ಅವರ ಬದಲು ಇವರು, ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಭಾರೀ ಬದಲಾವಣೆ ?
ಕೆಲ ಚಿತ್ರಗಳೇ ಹಾಗೆ. ಆರಂಭದಿಂದ್ಲೇ ಕುತೂಹಲ ಹುಟ್ಟಿಸಿ ಬಿಡುತ್ತವೆ. ಯಶ್ ಅಭಿನಯದ ಟಾಕ್ಸಿಕ್ ಇದೇ ಸಾಲಿಗೆ ಸೇರುವಂತಹ ಸಿನಿಮಾ. ಕಳೆದ ಡಿಸೆಂಬರ್‌ನಲ್ಲಿ ಅಧಿಕೃತವಾಗಿ ಘೋಷಿಸಲಾದ ಈ ಸಿನಿಮಾ ಕೆ.ಜಿ.ಎಫ್ ಚಿತ್ರವನ್ನೂ ಮೀರಿಸುತ್ತೆ ಅನ್ನುವುದು ರಾಕಿಂಗ್ ಸ್ಟಾರ್ ಯಶ್ ಅವರ ಭಕ್ತಗಣದ ನಂಬಿಕೆ. ಇದಕ್ಕೆ ಪೂರಕವಾಗಿ ಯಶ್ ತಮ್ಮ ತಂಡದ ಜೊತೆ ಕೆಲಸ ಮಾಡುತ್ತಿದ್ದಾರೆ ಕೂಡ.
ಇನ್ನು ಟಾಕ್ಸಿಕ್ ಚಿತ್ರಕ್ಕೆ ಕೇವಲ ಕೆ.ವಿ.ಎನ್ ಸಂಸ್ಥೆ ಹಣ ಹೂಡುತ್ತಿಲ್ಲ. ಯಶ್ ಪಾಲು ಕೂಡ ನಿರ್ಮಾಣದಲ್ಲಿದೆ.ಈ ಕಾರಣಕ್ಕೆ ತಮ್ಮ ಚಿತ್ರಕ್ಕೆ ಯಾರು ಬೇಕು ಯಾರು ಬೇಡ ಎನ್ನುವ ತೀರ್ಮಾನ ತೆಗೆದುಕೊಳ್ಳುವ ಹಕ್ಕು ಯಶ್ ಅವರಿಗಿದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಮೊದಲ ದಿನದಿಂದನೇ ಟಾಕ್ಸಿಕ್ ಚಿತ್ರಕ್ಕೆ ಈ ಪಾತ್ರಕ್ಕೆ ಇವರೇ ಬೇಕು ಎಂದು ಪಟ್ಟು ಹಿಡಿದು ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಯಶ್ ಪ್ರತಿಭಾವಂತರನ್ನು ಹುಡುಕುತ್ತಿದ್ದಾರೆ. ಹೆಕ್ಕಿ ಹೆಕ್ಕಿ ತಮ್ಮ ಚಿತ್ರಕ್ಕೆ ಆಯ್ಕೆ ಮಾಡುತ್ತಿದ್ದಾರೆ. ಹೀಗಿರುವಾಗ ರವಿ ಬಸ್ರೂರ್ ಈ ಚಿತ್ರದಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಸದ್ದು ಮಾಡುತ್ತಿದೆ.
ಹೌದು, ಅಸಲಿಗೆ 2023ರ ಡಿಸೆಂಬರ್‌ನಲ್ಲಿ ಈ ಚಿತ್ರದ ಘೋಷಣೆಯಾದಾಗ ಯುಕೆ ಮೂಲದ ಸಂಗೀತ ನಿರ್ದೇಶಕ 'ಜೆರಮಿ ಸ್ಟಾಕ್' ಚಿತ್ರದ ಅನೌನ್ಸ್‌ಮೆಂಟ್ ವಿಡಿಯೋಗೆ ಸಂಗೀತವನ್ನು ನೀಡಿದ್ದರು. ಈ ಸಂಗೀತವನ್ನು ಕೇಳಿ ಅನೇಕರು ಇದು ಕನ್ನಡದ ಸಂಗೀತ ನಿರ್ದೇಶಕ 'ಚರಣ್ ರಾಜ್' ಅವರದ್ದೇ ಕೆಲಸ ಎಂದು ಅಂದುಕೊಂಡಿದ್ದರು. ಹೀಗಾಗಿ ಜೆರಮಿ ಸ್ಟಾಕ್ ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಈ ಕುರಿತು ಸ್ಪಷ್ಟನೆ ನೀಡಿದ್ದರು. ಟಾಕ್ಸಿಕ್ ಚಿತ್ರಕ್ಕೆ ಸಂಗೀತ ನೀಡಿದ್ದು ನಾನು ಎಂದು ಹೇಳಿದ್ದರು.
ಇನ್ನು ಈ ವರ್ಷ ಯಶ್ ಬರ್ತ್‌ಡೇ ಪ್ರಯುಕ್ತ ಚಿಕ್ಕ ತುಣುಕು ಬಿಡುಗಡೆ ಮಾಡಲಾಗಿತ್ತು. ಈ ಟೀಸರ್‌ಗೆ ಉಗ್ರಂ.. ಕೆಜಿಎಫ್.. ಖ್ಯಾತಿಯ ರವಿ ಬಸ್ರೂರ್ ಸಂಗೀತವನ್ನು ನೀಡಿದ್ದರು. ಆದರೆ ಈಗ ರವಿ ಬಸ್ರೂರ್ ಅವರ ಜಾಗಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದ್ರನ್ ಅವರ ಪ್ರವೇಶವಾಗಿದೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ.
ಚಿತ್ರತಂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲವಾದರು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಚರ್ಚೆ ನಡೆಯುತ್ತಿದೆ.ಶೀಘ್ರದಲ್ಲಿಯೇ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಕೂಡ ಹೇಳಲಾಗುತ್ತಿದೆ. ಹಾಗೊಂದು ವೇಳೆ ಈ ಸುದ್ದಿ ನಿಜಾ ಆದಲ್ಲಿ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ ಮೊದಲ ಕನ್ನಡ ಚಿತ್ರ ಟಾಕ್ಸಿಕ್ ಆಗಲಿದೆ.

ಇನ್ನುಳಿದಂತೆ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಟಾಕ್ಸಿಕ್ ಚಿತ್ರ 2026ರಲ್ಲಿ ಮಾರ್ಚ್ 19ರಂದು ಬಿಡುಗಡೆಯಾಗಲಿದೆ. ಇನ್ನು ಟಾಕ್ಸಿಕ್ ಕೇವಲ ಪಂಚ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗುತ್ತಿಲ್ಲ. ಬದಲಿಗೆ ಇಂಗ್ಲೀಷ್ ನಲ್ಲಿ ಕೂಡ ಬಿಡುಗಡೆಯಾಗಲಿದೆ. ಏಕಕಾಲಕ್ಕೆ ಕನ್ನಡದ ಜೊತೆಯಲ್ಲಿ ಇಂಗ್ಲೀಷ್‌ನಲ್ಲಿ ಕೂಡ ಚಿತ್ರೀಕರಣವಾಗುತ್ತಿದೆ.
ಇನ್ನು ನಯನತಾರಾ, ಕಿಯಾರಾ ಅಡ್ವಾಣಿ, ಸೇರಿ ಅನೇಕರು ಚಿತ್ರದಲ್ಲಿದ್ದಾರೆ. ಹುಮಾ ಖುರೇಶಿ, ಅನಿಲ್ ಕಪೂರ್, ತಾರಾ ಸುತಾರಿಯಾ, ಅಕ್ಷಯ್ ಓಬೆರಾಯ್ ಕೂಡ ಚಿತ್ರದಲ್ಲಿದ್ದಾರೆ ಎನ್ನುವ ಸುದ್ದಿ ಇದೆ. ಹಾಲಿವುಡ್‌ನ ಅನೇಕ ತಂತ್ರಜ್ಞರು ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.
ಒಟ್ನಲ್ಲಿ ಸದ್ಯ ಟಾಕ್ಸಿಕ್ ಚಿತ್ರದಲ್ಲಿ ಭಾರೀ ಬದಲಾವಣೆಯಾಗಿದೆ. ರವಿ ಬಸ್ರೂರ್ ಅವರ ಬದಲಿಗೆ ಅನಿರುದ್ದ್ ರವಿಚಂದರ್ ಅವರಿಗೆ ಸಂಗೀತ ನಿರ್ದೇಶನದ ಜವಾಬ್ಧಾರಿಯನ್ನು ವಹಿಸಲಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ನಿಜಕ್ಕೂ ಚಿತ್ರಕ್ಕೆ ಅನಿರುದ್ದ್ ಸಂಗೀತ ಇರಲಿದೆಯಾ ? ಅಧಿಕೃತವಾದ ಉತ್ತರ ಶೀಘ್ರದಲ್ಲಿಯೇ ಸಿಗುವ ನಿರೀಕ್ಷೆ ಇದೆ.
Anirudh takes over as Yash's "TOXIC" music director.
byu/Marty_At_Reddit inkollywood


Click it and Unblock the Notifications











