»   »  ಒಂದೇ ಒಂದು ಹಾಡಿಗೆ ಅನುಷ್ಕಾ ಶೆಟ್ಟಿ ಸಂಭಾವನೆ ಇಷ್ಟೊಂದು ಕೋಟಿನಾ.!

ಒಂದೇ ಒಂದು ಹಾಡಿಗೆ ಅನುಷ್ಕಾ ಶೆಟ್ಟಿ ಸಂಭಾವನೆ ಇಷ್ಟೊಂದು ಕೋಟಿನಾ.!

Posted By:
Subscribe to Filmibeat Kannada

ದಕ್ಷಿಣ ಭಾರತದ ಯಶಸ್ವಿ ನಟಿ ಅನುಷ್ಕಾ ಶೆಟ್ಟಿ ಸದ್ಯ ತಮಿಳು ಮತ್ತು ತೆಲುಗು ಚಿತ್ರಜಗತ್ತಿನ ಮಹಾರಾಣಿ. ಇಂತಹ ನಟಿಯರು ಇತ್ತೀಚೆಗೆ ಚಿತ್ರದ ಐಟಂ ಹಾಡುಗಳಲ್ಲಿ ಹೆಜ್ಜೆ ಹಾಕುವುದು ಸಾಮಾನ್ಯವಾಗಿದೆ. ಈ ಐಟಂ ಹಾಡಿಗಾಗಿ ಇವರು ಪಡೆಯುವ ಸಂಭಾವನೆ ಮಾತ್ರ ಯಾವ ಸ್ಟಾರ್ ನಟನಿಗೂ ಕಮ್ಮಿಯಿಲ್ಲ.

ಈಗ ಅನುಷ್ಕಾ ಶೆಟ್ಟಿ ತೆಲುಗು ಚಿತ್ರವೊಂದರಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಲಿದ್ದಾಳಂತೆ. ಆದ್ರೆ, ಈ ಹಾಡಿಗಾಗಿ ಅನುಷ್ಕಾ ಕೇಳಿರುವ ಸಂಭಾವನೆ ಮೊತ್ತ ನೋಡಿ ಇಡೀ ಟಾಲಿವುಡ್ ಹಾಗೂ ಕಾಲಿವುಡ್ ಆಶ್ಚರ್ಯಗೊಂಡಿದ್ದಾರೆ.

ಅಯ್ಯೋ ಪಾಪ.....ಅನುಷ್ಕಾ ಶೆಟ್ಟಿಗೆ ಹೀಗೆ ಆಗಬಾರದಿತ್ತು.!

Anushka Shetty charging RS 3.5 Crores For Item Song

ಹೌದು, ಅನುಷ್ಕಾ ಶೆಟ್ಟಿ ಐಟಂ ನಂಬರ್ ಗೆ ಕುಣಿಯಲು ಬರೋಬ್ಬರಿ 3.5 ಕೋಟಿ ಆಫರ್ ಮಾಡಿದ್ದಾರಂತೆ. ತೆಲುಗಿನ ಸ್ಟಾರ್ ನಟನೊಬ್ಬ ಈ ಚಿತ್ರದಲ್ಲಿ ನಾಯಕರಾಗಿದ್ದಾರಂತೆ.

'ಬಾಹುಬಲಿ' ಚಿತ್ರದ ಸೂಪರ್ ಯಶಸ್ಸಿನ ನಂತರ ಅನುಷ್ಕಾ ಶೆಟ್ಟಿಯ ಬೇಡಿಕೆ ಮತ್ತಷ್ಟು ಹೆಚ್ಚಾಗಿರುವುದು ಇದಕ್ಕೆಲ್ಲಾ ಕಾರಣ ಎನ್ನಲಾಗಿದೆ. ಸದ್ಯ, ಪ್ರಭಾಸ್ ಅಭಿನಯಿಸುತ್ತಿರುವ 'ಸಾಹೋ' ಚಿತ್ರದಲ್ಲಿ ಅನುಷ್ಕಾ ಅಭಿನಯಿಸಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಅನುಷ್ಕಾ ಶೆಟ್ಟಿಯನ್ನ ಈ ಚಿತ್ರದಿಂದ ಕೈಬಿಡಲಾಗಿದೆಯಂತೆ. ಹೀಗಿರುವಾಗ, ಐಟಂ ಹಾಡಿನ ವಿಷ್ಯದಲ್ಲಿ ಇಷ್ಟೊಂದು ಸುದ್ದಿ ಮಾಡುತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ.

ಪ್ರಭಾಸ್ ಚಿತ್ರದಿಂದ ಅನುಷ್ಕಾ ಶೆಟ್ಟಿಗೆ ಕೋಕ್.!

English summary
there is a buzz that Anushka Shetty will be doing an item song very soon in an upcoming Telugu film. she is going to charge a remuneration of 3.5 crore for the song

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada