ಟೀಂ ಇಂಡಿಯಾ ಆಟಗಾರನ ಜೊತೆ ಅನುಷ್ಕಾ ಶೆಟ್ಟಿ ಮದುವೆ!

Recommended Video

ಪ್ರಭಾಸ್ ಜೊತೆ ಮದುವೆ ಆಗೋದಿಲ್ವಾ ಅನುಷ್ಕಾ | Anushka | Prabhas | Marriage | FIlmibeat Kannada

ತೆಲುಗು ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಸಿನಿಮಾ ವಿಚಾರಕ್ಕಿಂತ ಮದುವೆ ವಿಷ್ಯದಲ್ಲೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಬಾಹುಬಲಿ ನಟ ಪ್ರಭಾಸ್ ಜೊತೆ ಹೆಚ್ಚು ಆತ್ಮೀಯತೆ ಹೊಂದಿರುವ ಅನುಷ್ಕಾ ಶೆಟ್ಟಿ, ಬಹುಶಃ ಅವರನ್ನೇ ಮದುವೆಯಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಆ ಕಡೆ ಪ್ರಭಾಸ್ ಮದುವೆ ತಯಾರಿ ಕೂಡ ನಡೆಯುತ್ತಿದ್ದು ಹುಡುಗಿ ಯಾರು ಎಂದು ಪಕ್ಕಾ ಆಗಿಲ್ಲ. ಹೀಗಾಗಿ, ಒಂದಕ್ಕೊಂದು ಲಿಂಕ್ ಆಗ್ತಿದೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಸಂಬಂಧದ ಬಗ್ಗೆಯೇ ಸ್ಪಷ್ಟನೆ ಸಿಗದ ಅಭಿಮಾನಿಗಳಿಗೆ ಈಗೊಂದು ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ.

ಭಾರತದ ಕ್ರಿಕೆಟ್ ತಂಡದ ಆಟಗಾರನೊಬ್ಬನ ಜೊತೆ ಅನುಷ್ಕಾ ಶೆಟ್ಟಿ ವಿವಾಹವಾಗಲು ಸಜ್ಜಾಗುತ್ತಿದ್ದಾರಂತೆ. ಮುಂದೆ ಓದಿ...

ಅಚ್ಚರಿ ತಂದ ಅನುಷ್ಕಾ ಶೆಟ್ಟಿ ವಿವಾಹದ ಸುದ್ದಿ!

ಅಚ್ಚರಿ ತಂದ ಅನುಷ್ಕಾ ಶೆಟ್ಟಿ ವಿವಾಹದ ಸುದ್ದಿ!

ಇದುವರೆಗೂ ಅನುಷ್ಕಾ ಶೆಟ್ಟಿ ಹೆಸರು ಯಾವ ಕ್ರಿಕೆಟ್ ಆಟಗಾರನ ಜೊತೆಯೂ ಕೇಳಿಬಂದಿಲ್ಲ. ಯಾವ ಪಾರ್ಟಿ, ಕಾರ್ಯಕ್ರಮ, ಡಿನ್ನರ್ ನಲ್ಲೂ ಕ್ರಿಕೆಟ್ ಆಟಗಾರನ ಜೊತೆ ಕಾಣಿಸಿಕೊಂಡಿಲ್ಲ. ಕ್ರಿಕೆಟ್ ಗೂ ನನಗೂ ಸಂಬಂಧವೇ ಇಲ್ಲ ಎಂಬಂತಿರುವ ಅನುಷ್ಕಾ ಶೆಟ್ಟಿ ಈಗ ಕ್ರಿಕೆಟ್ ಆಟಗಾರನ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ನಿಜಕ್ಕೂ ಅಚ್ಚರಿ ತಂದಿದೆ.

ಯಾರು ಆ ಕ್ರಿಕೆಟ್ ಆಟಗಾರ?

ಯಾರು ಆ ಕ್ರಿಕೆಟ್ ಆಟಗಾರ?

ಉತ್ತರ ಭಾರತ ಮೂಲದ ಆಟಗಾರನ ಜೊತೆ ವಿವಾಹವಾಗಲು ಅನುಷ್ಕಾ ಶೆಟ್ಟಿ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ಆಟಗಾರ ಯಾರು ಎಂಬುದರ ಬಗ್ಗೆ ಸಣ್ಣ ಸುಳಿವು ಸಿಕ್ಕಿಲ್ಲ. ಉತ್ತರ ಭಾರತದ ಆಟಗಾರ ಯಾರಿರಬಹುದು ಎಂಬ ಹುಡುಕಾಟ ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ.

ಟೀಂ ಇಂಡಿಯಾದಲ್ಲಿ ಅಂತಹ ಹೆಸರು ಕಾಣ್ತಿಲ್ಲ

ಟೀಂ ಇಂಡಿಯಾದಲ್ಲಿ ಅಂತಹ ಹೆಸರು ಕಾಣ್ತಿಲ್ಲ

ಟೀಂ ಇಂಡಿಯಾದ ಆಟಗಾರ ಎಂದ ತಕ್ಷಣ, ಸದ್ಯದ ಭಾರತೀಯ ತಂಡದಲ್ಲಿ ಬ್ಯಾಚುಲರ್ ಆಗಿರುವ ಹಾಗೂ ಅನುಷ್ಕಾ ಶೆಟ್ಟಿ ವಯಸ್ಸಿಗೆ ಸರಿಹೋಗುವಂತಹ ಆಟಗಾರ ಯಾರಿದ್ದಾರೆ ಎಂದು ನೋಡಿದರೆ, ಯಾವ ಹೆಸರು ಕೂಡ ಕಾಣಿಸುತ್ತಿಲ್ಲ. ಒಂದು ವೇಳೆ ನಿವೃತ್ತಿ ಅಥವಾ ಒಂದೆರೆಡು ಪಂದ್ಯವಾಡಿ ತಂಡದಿಂದ ಹೊರಗುಳಿದಿರುವ ಆಟಗಾರ ಇರಬಹುದು ಎಂದು ನೋಡಿದರೂ ಅಲ್ಲಿಯೂ ಯಾವ ಹೆಸರು ಗೋಚರಿಸುತ್ತಿಲ್ಲ.

ಸದ್ಯಕ್ಕೆ ವದಂತಿ ಅಷ್ಟೇ!

ಸದ್ಯಕ್ಕೆ ವದಂತಿ ಅಷ್ಟೇ!

ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಹಾಗಾಗಿ, ಇದು ಕೇವಲ ವದಂತಿ ಅಷ್ಟೇ. ಸದ್ಯಕ್ಕೆ ನಿಶ್ಯಬ್ದಂ ಎಂಬ ಚಿತ್ರದಲ್ಲಿ ಅನುಷ್ಕಾ ನಟಿಸಿದ್ದು, ಬಿಡುಗಡೆಗೆ ಸಜ್ಜಾಗಿದೆ. ಅದಾದ ಬಳಿಕ ಯಾವ ಚಿತ್ರವೂ ಕೈಯಲ್ಲಿ ಇಲ್ಲ. ಅನುಷ್ಕಾ ಶೆಟ್ಟಿಗೆ ವಯಸ್ಸು 37 ದಾಟಿದೆ. ಮನೆಯಲ್ಲೂ ಮದುವೆ ಮಾಡಲು ಸಿದ್ಧತೆ ನಡೆಯುತ್ತಿದೆ. ಸದ್ಯದಲ್ಲಿ ಈ ಬಗ್ಗೆ ಏನಾದರೂ ಮಾಹಿತಿ ಸಿಗಬಹುದು. ಕಾದುನೋಡೋಣ.

More from Filmibeat

English summary
According to some websites, tollywood actress anushka shetty planning to marry with team indian cricket player? but its not true.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X