For Quick Alerts
  ALLOW NOTIFICATIONS  
  For Daily Alerts

  ಭಾರತಕ್ಕೆ ವಾಪಸ್ ಬಂದ ಕೂಡಲೇ ಸರ್ಪ್ರೈಸ್ ಕೊಡ್ತಾರೆ ಅನುಷ್ಕಾ ಶೆಟ್ಟಿ

  |

  ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ 2015ರಲ್ಲಿ 'ಸೈಜ್ ಜೀರೋ' ಎಂಬ ಸಿನಿಮಾ ಮಾಡ್ತಾರೆ. ಈ ಚಿತ್ರಕ್ಕಾಗಿ ತಮ್ಮ ದೇಹದ ತೂಕವನ್ನ ಹೆಚ್ಚಿಸಿಕೊಳ್ಳುತ್ತಾರೆ. ಯಾರೂ ನಿರೀಕ್ಷೆ ಮಾಡದಂತ ಮೇಕ್ ಓವರ್ ಮಾಡಿಕೊಂಡ ಅನುಷ್ಕಾಗೆ ಭವಿಷ್ಯದಲ್ಲಿ ಅದೇ ಸಮಸ್ಯೆಯಾಗುತ್ತೆ ಎಂಬುದು ಗೊತ್ತಿರಲಿಲ್ಲ ಅನ್ಸುತ್ತೆ.

  ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡ ಅನುಷ್ಕಾ ಶೆಟ್ಟಿ, ಮತ್ತೆ ತೂಕ ಇಳಿಸಿಕೊಳ್ಳಲು ಸ್ವಲ್ಪ ಕಷ್ಟಪಟ್ಟರು. ಹೆಚ್ಚು ಕಡಿಮೆ ತೂಕದಲ್ಲಿ ವ್ಯತ್ಯಾಸ ಕಂಡು ಬಂದರೂ ಮೊದಲಿನಂತೆ ಫಿಟ್ನೆಸ್ ಕಾಪಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ.

  ಹಾಗಾಗಿ, ಅನುಷ್ಕಾ ಅವರಿಗೆ ಕೆಲವು ಪ್ರಾಜೆಕ್ಟ್ ಗಳು ಕೈತಪ್ಪಿರುವ ಉದಾಹರಣೆಯೂ ಇದೆ. ಇದೀಗ, ಅನುಷ್ಕಾ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿದ್ದಾರಂತೆ. ಏನದು? ಮುಂದೆ ಓದಿ....

  ಸ್ಲಿಮ್ ಆಗಲಿದ್ದಾರೆ 'ದೇವಸೇನಾ'

  ಸ್ಲಿಮ್ ಆಗಲಿದ್ದಾರೆ 'ದೇವಸೇನಾ'

  ದೇವಸೇನಾ ಅನುಷ್ಕಾ ಶೆಟ್ಟಿ ತಮ್ಮ ದೇಹದ ತೂಕ ಇಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ವರ್ಕೌಟ್ ಕೂಡ ಮಾಡುತ್ತಿದ್ದಾರಂತೆ. ಸದ್ಯ ವಿದೇಶದಲ್ಲಿರುವ ಅನುಷ್ಕಾ, ಅಲ್ಲಿಂದ ವಾಪಸ್ ಬಂದ್ಮೇಲೆ ಈ ವಿಷಯದಲ್ಲಿ ಸರ್ಪ್ರೈಸ್ ನೀಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

  ಖುಷ್ ಆಗ್ತಾರೆ ಫ್ಯಾನ್ಸ್

  ಖುಷ್ ಆಗ್ತಾರೆ ಫ್ಯಾನ್ಸ್

  ಒಂದು ವೇಳೆ ಅನುಷ್ಕಾ ಶೆಟ್ಟಿ ಅವರು ತಮ್ಮ ದೇಹದ ತೂಕ ಇಳಿಸಿಕೊಂಡು, ಮೊದಲಿನಂತೆ ಫಿಟ್ ಆಗಿ ಕಾಣಿಸಿಕೊಂಡರೆ ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗುತ್ತಾರೆ. ಅನುಷ್ಕಾ ತೂಕದ ಕುರಿತು ಬಂದಿದ್ದ ನೆಗಿಟಿವ್ ಕಾಮೆಂಟ್ ಗಳಿಗೆಲ್ಲಾ ಈ ಮೂಲಕ ಉತ್ತರ ನೀಡಬಹುದು.

  ಯಾವುದು ಸಿನಿಮಾ ಇಲ್ಲ

  ಯಾವುದು ಸಿನಿಮಾ ಇಲ್ಲ

  ಸದ್ಯಕ್ಕೆ ನಿಶಬ್ದಂ ಎಂಬ ಸಿನಿಮಾದಲ್ಲಿ ನಟಿಸಿರುವ ಅನುಷ್ಕಾ ಶೆಟ್ಟಿ ಕೈಯಲ್ಲಿ ಯಾವುದೇ ಹೊಸ ಸಿನಿಮಾ ಇಲ್ಲ. ಈ ಸಿನಿಮಾ ಜನವರಿ ತಿಂಗಳಲ್ಲಿ ತೆರೆಗೆ ಬರಲಿದೆ. ಬಹುಶಃ ಈ ಚಿತ್ರದ ಬಳಿಕ ಅನುಷ್ಕಾ ಶೆಟ್ಟಿ ಮತ್ತೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗಿಯೇ ಕೆಲವು ತಯಾರಿ ಮಾಡಿಕೊಂಡು ವಾಪಸ್ ಆಗುತ್ತಿದ್ದಾರೆ ಎಂಬ ಮಾತಿದೆ.

  ಚಿರು ಜೊತೆ ಅನುಷ್ಕಾ ಶೆಟ್ಟಿ!

  ಚಿರು ಜೊತೆ ಅನುಷ್ಕಾ ಶೆಟ್ಟಿ!

  ನಿಶಬ್ದಂ ಸಿನಿಮಾ ಬಳಿಕ ಯಾವ ಚಿತ್ರಕ್ಕೂ ಸಹಿ ಹಾಕದ ಅನುಷ್ಕಾ ಶೆಟ್ಟಿಗೆ ಎರಡು ಸಿನಿಮಾ ಆಫರ್ ಇದೆಯಂತೆ. ಗೌತಮ್ ವಾಸುದೇವ ಮೆನನ್ ಅವರು ಮಹಿಳಾ ಪ್ರಧಾನ ಚಿತ್ರ ನಿರ್ದೇಶಿಸಲಿದ್ದು, ಆ ಚಿತ್ರಕ್ಕೆ ಅನುಷ್ಕಾ ಅವರನ್ನ ನಾಯಕಿಯನ್ನಾಗಿಸಲು ಚಿಂತಿಸಿದ್ದಾರಂತೆ. ಮತ್ತೊಂದೆಡೆ ಮೆಗಾಸ್ಟಾರ್ ಚಿರಂಜೀವಿ ಮತ್ತು ಕೊರಟಾಲ ಶಿವ ಕಾಂಬಿನೇಷನ್ ಚಿತ್ರಕ್ಕೆ ಅನುಷ್ಕಾ ಹೀರೋಯಿನ್ ಆಗುವ ಸಾಧ್ಯತೆ ಇದೆಯಂತೆ.

  English summary
  South Actress Anushka Shetty is ready to reduce her weight. she will give surprise to her fans after return from foreign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X