Don't Miss!
- Automobiles
ಮಾರುತಿಯಿಂದ 2023 ರಲ್ಲಿ 5 ಹೊಸ ಎಸ್ಯುವಿಗಳ ಬಿಡುಗಡೆ... ಶೀಘ್ರದಲ್ಲೇ 3 ಕಾರುಗಳು ಮಾರುಕಟ್ಟೆಗೆ
- News
Breaking: ಹುಲಿ ಸಂರಕ್ಷಿತ ಪ್ರದೇಶದಲ್ಲಿಯೇ ತುರ್ತು ನೆಲಕ್ಕಿಳಿದ ರವಿಶಂಕರ್ ಗುರೂಜಿ ಹೆಲಿಕಾಪ್ಟರ್
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Sports
Women's IPL: ಬೆಂಗಳೂರು ತಂಡ ಖರೀದಿಸಿದ ಆರ್ಸಿಬಿ ಫ್ರಾಂಚೈಸಿ: 4669 ಕೋಟಿ ರುಪಾಯಿಗೆ 5 ತಂಡಗಳು ಹರಾಜು
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Finance
Budget 2023 Expectations: ಚುನಾವಣೆಗೂ ಮುನ್ನ ಕೇಂದ್ರ ಬಜೆಟ್ನಿಂದ ಕರ್ನಾಟಕ ಸರ್ಕಾರದ ನಿರೀಕ್ಷೆಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಲವತ್ತರ ಹರೆಯದಲ್ಲಿ ಸರೋಗಸಿಗೆ ಮನಸ್ಸು ಮಾಡಿದ್ರಾ ಅನುಷ್ಕಾ ಶೆಟ್ಟಿ?
ವಿಘ್ನೇಶ್ ಶಿವನ್ ಹಾಗೂ ನಯನತಾರಾ ಸಾರೋಗಸಿ ವಿಧಾನದಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದು ಗೊತ್ತೇಯಿದೆ. ಇವರಿಬ್ಬರು ಬಾಡಿಗೆ ತಾಯ್ತನ ವಿಧಾನದಲ್ಲಿ ಮಕ್ಕಳನ್ನು ಪಡೀತಿದ್ದಂತೆ ಸಾರೋಗಸಿ ಅಂದರೆ ಏನು ಎನ್ನುವ ಚರ್ಚೆ ಮತ್ತೆ ಶುರುವಾಗಿತ್ತು.
ಬಾಲಿವುಡ್‌ನಲ್ಲಿ ಸಾಕಷ್ಟು ಸೆಲೆಬ್ರೆಟಿಗಳು ಸರೋಗಸಿ ವಿಧಾನದಲ್ಲಿ ಮಕ್ಕಳನ್ನು ಪಡೆದಿದ್ದಾರೆ. ದಕ್ಷಿಣದಲ್ಲಿ ತೆಲುಗು ನಟಿ ಮಂಚು ಲಕ್ಷ್ಮಿ ಕೂಡ ಇದೇ ರೀತಿ ಹೆಣ್ಣು ಮಗು ಪಡೆದಿದ್ದರು. ಆ ನಂತರ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇದನ್ನು ಅನುಸರಿಸಿದ್ದರು. ಭಾರತದಲ್ಲಿ ಈ ವಿಧಾನದಲ್ಲಿ ಮಕ್ಕಳನ್ನು ಪಡೆಯಲು ಎಲ್ಲರಿಗೂ ಅನುಮತಿ ಇಲ್ಲ. ಆದರೂ ಹೇಗೆ ಈ ದಂಪತಿ ಮಕ್ಕಳನ್ನು ಪಡೆದರು ಎನ್ನುವ ಚರ್ಚೆ ನಡೆದಿತ್ತು. ತಮಿಳುನಾಡು ಸರ್ಕಾರ ಇದಕ್ಕಾಗಿ ಒಂದು ಸಮಿತಿ ರಚಿಸಿ ತನಿಖೆ ನಡೆಸಿತ್ತು. ಆದರೆ ದಂಪತಿ ಎಲ್ಲಾ ನಿಯಮಗಳನ್ನು ಪಾಲಿಸಿ ಮಕ್ಕಳನ್ನು ಪಡೆದಿರುವುದಾಗಿ ಸಾಬೀತುಪಡಿಸಿದ್ದರು.
ಸರೋಗಸಿ
ವಿವಾದ..
ನಯನ್ಗೆ
ಕೆಟ್ಟದು
ಬಯಸಿದ್ಯಾರು?
ವಿಘ್ನೇಶ್
ಶಿವನ್
ಹೇಳಿದ್ದೇನು?
ಇನ್ನು ಸಿನಿಮಾಗಳಲ್ಲೂ ಇತ್ತೀಚೆಗೆ ಸಾರೋಗಸಿ ವಿಚಾರ ಸಾಕಷ್ಟು ಸದ್ದು ಮಾಡ್ತಿದೆ. ಬಾಡಿಗೆ ತಾಯ್ತನ ವಿಚಾರದ ಸುತ್ತಾ ಬಾಲಿವುಡ್‌ನಲ್ಲಿ ಮಾತ್ರವಲ್ಲದೇ ದಕ್ಷಿಣದಲ್ಲೂ ಸಿನಿಮಾಗಳು ನಿರ್ಮಾಣ ಆಗುತ್ತಿದೆ.

ಸರೋಗಸಿ ಕಥೆಯಲ್ಲಿ ಸ್ವೀಟಿ
'ಬಾಹುಬಲಿ' ಸರಣಿ ನಂತರ ಅನುಷ್ಕಾ ಶೆಟ್ಟಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. 'ಸೈಜ್ ಝೀರೊ' ಚಿತ್ರಕ್ಕಾಗಿ ತೂ ಹೆಚ್ಚಿಸಿಕೊಂಡಿದ್ದ ಸ್ವೀಟಿ ಮತ್ತೆ ಹಳೇ ಪಿಜಿಕ್ ವಾಪಸ್ ಪಡೆಯಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಆಕೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿತ್ತು. ಸದ್ಯ ಹೊಸ ಚಿತ್ರವೊಂದರಲ್ಲಿ ಅನ್ವಿತಾ ರವಳಿ ಶೆಟ್ಟಿ ಎನ್ನುವ ಶೆಫ್ ಪಾತ್ರದಲ್ಲಿ ಸ್ವೀಟಿ ನಟಿಸುತ್ತಿದ್ದಾರೆ. ಈ ಸಿನಿಮಾ ಕಥೆ ಸಾರೋಗಸಿ ಸುತ್ತಾ ಸುತ್ತುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ವಿಭಿನ್ನ ಪ್ರೇಮಕಥೆ
ಯುವಿ ಕ್ರಿಯೇಷನ್ ಬ್ಯಾನರ್‌ನಲ್ಲಿ ಇನ್ನು ಹೆಸರಿಡದ ಈ ಸಿನಿಮಾ ನಿರ್ಮಾಣ ಆಗ್ತಿದೆ. ಇದು ಸ್ವೀಟಿ ನಟನೆಯ 48ನೇ ಸಿನಿಮಾ. ಚಿತ್ರದಲ್ಲಿ ನವೀನ್ ಪೊಲಿಶೆಟ್ಟಿ ಹೀರೊ ಆಗಿ ನಟಿಸ್ತಿದ್ದಾರೆ. ಚಿತ್ರದಲ್ಲಿ ಈತ ಸಿದ್ದು ಪೊಲಿಶೆಟ್ಟಿ ಎನ್ನುವ ಸ್ಟ್ಯಾಂಡಪ್ ಕಾಮೆಡಿಯನ್ ಆಗಿ ನಟಿಸ್ತಿದ್ದಾರೆ. ಚಿತ್ರದಲ್ಲಿ 40 ವರ್ಷ ವಯಸ್ಸಿನ ನಾಯಕಿ ಹಾಗೂ 20ರ ನಾಯಕನ ನಡುವಿನ ಪ್ರೇಮಕಥೆ ಇದೆಯಂತೆ. ಅದಕ್ಕೆ ತಕ್ಕಂತೆ ಅನುಷ್ಕಾ ಶೆಟ್ಟಿ ಆಯ್ಕೆ ಆಗಿದ್ದಾರೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ನಡೀತಿದೆ. ಪಿ. ಮಹೇಶ್ ಬಾಬು ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ಬಾಡಿಗೆ ತಾಯ್ತನ ಕುರಿತ ಕಥೆಗಳು
ಬಾಲಿವುಡ್‌ನಲ್ಲಿ ಈಗಾಗಲೇ ಸಾರೋಗಸಿ ವಿಚಾರವನ್ನಿಟ್ಟುಕೊಂಡು ಒಂದಷ್ಟು ಸಿನಿಮಾಗಳು ಬಂದು ಹೋಗಿವೆ. 'ಫಿಲ್ಹಾಲ್', 'ಚೋರಿ ಚೋರಿ ಚುಪ್ಕೆ ಚುಪ್ಕೆ' ಸಿನಿಮಾಗಳಲ್ಲಿ ಇದೇ ವಿಚಾರ ಇಣುಕಿತ್ತು. ಇತ್ತೀಚೆಗೆ ಬಂದ 'ಮಿಮಿ' ಚಿತ್ರದಲ್ಲಿ ಕೃತಿ ಸನೂನ್ ಬಾಡಿಗೆ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಇನ್ನು ದಕ್ಷಿಣದಲ್ಲಿ ಇತ್ತೀಚೆಗೆ ಸಮಂತಾ ನಟಿಸಿದ್ದ 'ಯಶೋದ' ಚಿತ್ರದಲ್ಲಿ ಇದೇ ವಿಚಾರದ ಬಗ್ಗೆ ಚರ್ಚಿಸಲಾಗಿತ್ತು. ಇದೀಗ ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೊಲಿಶೆಟ್ಟಿ ನಟನೆಯ ಚಿತ್ರದಲ್ಲೂ ಸಾರೋಗಸಿ ವಿಚಾರ ಇದೆ ಎನ್ನಲಾಗ್ತಿದೆ.

ಅಷ್ಟಕ್ಕೂ ಏನಿದು ಸರೋಗಸಿ?
ಸರೋಗಸಿ ಅಂದರೆ ಬೇರೆ ಮಹಿಳೆ ಹಾಗೂ ಪುರುಷನಿಗೆ ಸೇರಿದ ಮಗುವನ್ನು ಮತ್ತೊಬ್ಬ ಮಹಿಳೆ ತನ್ನ ಗರ್ಭದಲ್ಲಿ ಹೊತ್ತು ಹೆತ್ತು ಕೊಡುವ ವಿಧಾನ. ಆದರೆ ಪ್ರಸವದ ನಂತರ ಮಗುವನ್ನು ಹೊತ್ತು ಹೆತ್ತ ಮಹಿಳೆಗೆ ಆ ಮಗುವಿನ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಅಂಡಾಣು, ವೀರ್ಯ ಕೊಟ್ಟವರೇ ಆ ಮಗುವಿಗೆ ಪೋಷಕರಾಗುತ್ತಾರೆ. ಸದ್ಯಕ್ಕೆ ಈ ರೀತಿ ಮಗು ಪಡೆಯಲು ಭಾರತದಲ್ಲಿ ಎಲ್ಲರಿಗೂ ಅವಕಾಶ ಇಲ್ಲ. ಮದುವೆಯಾಗದ ಮಹಿಳೆ ಅಥವಾ ಪುರುಷ, ಸಲಿಂಗ ಸಂಬಂಧ ಹೊಂದಿರುವವರು, ಲಿವ್ ಇನ್ ರಿಲೇಶನ್‌ಶಿಪ್ ಇರುವವರು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಅವಕಾಶವಿಲ್ಲ. ದಂಪತಿಗೆ ಮಾತ್ರ ಮಗುವನ್ನು ಪಡೆಯಲು ಅವಕಾಶವಿದೆ.