೋಲ್ ಆಗಿದ್ದ ಅನನ್ಯಾ

  ಬಾಲಿವುಡ್‌ನ ಸ್ವಜನಪಕ್ಷಪಾತದ ಕೂಸುಗಳಲ್ಲಿ ಒಬ್ಬರು ಎಂದು ಅನನ್ಯಾ ಪಾಂಡೆ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. ನಟನೆ ಬಾರದೆ ಹೋದರೂ ಅವಕಾಶಗಳು ಸಿಗುತ್ತಿವೆ ಎಂದು ಲೇವಡಿಗೆ ಒಳಗಾಗಿದ್ದರು. 'ವಿಶ್ವ ಲಿಪ್ ಸ್ಟಿಕ್ ದಿನ' ಎಂದು ಕೆಲವು ದಿನಗಳ ಹಿಂದೆ ಲಿಪ್‌ಸ್ಟಿಕ್ ಹಾಕುವ ವಿಡಿಯೋ ಹಂಚಿಕೊಂಡಿದ್ದ ಅವರನ್ನು ನೆಟ್ಟಿಗರು ವಿಪರೀತ ಟ್ರೋಲ್ ಮಾಡಿದ್ದರು.

  ಪರಶುರಾಮ್ ನಿರ್ದೇಶನ

  ಪರಶುರಾಮ್ ನಿರ್ದೇಶನ

  ತಂದೆ ಕೃಷ್ಣ ಘಟ್ಟಮನೇನಿ ಅವರ ಜನ್ಮದಿನದಂದು ಮೇ ತಿಂಗಳಲ್ಲಿ ಮಹೇಶ್ ಬಾಬು 'ಸರ್ಕಾರು ವಾರಿ ಪಾಟ' ಚಿತ್ರವನ್ನು ಘೋಷಿಸಿದ್ದರು. 'ಗೀತಾ ಗೋವಿಂದಮ್' ನಿರ್ದೇಶಿಸಿದ್ದ ಪರಶುರಾಮ್, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಿಸೆಂಬರ್ ಬಳಿಕ ಇದರ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ.

  ಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾ

  English summary
  Reports says Ananya Pandey to star in Mahesh Babu's Sarkaru Vaari Paata film as second lead with Keerthy Suresh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X