ಅನುಷ್ಕಾ ಶೆಟ್ಟಿ ಕುರಿತು ಬ್ರೇಕಿಂಗ್ ನ್ಯೂಸ್: ಇದು ಮದುವೆ ಸುದ್ದಿಯಲ್ಲ.!
'ಬಾಹುಬಲಿ ದಿ ಕನ್ ಕ್ಲೂಷನ್' ಬಿಡುಗಡೆಯಾದ ಬಳಿಕ ಅನುಷ್ಕಾ ಶೆಟ್ಟಿ ಅದ್ಯಾಕೋ ಸೈಲೆಂಡ್ ಆಗಿದ್ದಾರೆ. 'ಭಾಗಮತಿ' ಅಂತ ಒಂದು ಸಿನಿಮಾ ಮಾಡಿದ್ದು ಬಿಟ್ಟರೇ ಅನುಷ್ಕಾ ಸುದ್ದಿ ಬರಿ ಮದ್ವೆ ವಿಚಾರಕ್ಕೆ.
ಪ್ರಭಾಸ್ ಅವರ ಮದುವೆ ಸುದ್ದಿ ಚರ್ಚೆಗೆ ಬಂದ್ರೆ ಅನುಷ್ಕಾ ಶೆಟ್ಟಿ ಹೆಸರು ಚರ್ಚೆಗೆ ಬರುತ್ತೆ. ಇವರಿಬ್ಬರ ಸ್ನೇಹ ಮದ್ವೆಗೆ ದಾರಿಯಾಗಬಹುದು ಎಂಬ ನಿರೀಕ್ಷೆಯಿಂದಲೇ ಅಭಿಮಾನಿಗಳು ಕಾಯ್ತಿದ್ದಾರೆ.
ಸದ್ಯಕ್ಕೆ ಅದು ಆಗುವ ಲಕ್ಷಣ ಕಾಣ್ತಿಲ್ಲ. ಯಾಕಂದ್ರೆ, ಪ್ರಭಾಸ್ ಗೆ ಅವರ ಮನೆಯವರು ಹುಡುಗಿ ಹುಡುಕ್ತಿದ್ದಾರೆ, ಈ ಕಡೆ ಅನುಷ್ಕಾ ಶೆಟ್ಟಿಗೆ ಅವರ ಮನೆಯವರು ಹುಡುಗನ ಹುಡುಕ್ತಿದ್ದಾರೆ. ಇದರ ಮಧ್ಯೆ ಅನುಷ್ಕಾ ಶೆಟ್ಟಿ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಭಾರಿ ಸದ್ದು ಮಾಡ್ತಿದೆ. ಏನದು? ಮುಂದೆ ಓದಿ......

ಇಂಡಸ್ಟ್ರಿಗೆ ಅನುಷ್ಕಾ ಗುಡ್ ಬೈ.!
ಸದ್ಯದ ಸಿನಿ ಇಂಡಸ್ಟ್ರಿಯಲ್ಲಿ ಹರಿದಾಡ್ತಿರುವ ಗುಸು ಗುಸು ಏನಪ್ಪಾ ಅಂದ್ರೆ, ಅನುಷ್ಕಾ ಶೆಟ್ಟಿ ಸಿನಿ ರಂಗಕ್ಕೆ ಗುಡ್ ಬೈ ಹೇಳುವ ಹಾದಿಯಲ್ಲಿದ್ದಾರಂತೆ. ಹಾಗಾಗಿಹಯೇ 'ಭಾಗಮತಿ' ಚಿತ್ರದ ನಂತರ ಯಾವ ಚಿತ್ರವನ್ನ ಅನುಷ್ಕಾ ಮಾಡುತ್ತಿಲ್ಲ ಎನ್ನಲಾಗುತ್ತಿದೆ.

ಮದುವೆ ತಯಾರಿ ನಡೆಯುತ್ತಿದೆ
ಇನ್ನೊಂದೆಡೆ ಅನುಷ್ಕಾ ಶೆಟ್ಟಿ ಕುಟುಂಬದವರು ಮಗಳಿಗೆ ಮದುವೆ ಮಾಡುವ ತಯಾರಿ ನಡೆಸುತ್ತಿದ್ದಾರಂತೆ. ಮಗಳಿಗೆ ತಕ್ಕ ಹುಡುಗನನ್ನ ಹುಡುಕುವಲ್ಲಿ ಕುಟುಂಬಸ್ಥರು ತೊಡಗಿಕೊಂಡಿದ್ದು, ಅನುಷ್ಕಾ ಕೂಡ ಇದಕ್ಕೆ ಸಮ್ಮತಿಸಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ ಸಿನಿಮಾರಂಗದಿಂದ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರಂತೆ.

ಒಳ್ಳೆ ಪ್ರಾಜೆಕ್ಟ್ ಗಾಗಿ ಕಾಯ್ತಿದ್ದಾರೆ
ಆದ್ರೆ, ಅನುಷ್ಕಾ ಶೆಟ್ಟಿ ಕೇಳಿಬರುತ್ತಿರುವ ಈ ಸುದ್ದಿಯಲ್ಲಿ ಬರಿ ಸುಳ್ಳು. ಒಳ್ಳೆಯ ಪ್ರಾಜೆಕ್ಟ್ ಗಾಗಿ ಅನುಷ್ಕಾ ಕಾಯ್ತಿದ್ದಾರೆ. ಹಲವು ಕಥೆಗಳನ್ನ ರಿಜೆಕ್ಟ್ ಮಾಡಿದ್ದಾರೆ. ತಮಗೆ ಇಷ್ಟವಾದ ಪಾತ್ರ ಮತ್ತು ಕಥೆ ಸಿಕ್ಕದ ತಕ್ಷಣ ಸಿನಿಮಾ ಮಾಡ್ತಾರೆ ಎನ್ನುತ್ತಿವೆ ಮೂಲಗಳು.

ರಾಜಮೌಳಿ ಮಗನ ಮದುವೆಯಲ್ಲಿ ಪ್ರಭಾಸ್-ಅನುಷ್ಕಾ
ಇತ್ತೀಚಿಗಷ್ಟೆ ಎಸ್ ಎಸ್ ರಾಜಮೌಳಿ ಮಗನ ಮದುವೆ ನಡೆದಿತ್ತು. ಈ ಮದುವೆ ಸಮಾರಂಭಕ್ಕೆ ಪ್ರಭಾಸ್ ಮತ್ತು ಅನುಷ್ಕಾ ಒಟ್ಟಿಗೆ ಹೋಗಿದ್ದರು. ನಮ್ಮಿಬ್ಬರ ಮಧ್ಯೆ ಮದುವೆ ಪ್ಲಾನ್ ಇಲ್ಲ ಎಂದು ಖಚಿತ ಪಡಿಸಿಕೊಂಡಿದ್ದಾರೆ. ಹಾಗಿದ್ದರೂ ಇವರಿಬ್ಬರ ಜೋಡಿ, ಭೇಟಿ, ಒಟ್ಟಿಗೆ ನೋಡಿದಾಗ ಅದನ್ನ ನಂಬುತ್ತಿಲ್ಲ ಅಭಿಮಾನಿಗಳು.


Click it and Unblock the Notifications











