»   » ಪ್ರಭಾಸ್ ಚಿತ್ರದಿಂದ ಅನುಷ್ಕಾ ಶೆಟ್ಟಿಗೆ ಕೋಕ್.!

ಪ್ರಭಾಸ್ ಚಿತ್ರದಿಂದ ಅನುಷ್ಕಾ ಶೆಟ್ಟಿಗೆ ಕೋಕ್.!

Posted By:
Subscribe to Filmibeat Kannada

'ಬಾಹುಬಲಿ' ಚಿತ್ರದ ನಂತರ ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಬಗ್ಗೆ ದಿನಕ್ಕೊಂದು ಪ್ರೀತಿಯ ಕಥೆಗಳು ಹುಟ್ಟಿಕೊಂಡಿದ್ದವು. ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ಈ ಜೋಡಿ 'ಸಾಹೋ' ಚಿತ್ರಕ್ಕಾಗಿ ಮತ್ತೆ ಒಂದಾಗಿತ್ತು. ಆದ್ರೆ, ಇದೀಗ ಹರಿದಾಡುತ್ತಿರುವ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ, 'ಸಾಹೋ' ಚಿತ್ರದಿಂದ ಅನುಷ್ಕಾ ಶೆಟ್ಟಿ ಔಟ್ ಆಗಿದ್ದಾರಂತೆ.

ಹೌದು, ಪ್ರಭಾಸ್ ನಾಯಕರಾಗಿರುವ 'ಸಾಹೋ' ಚಿತ್ರದಿಂದ ಅನುಷ್ಕಾ ಶೆಟ್ಟಿ ಅವರನ್ನ ಕೈ ಬಿಡಲಾಗಿದೆ ಎಂಬ ಸುದ್ದಿ ಈಗ ಟಾಲಿವುಡ್ ಮಾಯನಗರಿಯಿಂದ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಸ್ವತಃ ಅನುಷ್ಕಾ ಶೆಟ್ಟಿ ಎನ್ನುತ್ತಿವೆ ಮೂಲಗಳು.

ಕೊನೆಗೂ ಒಂದಾದ್ರು 'ಬಾಹುಬಲಿ' ಜೋಡಿ ಪ್ರಭಾಸ್-ಅನುಷ್ಕಾ ಶೆಟ್ಟಿ

Anushka Shetty out of Prabhas Starrer Saaho

ಎಸ್.ಎಸ್ ರಾಜಮೌಳಿ ನಿರ್ದೇಶನ 'ಬಾಹುಬಲಿ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಅನುಷ್ಕಾ ಶೆಟ್ಟಿ 'ಸಾಹೋ' ಚಿತ್ರದ ಪಾತ್ರಕ್ಕಾಗಿ ಸ್ಲಿಮ್ ಆಗಬೇಕಿತ್ತು. ಯಾಕಂದ್ರೆ, ಈ ಚಿತ್ರದಲ್ಲಿ ಅನುಷ್ಕಾ ಅವರದ್ದು ಬೋಲ್ಡ್ ಪಾತ್ರ. ಹೀಗಾಗಿ, ನೋಡಲು ಹಾಟ್ ಅಂಡ್ ಸೆಕ್ಸಿಯಾಗಿ ಕಾಣಿಸಿಕೊಳ್ಳಬೇಕಿತ್ತು. ಆದ್ರೆ, ಅನುಷ್ಕಾ ಶೆಟ್ಟಿ ಅಗತ್ಯಕ್ಕಿಂತ ಹೆಚ್ಚು ತೂಕ ಇದ್ದಾರಂತೆ. ವರ್ಕೌಟ್ ಮಾಡುತ್ತಿದ್ದರು, 6 ರಿಂದ 7 ಕೆ.ಜಿ ತೂಕ ಹೆಚ್ಚಿದ್ದಾರಂತೆ. ಹೀಗಾಗಿ, ಈ ಚಿತ್ರದಿಂದ ಅವಕಾಶ ಕಳೆದುಕೊಳ್ಳುವ ಭೀತಿಯಲ್ಲಿದ್ದಾರಂತೆ.

ಪ್ರಭಾಸ್ ಜೊತೆ ಮದುವೆ ಸುದ್ದಿ ಹಬ್ಬಿಸಿದವನಿಗೆ ಅನುಷ್ಕಾ ಫುಲ್ ಕ್ಲಾಸ್.!

Anushka Shetty out of Prabhas Starrer Saaho

ಇದೇ ಕಾರಣದಿಂದ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೂ ಅನುಷ್ಕಾ ಶೆಟ್ಟಿ ಗೈರಾಗಿದ್ದರು ಎನ್ನಲಾಗಿದೆ. ಈಗಾಗಲೇ 'ಸಾಹೋ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಶೂಟಿಂಗ್ ನಡೆಯುತ್ತಿದೆ. ಆದ್ರೆ, ಅಂತಿಮ ಕ್ಷಣದಲ್ಲಿ ನಾಯಕಿಯನ್ನ ಬದಲಾಯಿಸುವ ಯೋಚನೆಯಲ್ಲಿದೆಯಂತೆ ಚಿತ್ರತಂಡ. ಒಂದು ವೇಳೆ ಅನುಷ್ಕಾ ಶೆಟ್ಟಿ 'ಸಾಹೋ' ಚಿತ್ರದಿಂದ ಹೊರಗೆ ಬಂದಿದ್ದೇ ಆದರೇ, ಅದಕ್ಕೆ ತೂಕವೇ ಕಾರಣವಾಗಲಿದೆ.

English summary
Actress Anushka Shetty Might Lose out on Prabhas’ Saaho due to weight issues. The Movie Directed By Sujith.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada