For Quick Alerts
  ALLOW NOTIFICATIONS  
  For Daily Alerts

  ಮತ್ತೆ ಗಟ್ಟಿ ಪಾತ್ರಕ್ಕೆ ಮರಳಿದ ಅನುಷ್ಕಾ ಶೆಟ್ಟಿ: ರಾಘವ ಲಾರೆನ್ಸ್‌ಗೆ ಧನ್ಯವಾದ!

  |

  ನಟಿ ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗವನ್ನು ಆಳಿದ ನಟಿ. ಸಿನಿಮಾಕ್ಕಾಗಿ ಸ್ಟಾರ್ ನಟರ ಡೆಟ್ಸ್ ಪಡೆದುಕೊಳ್ಳುವುದಕ್ಕಿಂತಲೂ ಮುಂಚೆ ಅನುಷ್ಕಾ ಶೆಟ್ಟಿಯ ಡೇಟ್ಸ್‌ ತೆಗೆದುಕೊಳ್ಳುತ್ತಿದ್ದರು ನಿರ್ಮಾಪಕರು ಅಂಥಹಾ ಸುವರ್ಣಯುಗವನ್ನು ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಕಂಡಿದ್ದಾರೆ.

  ಆದರೆ 'ಬಾಹುಬಲಿ' ಸಿನಿಮಾದ ಬಳಿಕ ಅನುಷ್ಕಾ ಶೆಟ್ಟಿಯ ಬೇಡಿಕೆ ಹಠಾತ್ತನೆ ಕುಸಿದು ಬಿಟ್ಟಿದೆ. ಯಾವ ಮಟ್ಟಿಗೆ ಎಂದರೆ ಅನುಷ್ಕಾ ಶೆಟ್ಟಿಯ ಕೈಲಿ ಯಾವ ಸಿನಿಮಾಗಳೂ ಈಗ ಸದ್ಯಕ್ಕೆ ಇಲ್ಲ. ಅದಕ್ಕೆ ಬೇರೆ-ಬೇರೆ ಕಾರಣಗಳಿವೆ. ಆದರೆ ಇದೀಗ ಅನುಷ್ಕಾ ಶೆಟ್ಟಿ ಮತ್ತೆ ಬೆಳ್ಳಿ ಪರದೆ ಮೇಲೆ ಬರಲು ಸಜ್ಜಾಗಿದ್ದಾರೆ.

  ದೈವೀ ಶಕ್ತಿಯ ಪಾತ್ರಗಳು, ವೀರ ರಾಣಿಯ ಪಾತ್ರಗಳು ಇಂಥಹಾ ಪಾತ್ರಗಳಲ್ಲಿ ಅನುಷ್ಕಾ ಶೆಟ್ಟಿಯನ್ನು ನೋಡುವುದು ತೆಲುಗು ಅಭಿಮಾನಿಗಳಿಗೆ ಇಷ್ಟ. ಇದೀಗ ಅಭಿಮಾನಿಗಳ ಆಸೆ ಈಡೇರಿಸಲೆಂದೇ ಅದೇ ರೀತಿಯ ಪವರ್‌ಫುಲ್ ಪಾತ್ರದ ಮೂಲಕ ಅನುಷ್ಕಾ ಶೆಟ್ಟಿ ತೆಲುಗು ಸಿನಿಮಾ ಪ್ರೇಕ್ಷಕರ ಮುಂದೆ ಮರಳಿ ಬರುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಹೀಗೆ ಬೆಳ್ಳಿ ತೆರೆಗೆ ಮರಳಲು ಕಾರಣ ರಾಘವ ಲಾರೆನ್ಸ್.

  ರಾಘವ ಲಾರೆನ್ಸ್ ನಿರ್ದೇಶನದ 'ನಾಗವಲ್ಲಿ' ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಾಗವಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಬಿಡುಗಡೆ ಆಗಿದ್ದ 'ಆಪ್ತರಕ್ಷಕ' ಸಿನಿಮಾವನ್ನು ತೆಲುಗಿನಲ್ಲಿ 'ನಾಗವಲ್ಲಿ' ಎಂದು ರೀಮೇಕ್ ಮಾಡಲಾಗಿತ್ತು. ಆ ಸಿನಿಮಾದಲ್ಲಿ 'ನಾಗವಲ್ಲಿ'ಯಾಗಿ ಅನುಷ್ಕಾ ಶೆಟ್ಟಿ ನಟಿಸಿದ್ದರು. ಆದರೆ ಅದು ಅತಿಥಿ ಪಾತ್ರವಷ್ಟೆ ಆಗಿತ್ತು. ಇದೀಗ ಅದೇ ಪಾತ್ರವನ್ನಿಟ್ಟುಕೊಂಡು ರಾಘವ ಲಾರೆನ್ಸ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ನಾಗವಲ್ಲಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ.

  ರಾಘವ ಲಾರೆನ್ಸ್‌, ಅನೈಸರ್ಗಿಕ ಶಕ್ತಿಗಳ ಸಿನಿಮಾಗಳನ್ನು ನಿರ್ದೇಶನ ಮಾಡುವುದರಲ್ಲಿ ಖ್ಯಾತರು. ರಾಘವ ಲಾರೆನ್ಸ್ ದೆವ್ವ-ಭೂತದ ಹಲವು ಸಿನಿಮಾಗಳನ್ನು ತೆಗೆಯುತ್ತಾ ಬಂದಿದ್ದಾರೆ. ಅವರೀಗ ನಾಗವಲ್ಲಿ ಪಾತ್ರ ಕುರಿತ ಸಿನಿಮಾ ಮಾಡುತ್ತಿದ್ದು, ಅದಕ್ಕಾಗಿ ಅನುಷ್ಕಾ ಶೆಟ್ಟಿಯನ್ನು ಒಪ್ಪಿಸಿದ್ದು, ಪಾತ್ರಕ್ಕಾಗಿ ದೇಹಾಕಾರ ಬದಲಾವಣೆ ಮಾಡಿಕೊಳ್ಳುವಂತೆ ಸಹ ಅನುಷ್ಕಾರ ಮನವೊಲಿಸಿದ್ದಾರೆ ಎನ್ನಲಾಗುತ್ತಿದೆ.

  ನಟಿ ಅನುಷ್ಕಾ ಶೆಟ್ಟಿ ಬಾಹುಬಲಿ ಸಿನಿಮಾದ ಬಳಿಕ ಏಕೋ ಮಂಕಾಗಿಬಿಟ್ಟರು. ಮೊದಲ 'ಬಾಹುಬಲಿ' ಬಿಡುಗಡೆ ಬಳಿಕ 'ಭಾಗಮತಿ' ಹೆಸರಿನ ಸಿನಿಮಾ ಮಾಡಿದರು. ಸಿನಿಮಾ ಭಾರಿ ಬಜೆಟ್‌ನಲ್ಲಿತ್ತು, ಅಲ್ಲು ಅರ್ಜುನ್ ಸಹ ಅತಿಥಿ ಪಾತ್ರದಲ್ಲಿದ್ದರು. ಆದರೆ ಸಿನಿಮಾ ಓಡಲಿಲ್ಲ. ನಂತರ 'ಬಾಹುಬಲಿ 2' ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು. ಅದಾದ ಬಳಿಕ ಅನುಷ್ಕಾ ನಟಿಸಿದ 'ನಿಶ್ಯಬ್ದಂ' ಅಮೆಜಾನ್‌ನಲ್ಲಿ ಬಿಡುಗಡೆ ಆಯ್ತು ಆದರೆ ಹಿಟ್ ಆಗಲಿಲ್ಲ. ಅದಾದ ಬಳಿಕ ಅನುಷ್ಕಾಗೆ ಯಾವ ಸಿನಿಮಾ ಅವಕಾಶವೂ ದೊರಕಲಿಲ್ಲ. ಅನುಷ್ಕಾ ದೇಹಾಕರ ಹೆಚ್ಚಾಗಿದ್ದು ಸಹ ಇದಕ್ಕೆ ಕಾರಣ ಇರಬಹುದು. ಇದೀಗ ಮಹೇಶ್ ಬಾಬು ನಟಿಸುತ್ತಿರುವ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ನವೀನ್ ಪೋಲಿಶೆಟ್ಟಿ ನಾಯಕರಾಗಿರುವ ಹೊಸ ಸಿನಿಮಾದಲ್ಲಿಯೂ ಅನುಷ್ಕಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

  English summary
  Anushka Shetty may act in Nagavalli movie's sequel directing by Raghaw Lawrence. Anushka Not acted in any movie from last one year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X