ಲಿಪ್‌ಲಾಕ್, ಬೋಲ್ಡ್ ಸೀನ್ಸ್; 'ಟಿಲ್ಲು- 2' ಚಿತ್ರಕ್ಕೆ ಅನುಪಮಾ ಸಂಭಾವನೆ ಎಷ್ಟು?
ಮಾಲಿವುಡ್ ಬ್ಯೂಟಿ ಅನುಪಮಾ ಪರಮೇಶ್ವರನ್ ಬರ್ತಾ ಬರ್ತಾ ತೆರೆಮೇಲೆ ಸಖತ್ ಬೋಲ್ಡ್ ಆಗುತ್ತಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೂ ಮುನ್ನ ಲಂಗಾ ದಾವಣಿ, ಸೀರೆಯಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದ ಚೆಲುವೆ ಇತ್ತೀಚೆಗೆ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ದರ್ಶನ ಕೊಡುತ್ತಿದ್ದಾರೆ.
ಅನುಪಮಾ ಪರಮೇಶ್ವರನ್ ನಟನೆಯ 'ಟಿಲ್ಲು-2' ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಅನುಪಮಾ ಹಾಟ್ ಶೋ. ಹೀರೊ ಸಿದ್ದು ಜೊನ್ನಲಗಡ್ಡ ಜೊತೆ ತುಟಿಗೆ ತುಟಿ ಬೆರೆಸಿರುವ ಕೇರಳ ಕುಟ್ಟಿ ಬಿಂದಾಸ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಟ್ರೈಲರ್ ವೈರಲ್ ಆಗಿದೆ. ಇದಕ್ಕೂ ಮುನ್ನ 'ರೌಡಿ ಬಾಯ್ಸ್' ಎನ್ನುವ ಮತ್ತೊಂದು ಚಿತ್ರದಲ್ಲಿ ಅನುಪಮಾ ಇದೇ ರೀತಿ ಹಾಟ್ ಆಗಿ ಕಾಣಿಸಿಕೊಂಡು ಹುಬ್ಬೇರಿಸಿದ್ದರು.

ಬರೀ ಸಿನಿಮಾಗಳಲ್ಲಿ ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲೂ ಹಾಟ್ ಹಾಟ್ ಫೋಟೊಶೂಟ್‌ನಿಂದ ಅನುಪಮಾ ಪರಮೇಶ್ವರನ್ ಗಮನ ಸೆಳೆಯುತ್ತಿದ್ದಾರೆ. ಇನ್ನು 'ಟಿಲ್ಲು'-2 ಚಿತ್ರಕ್ಕಾಗಿ ಭರ್ಜರಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಈಗ ಟಾಲಿವುಡ್‌ನಲ್ಲಿ ಗುಲ್ಲಾಗಿದೆ. ಹೆಚ್ಚು ಸಂಭಾವನೆ ಸಿಕ್ಕಿರುವ ಕಾರಣಕ್ಕೆ ಗ್ಲಾಮರ್ ಶೋ ಹೆಚ್ಚಾಗಿದೆ ಎನ್ನುವ ಚರ್ಚೆ ನಡೀತಿದೆ.
ಎರಡು ವರ್ಷಗಳ ಹಿಂದೆ ಬಂದಿದ್ದ 'ಡಿಜೆ ಟಿಲ್ಲು' ಸಿನಿಮಾ ತೆಲುಗಿನಲ್ಲಿ ಹಿಟ್ ಆಗಿತ್ತು. ಸಿದ್ದು ಜೊನ್ನಲಗಡ್ಡ ಜೊತೆ ಕನ್ನಡ ನಟಿ ನೇಹಾ ಶೆಟ್ಟಿ ನಟಿಸಿದ್ದರು. ಚಿತ್ರದ ಟೈಟಲ್ ಸಾಂಗ್ ಸೂಪರ್ ಹಿಟ್ ಲಿಸ್ಟ್ ಸೇರಿತ್ತು. ಈ ರೊಮ್ಯಾಂಟಿಕ್ ಕ್ರೈಂ ಕಾಮಿಡಿ ಸಿನಿಮಾ ಸೀಕ್ವೆಲ್ ಬಗ್ಗೆ ಕ್ಲೈಮ್ಯಾಕ್ಸ್‌ನಲ್ಲಿ ಸುಳಿವು ಕೊಡಲಾಗಿತ್ತು. ಸಣ್ಣ ಝಲಕ್‌ನಲ್ಲಿ ಅನುಪಮಾ ಕಾಣಿಸಿಕೊಂಡಿದ್ದರು.
ಇದೀಗ 'ಡಿಜೆ ಟಿಲ್ಲು' ಸೀಕ್ವೆಲ್ 'ಟಿಲ್ಲು ಸ್ಕೇರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಮಾರ್ಚ್ 29ಕ್ಕೆ ಸಿನಿಮಾ ತೆರೆಗೆ ಬರಲಿದೆ. ಮಲ್ಲಿಕ್ ರಾಮ್ ನಿರ್ದೇಶನದ ಈ ಚಿತ್ರಕ್ಕೆ ನವೀನ್ ನೂಲಿ ಸಂಗೀತವಿದೆ. ಸದ್ಯ ಟ್ರೈಲರ್ ಹಾಗೂ ಹಾಡುಗಳು ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಅಂದಹಾಗೆ ಚಿತ್ರದಲ್ಲಿ ನಟಿಸಲು ಅನುಪಮಾ 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಅನುಪಮಾ ಚಿತ್ರವೊಂದಕ್ಕೆ ಒಂದೂವರೆ ಕೋಟಿ ರೂ. ಚಾರ್ಜ್ ಮಾಡುತ್ತಾರಂತೆ. ಆದರೆ 'ಟಿಲ್ಲು-2' ಚಿತ್ರಕ್ಕೆ ಹತ್ತಿರ ಹತ್ತಿರ 2 ಕೋಟಿ ರೂ. ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದೇ ಕಾರಣಕ್ಕೆ ಇಷ್ಟು ಬಿಂದಾಸ್ ಆಗಿ ಬಿಟ್ಟಿದ್ದಾರೆ ಎಂದು ಟಾಲಿವುಡ್ ಮಂದಿ ಹೇಳುತ್ತಿದ್ದಾರೆ.
ಅನುಪಮಾ ಪರಮೇಶ್ವರನ್ ತೆರೆಮೇಲೆ ಇಷ್ಟು ಹಾಟ್ ಆಗಿ ಕಾಣಿಸಿಕೊಳ್ಳುವುದು ನಮಗೆ ಇಷ್ಟವಾಗುತ್ತಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ತಮ್ಮ ಆಟೋದಲ್ಲಿ ಅನುಪಮಾ ಪೋಸ್ಟರ್ ಹಾಕಿಕೊಂಡಿರುವ ಡ್ರೈವರ್ ಒಬ್ಬರೂ ಇತ್ತೀಚೆಗೆ ವಿಡಿಯೋ ಮಾಡಿ ಬೇಸರ ಹೊರ ಹಾಕಿದ್ದರು.
"ನನ್ನ ಆಟೋದಲ್ಲಿ ನಿನ್ನ ಫೋಟೋ ಹಾಕಿದ್ದು ಯಾಕೆ ಗೊತ್ತಾ? ನೀವು ಒಂದ್ಕಾಲದಲ್ಲಿ ಮಾಡಿದ ಚಿತ್ರಗಳು. 'ಪ್ರೇಮಂ', 'ಅಆ', 'ಶತಮಾನಂಭವತಿ' ಸಿನಿಮಾಗಳು ಮಾಡಿದ್ದಿರಿ. ಅಂಥಾದ್ರಲ್ಲಿ ಈಗ 'ರೌಡಿ ಬಾಯ್ಸ್', 'ಟಿಲ್ಲು-2' ಸಿನಿಮಾಗಳನ್ನು ಮಾಡುತ್ತಿದ್ದೀರಾ? ಸಾವಿತ್ರಿ, ಸೌಂದರ್ಯ ಮಾಡಿದಂತಹ ಸಿನಿಮಾಗಳನ್ನು ನೀವು ಮಾಡುತ್ತೀರಿ ಅಂದುಕೊಂಡಿದ್ದೆವು. ಆದರೆ ಈಗ ನೀವು ಇಂತಹ ಸಿನಿಮಾಗಳನ್ನು ಮಾಡುತ್ತಿರುವುದು ನಮಗೆ ಇಷ್ಟವಾಗುತ್ತಿಲ್ಲ. ಇನ್ನು ಮುಂದೆ ಆದರೂ ಒಳ್ಳೆ ಒಳ್ಳೆ ಸಿನಿಮಾದಲ್ಲಿ ನಟಿಸಿ ಎಂದು ಕೇಳಿಕೊಳ್ಳುತ್ತೇನೆ" ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.


Click it and Unblock the Notifications










