ಅನುಷ್ಕಾ ಶೆಟ್ಟಿಗೆ ಮತ್ತೆ ಅದೇ ಸಮಸ್ಯೆ: ಹೊಸ ಸಿನಿಮಾ ಮತ್ತೆ ಮುಂದೂಡಿಕೆ

ಅನುಷ್ಕಾ ಶೆಟ್ಟಿ, ದಕ್ಷಿಣ ಭಾರತದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ಸ್ಟಾರ್ ಹೀರೋಗಳಿಗೆ ಅವರದ್ದೇ ಆದ ಪ್ರತ್ಯೇಕ ಅಭಿಮಾನಿ ಬಳಗ ಇರುವಂತೆ ಅನುಷ್ಕಾ ಶೆಟ್ಟಿಗೂ ಸಹ ಅವರದ್ದೇ ಆದ ದೊಡ್ಡ ಅಭಿಮಾನಿ ವರ್ಗವಿದೆ.

ಆದರೆ 'ಬಾಹುಬಲಿ 2' ಸಿನಿಮಾದ ಬಳಿಕ ಏಕೋ ಅನುಷ್ಕಾ ಶೆಟ್ಟಿ ಸಿನಿಮಾ ರಂಗದಿಂದ ಬಹು ದೂರವಾಗಿಬಿಟ್ಟರು. 'ಬಾಹುಬಲಿ 2' ಅಂಥಹಾ ಭರ್ಜರಿ ಹಿಟ್ ಸಿನಿಮಾ ಕೊಟ್ಟರೂ ಸಹ ಅನುಷ್ಕಾ ಆ ನಂತರ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ.

'ಬಾಹುಬಲಿ 2' ಸಿನಿಮಾ ಬಿಡುಗಡೆ ಆದ ಬೆನ್ನಲ್ಲೆ 'ಭಾಗಮತಿ' ಸಿನಿಮಾ ಬಿಡುಗಡೆ ಆಯಿತು. ಆ ಸಿನಿಮಾ ಭಾಗಷಃ ಯಶಸ್ಸು ಕಂಡಿತು. ಆ ಬಳಿಕ 'ಸೈ ರಾ ನರಸಿಂಹಾ ರೆಡ್ಡಿ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಬಳಿಕ 'ನಿಶ್ಯಬ್ಧಂ' ಹೆಸರಿನ ಸಿನಿಮಾದಲ್ಲಿ ನಟಿಸಿದರಾದರೂ ಆ ಸಿನಿಮಾ ಸಹ ದೊಡ್ಡ ಯಶಸ್ಸು ಗಳಿಸಲಿಲ್ಲ. 2020 ರಲ್ಲಿ ಬಂದ 'ನಿಶ್ಯಬ್ಧಂ' ಬಳಿಕ ಇನ್ನಾವುದೇ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಟಿಸಿಲ್ಲ.

2020ರ 'ನಿಶ್ಯದ್ಭಂ' ಕೊನೆಯ ಸಿನಿಮಾ

2020ರ 'ನಿಶ್ಯದ್ಭಂ' ಕೊನೆಯ ಸಿನಿಮಾ

ಅನುಷ್ಕಾ ಶೆಟ್ಟಿಗೆ ಈಗಲೂ ಸಿನಿಮಾದಲ್ಲಿ ನಟಿಸಲು ಬಹಳ ಒಲವಿದೆ, ಆದರೆ ಆಕೆಗೆ ಸಮಸ್ಯೆ ಆಗುತ್ತಿರುವುದು ದೇಹ ತೂಕ ಎನ್ನಲಾಗುತ್ತಿದೆ. 2020ರಲ್ಲಿ ಬಿಡುಗಡೆ ಆದ 'ನಿಶ್ಯಬ್ಧಂ' ಸಿನಿಮಾದಲ್ಲಿ ತುಸು ದಪ್ಪಗಾದಂತೆ ಕಂಡಿದ್ದರು ಅನುಷ್ಕಾ ಶೆಟ್ಟಿ. ಆ ನಂತರವೂ ಅನುಷ್ಕಾಗೆ ಹಲವು ಅವಕಾಶಗಳು ಸಿಕ್ಕರೂ ಸಹ ಅನುಷ್ಕಾ ಶೆಟ್ಟಿ ನಟಿಸುವ ಮನಸ್ಸು ಮಾಡಿರಲಿಲ್ಲ. ಅದಕ್ಕೆ ಕಾರಣ ಅವರ ದೇಹ ತೂಕ ಎನ್ನಲಾಗಿತ್ತು.

ಹೊಸ ಸಿನಿಮಾಕ್ಕೆ ಸಹಿ ಹಾಕಿರುವ ಅನುಷ್ಕಾ ಶೆಟ್ಟಿ

ಹೊಸ ಸಿನಿಮಾಕ್ಕೆ ಸಹಿ ಹಾಕಿರುವ ಅನುಷ್ಕಾ ಶೆಟ್ಟಿ

ಎರಡು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದ ಅನುಷ್ಕಾ ಶೆಟ್ಟಿ, 2021 ರಲ್ಲಿ ಹೊಸ ಸಿನಿಮಾ ಒಂದಕ್ಕೆ ಸಹಿ ಹಾಕಿದ್ದರು. ನವೀನ್ ಪೋಲಿಶೆಟ್ಟಿ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳಲಿದ್ದರು. ಈ ಸಿನಿಮಾವನ್ನು ಪ್ರತಿಷ್ಟಿತ ಯುವಿ ಕ್ರಿಯೇಶನ್ಸ್ ನಿರ್ಮಾಣ ಮಾಡಲಿತ್ತು. ಆದರೆ ಈಗ ಮತ್ತೆ ಆ ಸಿನಿಮಾದಿಂದ ಅನುಷ್ಕಾ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಮತ್ತೆ ಮೂರು ತಿಂಗಳು ಕೇಳಿದ್ದಾರೆ

ಮತ್ತೆ ಮೂರು ತಿಂಗಳು ಕೇಳಿದ್ದಾರೆ

ಅನುಷ್ಕಾ ಶೆಟ್ಟಿ, ತಮ್ಮ ದೇಹತೂಕ ಇಳಿಸಿಕೊಳ್ಳುವಲ್ಲಿ ನಿರತರಾಗಿದ್ದರು. ಈ ಪ್ರಕ್ರಿಯೆಯಲ್ಲಿ ಬಹುಮಟ್ಟಿಗೆ ಯಶಸ್ವಿಯೂ ಆಗಿದ್ದರು. ಆದರೆ ಕೋವಿಡ್ ಎರಡನೇ ಅಲೆಯ ಕಾರಣ ಚಿತ್ರೀಕರಣ ತಡವಾಗಿ, ಅನುಷ್ಕಾ ಶೆಟ್ಟಿ ಮತ್ತೆ ದೇಹತೂಕ ಹೆಚ್ಚಿಸಿಕೊಂಡಿದ್ದರು. ಈಗ ಚಿತ್ರೀಕರಣ ಪ್ರಾರಂಭ ಮಾಡುವ ಉತ್ಸಾಹದಲ್ಲಿ ಚಿತ್ರತಂಡ ಇದೆಯಾದರೂ ಅನುಷ್ಕಾ ಶೆಟ್ಟಿ ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಇನ್ನೂ ಮೂರು ತಿಂಗಳ ಕಾಲಾವಕಾಶ ಕೇಳಿದ್ದಾರಂತೆ. ಹಾಗಾಗಿ ಅನುಷ್ಕಾಗಾಗಿ ಇನ್ನಷ್ಟು ದಿನ ಚಿತ್ರತಂಡ ಕಾಯುವ ಪರಿಸ್ಥಿತಿ ಉದ್ಭುವಿಸಿದೆ.

40 ದಾಟಿದ ಹಲವು ನಟಿಯರಿದ್ದಾರೆ

40 ದಾಟಿದ ಹಲವು ನಟಿಯರಿದ್ದಾರೆ

ಅನುಷ್ಕಾ ಶೆಟ್ಟಿಗೆ ಈಗ 40 ವರ್ಷ ವಯಸ್ಸು. 40 ದಾಟಿದ ಹಲವು ನಟಿಯರು ಈಗಲೂ ಚಿತ್ರರಂಗದಲ್ಲಿ ನಾಯಕಿ ಪಾತ್ರಗಳಲ್ಲಿಯೇ ಮಿಂಚುತ್ತಿದ್ದಾರೆ. ಶಿಲ್ಪಾ ಶೆಟ್ಟಿ, ನಯನತಾರಾ (37), ಐಶ್ವರ್ಯಾ ರೈ, ಕರೀನಾ ಕಪೂರ್, ಕತ್ರಿನಾ ಕೈಫ್ (38) ಇನ್ನೂ ಹಲವು ನಟಿಯರು ಈಗಲೂ ನಾಯಕ ನಟಿಯರಾಗಿಯೇ ಕೆಲಸ ಮಾಡುತ್ತಿದ್ದಾರೆ. ಅದು ಮಾತ್ರವೇ ಅಲ್ಲದೆ, ನಾಯಕಿಯರಿಗೆ ಈಗ ಅವರ ವಯಸ್ಸಿಗೆ ತಕ್ಕಂತೆ ಮಹಿಳಾ ಪ್ರಧಾನ ಪಾತ್ರಗಳು ಸಹ ಸಾಕಷ್ಟು ದೊರಕುತ್ತಿವೆ. ಅನುಷ್ಕಾ ಶೆಟ್ಟಿ ನಟಿಸುವ ಮನಸ್ಸು ಮಾಡಬೇಕಿದೆ ಅಷ್ಟೆ.

More from Filmibeat

English summary
Actress Anushka Shetty struggling to reduce her body weight. She signed a new movie with Naveen Polishetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X