ಮೆಗಾ ಫ್ಯಾಮಿಲಿಯಲ್ಲಿ ಮತ್ತೊಂದು ಡಿವೋರ್ಸ್? ಅನುಮಾನ ಮೂಡಿಸಿದ ಚೈತನ್ಯಾ ನಡೆ!
ಸೆಲೆಬ್ರೆಟಿಗಳ ವೈಯಕ್ತಿಕ ವಿಚಾರಗಳು ಜನರಿಗೆ ಬಹಳ ಆಸಕ್ತಿ ಕೆರಳಿಸುತ್ತದೆ. ತಾರೆಯರ ಲವ್, ಮ್ಯಾರೇಜ್ ಬಗ್ಗೆ ಸಿಕ್ಕಾಪಟ್ಟೆ ಹುಡುಕಾಟ ನಡೆಸುತ್ತಿರುತ್ತಾರೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಸಿನಿಮಾ ಮಂದಿಯ ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ಹುಡುಕಾಟ, ಚರ್ಚೆ ನಡೀತಿದೆ. ಕೆಲ ಸೆಲೆಬ್ರೆಟಿಗಳ ವರ್ತನೆ ಅನುಮಾನ, ಊಹಾಪೋಹಕ್ಕೆ ನಾಂದಿ ಹಾಡಿ ಇಂತಹ ಚರ್ಚೆಗಳಿಗೆ ತುಪ್ಪ ಸರಿಯುವಂತೆ ಇರುತ್ತದೆ.
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೋನಿದೇಲ ಹಾಗೂ ಆಕೆಯ ಪತಿ ಚೈತನ್ಯಾ ಜೊನ್ನಲಗಡ್ಡ ವರ್ತನೆ ಕೂಡ ಇದೇ ರೀತಿ ಇದೆ. ಮೆಗಾ ಡಾಟರ್ ನಿಹಾರಿಕಾ ಹಾಗೂ ಪತಿ ಚೈತನ್ಯಾ ಇನ್‌ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಮೆಗಾ ಫ್ಯಾಮಿಲಿಯಲ್ಲಿ ಎಲ್ಲರನ್ನು ಫಾಲೋ ಆಗುತ್ತಿರುವ ಚೈತನ್ಯಾ ಪತ್ನಿ ನಿಹಾರಿಕಾಳನ್ನು ಮಾತ್ರ ಅನ್‌ಫಾಲೋ ಆಗಿರೋದು ಅಚ್ಚರಿ ಮೂಡಿಸಿದೆ. ಇಷ್ಟೇ ಅಲ್ಲ ತಮ್ಮಿಬ್ಬರ ಮದುವೆ ಫೋಟೊಗಳನ್ನು ಕೂಡ ಇನ್‌ಸ್ಟಾಗ್ರಾಂನಲ್ಲಿ ಚೈತನ್ಯಾ ಡಿಲೀಟ್ ಮಾಡಿದ್ದಾರೆ. ನಿಹಾರಿಕಾ ಜೊತೆ ಕ್ಲಿಕ್ಕಿಸಿಕೊಂಡ ಒಂದೇ ಒಂದು ಫೋಟೊ ಕೂಡ ಆತನ ಪೇಜ್‌ನಲ್ಲಿ ಇಲ್ಲ. ಆದರೆ ನಿಹಾರಿಕಾ ಮಾತ್ರ ಮದುವೆ ಫೋಟೊಗಳನ್ನು ಡಿಲೀಟ್ ಮಾಡಿಲ್ಲ.

ತನ್ನ ಮುದ್ದಿನ ನಾಯಿ ಜೊತೆ ಬಹಳ ಹಿಂದೆ ನಿಹಾರಿಕಾ ಕ್ಲಿಕ್ಕಿಸಿಕೊಂಡಿದ್ದ ಫೋಟೊವನ್ನು ಮಾತ್ರ ಚೈತನ್ಯಾ ಡಿಲೀಟ್ ಮಾಡಿಲ್ಲ. ಇದನ್ನೆಲ್ಲಾ ನೋಡಿ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಇದೇ ಕಾರಣಕ್ಕೆ ಎಲ್ಲಾ ಸೆಲೆಬ್ರೆಟಿಗಳು ಡಿವೋರ್ಸ್‌ಗೆ ಮುನ್ನ ಮಾಡುವ ಕೆಲಸವನ್ನು ಇವರಿಬ್ಬರು ಕೂಡ ಮಾಡಿದ್ದಾರಾ? ಪರೋಕ್ಷವಾಗಿ ಇಬ್ಬರು ದೂರಾಗುತ್ತಿರುವ ಬಗ್ಗೆ ಸುಳಿವು ಕೊಟ್ಟಿದ್ದಾರಾ? ಎನ್ನುವ ಗುಸುಗುಸು ಶುರುವಾಗಿದೆ. ಅಂದಹಾಗೆ ನಿಹಾರಿಕಾ ಹಾಗೂ ಚೈತನ್ಯಾ ಅವರದ್ದು ಲವ್ ಮ್ಯಾರೇಜ್. 2020 ಡಿಸೆಂಬರ್ 9ರಂದು ರಾಜಸ್ಥಾನದ ಉದಯ್‌ಪುರ್‌ದಲ್ಲಿರುವ ಒಬೆರಾಯ್ ಉದಯ್ ವಿಲಾಸದಲ್ಲಿ ಬಹಳ ಅದ್ಧೂರಿಯಾಗಿ ಮದುವೆ ನಡೆದಿತ್ತು.
ಈ ಡೆಸ್ಟಿನೇಷನ್ ಮ್ಯಾರೇಜ್‌ಗೆ ಮೆಗಾ ಫ್ಯಾಮಿಲಿ ಸ್ಟಾರ್‌ಗಳ ಜೊತೆಗೆ ಟಾಲಿವುಡ್ ಸೆಲೆಬ್ರೆಟಿಗಳು ಹಾಜರಾಗಿದ್ದರು. ಈಡು ಜೋಡು ಸೂಪರ್ ಎಂದು ಅಭಿಮಾನಿಗಳು ಹೇಳಿದ್ದರು. ಮೆಗಾ ಫ್ಯಾಮಿಲಿಯಲ್ಲಿ ಬೊಂಬಾಟ್ ಜೋಡಿ ಇದು ಎಂದಿದ್ದರು. ಆದರೆ ಈಗ ಇಬ್ಬರು ದೂರಾಗುತ್ತಾರೆ? ಎನ್ನುವ ಗುಸುಗುಸು ಶುರುವಾಗಿರೋದು ನೋಡಿ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಮದುವೆಯಾದ ಒಂದೂವರೆ ವರ್ಷಕ್ಕೆ ಇಬ್ಬರ=ರು ಡಿವೋರ್ಸ್ ತೆಗೆದುಕೊಳ್ಳುತ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಆದರೆ ಚೈತನ್ಯಾ ಪತ್ನಿ ನಿಹಾರಿಕಾ ಕುರಿತು ಒಂದು ಇನ್‌ಸ್ಟಾ ಸ್ಟೋರಿ ಹಾಕಿ ಆ ವದಂತಿಗೆ ಬ್ರೇಕ್ ಹಾಕಿದ್ದರು. ಇದನ್ನು ನೋಡಿ ಇಬ್ಬರ ನಡುವೆ ಯಾವುದೇ ಭಿನ್ನಾಬಿಪ್ರಾಯ ಇಲ್ಲ ಎಂದು ಅಭಿಮಾನಿಗಳು ಸುಮ್ಮನಾಗಿದ್ದರು.

ಇದೀಗ ಮತ್ತೆ ನಿಹಾರಿಕಾ- ಚೈತನ್ಯಾ ಜೊನ್ನಲಗಡ್ಡ ಡಿವೋರ್ಸ್ ವದಂತಿ ಶುರುವಾಗಿದೆ. ನಿಹಾರಿಕಾ ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿಲ್ಲ. ಡಿಸೆಂಬರ್‌ನಲ್ಲಿ ಕೊನೆಯದಾಗಿ ಒಂದು ವಿಡಿಯೋ ಶೇರ್ ಮಾಡಿದ್ದರು. ಚೈತನ್ಯಾ ಫೆಬ್ರವರಿಯಲ್ಲಿ ಒಂದು ಫೋಸ್ಟ್ ಮಾಡಿದ್ದಾರೆ. ಈ ಫೋಟೊಗೆ ಈಗ ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಬ್ರೇಕಪ್ ಆಯ್ತಂತೆ, ಡಿವೋರ್ಸ್ ತಗೊತೀರಂತೆ? ಎಂದು ಕೇಳುತ್ತಿದ್ದಾರೆ. ಈ ಬಗ್ಗೆ ದಂಪತಿ ಹೇಗೆ ಪ್ರತಿಕ್ರಿಯಿಸುತ್ತೋ ಕಾದು ನೋಡಬೇಕು.
ನಿಹಾರಿಕಾ ಕೋನಿದೇಲ 2016ರಲ್ಲಿ 'ಒಕ ಮನಸು' ಎನ್ನುವ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಮೆಗಾ ಫ್ಯಾಮಿಲಿಯಿಂದ ಬಂದ ಏಕೈಕ ಹೀರೊಯಿನ್ ಈಕೆ. 'ಹ್ಯಾಪಿ ವೆಡ್ಡಿಂಗ್', 'ಸೂರ್ಯಕಾಂತಂ' ಎನ್ನುವ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇನ್ನು ಕಿರುತೆರೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ. 'ಡಿ ಜ್ಯೂನಿಯರ್ಸ್' ಡ್ಯಾನ್ಸ್ ಶೋ ನಿರೂಪಣೆ ಮಾಡಿದ್ದರು. ಇನ್ನು ಜೀ-5ಗಾಗಿ ವೆಬ್ ಸೀರಿಸ್ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











