For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್, ಹುಡುಗ ಬೆಂಗಳೂರಿನವರೇ!

  |

  ಸಿನಿಮಾ ರಂಗದಲ್ಲಿ ಹಲವು ತಾರೆಯರ ಬಗ್ಗೆ ಸದಾ ಒಂದು ಪ್ರಶ್ನೆ ಇದ್ದೇ ಇರುತ್ತೆ. ಅದು ಮತ್ತೇನು ಅಲ್ಲ. ಅವರ ಮದುವೆ ಯಾವಾಗ ಎನ್ನುವುದು. ಕೆಲವು ಸ್ಟಾರ್ ನಟ, ನಟಿಯರು ಸಿನಿಮಾರಂಗದಲ್ಲಿ ದಶಕಗಳೇ ಕಳೆದರೂ ಮದುವೆ ಆಗಿಲ್ಲ. ಅದರಲ್ಲಿ ನಟಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು.

  ಅನುಷ್ಕಾ ಶೆಟ್ಟಿ ಅಂತು ತಮ್ಮ ಮದುವೆ ವಿಚಾರಕ್ಕೆ ಹತ್ತಾರು ಬಾರಿ ಹೆಡ್ ಲೈನ್ ಆಗಿದ್ದಾರೆ. ಅವರ ಜೊತೆ ಮದುವೆ ಅಂತೆ, ಇವರ ಜೊತೆ ಮದುವೆ ಅಂತೆ ಡೇಟಿಂಗ್‌ನಲ್ಲಿ ಇದ್ದಾರಂತೆ, ಹೀಗೆ ಹತ್ತಾರು ಸುದ್ದಿಗಳು ಆಗಾಗ ಹರಿದಾಡುತ್ತಲೇ ಇರುತ್ತವೆ.

  ನಾಯಕಿಯ ಮಾಜಿ ಪತಿ ಜೊತೆ ಅನುಷ್ಕಾ ಶೆಟ್ಟಿ ಸಿನಿಮಾ: ಶೀಘ್ರದಲ್ಲೇ ಸ್ವೀಟ್ ನ್ಯೂಸ್?ನಾಯಕಿಯ ಮಾಜಿ ಪತಿ ಜೊತೆ ಅನುಷ್ಕಾ ಶೆಟ್ಟಿ ಸಿನಿಮಾ: ಶೀಘ್ರದಲ್ಲೇ ಸ್ವೀಟ್ ನ್ಯೂಸ್?

  ಈಗ ಮತ್ತೊಮ್ಮೆ ಮದುವೆ ವಿಚಾರಕ್ಕೇನೆ ನಟಿ ಅನುಷ್ಕಾ ಶೆಟ್ಟಿ ಸುದ್ದಿ ಆಗಿದ್ದಾರೆ. ಅನುಷ್ಕಾ ಶೆಟ್ಟಿಗೆ ಮದುವೆ ಫಿಕ್ಸ್ ಆಗಿದೆಯಂತೆ. ಈ ಬಾರಿ ಗಾಸಿಪ್ ಅಲ್ಲ, ಇದು ನಿಜ ಎನ್ನಲಾಗುತ್ತಿದೆ. ಹುಡುಗ ಯಾರು, ಮದುವೆ ಯಾವಾಗ ಎನ್ನುವ ಬಗ್ಗೆ ಮುಂದೆ ಓದಿ...

  ಅನುಷ್ಕಾ ಶೆಟ್ಟಿ ಮದುವೆ!

  ಅನುಷ್ಕಾ ಶೆಟ್ಟಿ ಮದುವೆ!

  ಹೌದು ನಟಿ ಅನುಷ್ಕಾ ಶೆಟ್ಟಿ ತಮ್ಮ ಮದುವೆ ವಿಚಾರಕ್ಕಾಗಿ ಮತ್ತೆ ಸುದ್ದಿ ಆಗಿದ್ದಾರೆ. ಆದರೆ ಈ ಬಾರಿ ಅನುಷ್ಕಾ ಶೆಟ್ಟಿ ಮದುವೆ ಆಗುವುದು ಖಚಿತ ಎನ್ನಲಾಗುತ್ತಿದೆ. ಎಷ್ಟೋ ಬಾರಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಸುದ್ದಿಗಳು ಹರಿದಾಡಿವೆ. ಆದರೆ ಯಾವುದೂ ಕೂಡ ನಿಜವಾಗಿಲ್ಲ. ಆದರೆ ಈ ಬಾರಿ ಮದುವೆ ನಿಗದಿಯಾಗಿದೆ, ಸದ್ಯದಲ್ಲೇ ಮದುವೆ ದಿನಾಂಕ ಕೂಡ ಪ್ರಕಟವಾಗಲಿದೆ ಎನ್ನುವ ಸುದ್ದಿ ತೆಲುಗು ಸಿನಿಮಾರಂಗದಲ್ಲಿ ಹರಿದಾಡುತ್ತಿವೆ.

  'ಬಾಹುಬಲಿ' ಬಳಿಕ ಮತ್ತೆ ಒಂದಾಗ್ತಾರೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ: ಸಿನಿಮಾ ಯಾವುದು?'ಬಾಹುಬಲಿ' ಬಳಿಕ ಮತ್ತೆ ಒಂದಾಗ್ತಾರೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ: ಸಿನಿಮಾ ಯಾವುದು?

  ಬೆಂಗಳೂರು ಮೂಲದ ಉದ್ಯಮಿ!

  ಬೆಂಗಳೂರು ಮೂಲದ ಉದ್ಯಮಿ!

  ಅನುಷ್ಕಾ ಶೆಟ್ಟಿ ಟಾಲಿವುಡ್ ಸೂಪರ್ ಸ್ಟಾರ್ ನಟಿ. ಅನುಷ್ಕಾ ಶೆಟ್ಟಿ ಜೊತೆಗೆ ಚಿತ್ರರಂಗದ ಹಲವು ಹೆಸರುಗಳು ಆಗಾಗ ತಳಕುಹಾಕಿಕೊಂಡಿವೆ. ಆದರೆ ಅನುಷ್ಕಾ ಶೆಟ್ಟಿ ಸಿನಿಮಾರಂಗದವರನ್ನ ಮದುವೆಯಾಗುತ್ತಿಲ್ಲ. ಬದಲಿಗೆ ಉದ್ಯಮಿಯ ಹಿಡಿಯುತ್ತಿದ್ದಾರೆ. ಹೌದು ಅನುಷ್ಕಾ ಶೆಟ್ಟಿ ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆಯಾಗಲಿದ್ದಾರಂತೆ. ಹುಡುಗ ಬೆಂಗಳೂರು ಮೂಲದ ಉದ್ಯಮಿಯಾಗಿದ್ದು ಮನೆಯವರೇ ನೋಡಿ ಮದುವೆ ನಿಶ್ಚಯ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ

  ಇದೇ ವರ್ಷ ಸ್ವೀಟಿ ಮದುವೆ!

  ಇದೇ ವರ್ಷ ಸ್ವೀಟಿ ಮದುವೆ!

  ಅನುಷ್ಕಾ ಶೆಟ್ಟಿ ಮದುವೆ ವಿಚಾರ ಬಂದಾಗ ಹೀಗೆ ಬಂದು ಹಾಗೆ ಮಾಯವಾದ ಗಾಳಿಸುದ್ದಿಗಳೇ ಹೆಚ್ಚು. ಆದರೆ ಈಗ ಅನುಷ್ಕಾ ಶೆಟ್ಟಿ ಮದುವೆ ಇದೇ ವರ್ಷದಲ್ಲಿ ನೆರವೇರಲಿದೆ ಎನ್ನಲಾಗುತ್ತಿದೆ. ಮದುವೆಗೆ ಸಿದ್ಧತೆಯನ್ನು ಕೂಡ ಕುಟುಂಬಸ್ಥರು ಶುರು ಮಾಡಿಕೊಂಡಿದ್ದಾ ಎನ್ನಲಾಗಿದೆ. ಹಾಗಾಗಿ ಈ ವರ್ಷ ಮುಗಿಯುವುದರೊಳಗೆ ಅನುಷ್ಕಾ ಶೆಟ್ಟಿ ವಿವಾಹ ಜೀವನಕ್ಕೆ ಕಾಲಿಡಲಿದ್ದಾರಂತೆ.

  ಪ್ರಭಾಸ್ ಜೊತೆ ಅನುಷ್ಕಾ ಮದುವೆ!

  ಪ್ರಭಾಸ್ ಜೊತೆ ಅನುಷ್ಕಾ ಮದುವೆ!

  ಪ್ರಭಾಸ್ ಜೊತೆಗೆ ಅನುಷ್ಕಾ ಶೆಟ್ಟಿ ಹೆಸರು ಸದಾ ಕೇಳಿಬರುತ್ತಿತ್ತು. ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಜೋಡಿ ಹಿಟ್ ಜೋಡಿ ಎನಿಸಿಕೊಂಡಿತ್ತು. ಅಲ್ಲಿಂದಲೇ ಇವರ ಮದುವೆ ಗಾಸಿಪ್ ಹಬ್ಬಿದೆ. ಇನ್ನು ಬಾಹುಬಲಿ ಸಿನಿಮಾದ ನಂತರ ಇವರಿಬ್ಬರು ಮದುವೆ ಆಗಿ ಬಿಡುತ್ತಾರೆ ಎನ್ನುವ ಬಗ್ಗೆ ಹಲವು ಬಾರಿ ಸುದ್ದಿಗಳು ಹರಿದಾಡಿದೆ. ಆದರೆ ಅನುಷ್ಕಾ ಶೆಟ್ಟಿ ಇದೀಗ ಉದ್ಯಮಿಯ ಕೈ ಹಿಡಿಯಲು ಸಜ್ಜಾಗಿದ್ದಾರೆ.

  English summary
  Anushka Shetty To Get Married Soon With Bengaluru Based Businessman, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X