»   » ಕನ್ನಡದ ಕುವರನೊಂದಿಗೆ ನಟಿ ಅನುಷ್ಕಾ ಶೆಟ್ಟಿ ಮದುವೆ?

ಕನ್ನಡದ ಕುವರನೊಂದಿಗೆ ನಟಿ ಅನುಷ್ಕಾ ಶೆಟ್ಟಿ ಮದುವೆ?

Posted By:
Subscribe to Filmibeat Kannada

'ಜೇಜಮ್ಮ'ನನ್ನ ನೆನೆಸಿಕೊಳ್ಳದೇ ನಿದ್ದೆಯಿಂದ ಎದ್ದೇಳಲು ಒದ್ದಾಡುವ ಹುಡುಗರಿಗೆ ಇದೋ ಇಲ್ಲಿದೆ ಶಾಕಿಂಗ್ ನ್ಯೂಸ್. ಇಲ್ಲಿವರೆಗೂ ಸಿಂಗಲ್ ಆಗಿದ್ದ ಮಂಗಳೂರು ಮೂಲದ ಯೋಗಾ ಟೀಚರ್, ನಟಿ ಅನುಷ್ಕಾ ಶೆಟ್ಟಿ, ಇದೀಗ ಮಿಂಗಲ್ ಆಗುವ ಹಾದಿಯಲ್ಲಿದ್ದಾರೆ!

ನಂಬಿದ್ರೆ ನಂಬಿ, ಸದ್ಯದಲ್ಲೇ ಕಾಲಿವುಡ್ ಮತ್ತು ಟಾಲಿವುಡ್ ನ ಬಹುಬೇಡಿಕೆಯ ನಟಿ ಅನುಷ್ಕಾ ಶೆಟ್ಟಿ ಹಸೆಮಣೆ ಏರಲಿದ್ದಾರೆ. ಅದು ಯಾರ ಜೊತೆ ಅನ್ನೋದೂ ಕೂಡ ಬ್ರೇಕಿಂಗ್ ನ್ಯೂಸೇ ಕೇಳಿ....

Anushka Shetty1

ಮದುವೆ ತಯಾರಿಯಲ್ಲಿರುವ ಅನುಷ್ಕಾ ಶೆಟ್ಟಿಯನ್ನ ಕೈಹಿಡಿಯುತ್ತಿರುವ ಗಂಡು 'ಕನ್ನಡಿಗ'. ಅದ್ರರಲ್ಲೂ ಬೆಂಗಳೂರಲ್ಲೇ ನೆಲೆಸಿರುವ ಪ್ರಖ್ಯಾತ ಉದ್ಯಮಿ. ಇಷ್ಟನ್ನ ಬಿಟ್ರೆ, ಆ ಉದ್ಯಮಿಯ ಪೂರ್ವಾಪರ ಇನ್ನೂ ಗುಟ್ಟಾಗಿದೆ.!

ನಿಮಗೆ ತಿಳಿದಿರುವಂತೆ ಅನುಷ್ಕಾ ಕುಟುಂಬದ ಕೆಲ ಬಂಧುಗಳು ಬೆಂಗಳೂರಲ್ಲೇ ನೆಲೆಸಿದ್ದಾರೆ. ಅನುಷ್ಕಾ ಕುಟುಂಬ ಒಡೆತನದ ಸ್ವಂತ ಸ್ಟಾರ್ ಹೊಟೇಲ್ ಮತ್ತು ರೆಸ್ಟೋರೆಂಟ್ ಕೂಡ ಇಲ್ಲೇ ಇದೆ. ಹೀಗಾಗಿ ಬೆಂಗಳೂರು ಹುಡುಗನನ್ನೇ ಮದುವೆಯಾದರೆ, ಮುಂದಕ್ಕೆ ಉದ್ಯಮವನ್ನ ನೋಡಿಕೊಳ್ಳುವ ಕೆಲಸ ಸಲೀಸಾಗಿ ಸಾಗಬಹುದು ಅನ್ನುವುದು ಅನುಷ್ಕಾ ಪ್ಲಾನ್. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅನುಷ್ಕಾ ಶೆಟ್ಟಿ ನಾಯಕಿ?]

Anushka Shetty2

ನಟಿಯಾಗಿ ಇನ್ನೂ ಎತ್ತರದಲ್ಲಿರುವಾಗಲೇ ಮದುವೆ ಬೇಕಾ?! ಅನ್ನುವ ಪ್ರಶ್ನೆ ನಿಮಗೆ ಮೂಡಬಹುದು. ಆದ್ರೆ ನಿಮಗೆ ಗೊತ್ತಿಲ್ಲದೇ ಇರುವ ಮತ್ತೊಂದು ವಿಷಯ ಹೇಳ್ತೀವಿ ಕೇಳಿ. ಮೊನ್ನೆಮೊನ್ನೆಯಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ರೋಮ್ಯಾನ್ಸ್ ಮಾಡಿದ್ದ ಅನುಷ್ಕಾ ಕೈಯಲ್ಲಿ ಸದ್ಯಕ್ಕಿರುವುದು ಮೂರೇ ಚಿತ್ರಗಳು.!

ಅಜಿತ್ ಜೊತೆ ನಟಿಸಿರುವ 'ಎನ್ನೈ ಅರಿಂದಾಲ್' ರಿಲೀಸ್ ಗೆ ರೆಡಿಯಾಗಿದೆ. ಹಾಗೆ, 'ಬಾಹುಬಲಿ' ಮತ್ತು 'ರುದ್ರಮಾದೇವಿ' ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಇವುಗಳನ್ನ ಬಿಟ್ಟರೆ, ಅನುಷ್ಕಾ ಯಾವುದೇ ಹೊಸ ಆಫರ್ ಗಳನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಸದ್ಯಕ್ಕೆ ಅನುಷ್ಕಾ ಶೆಟ್ಟಿ ಖಾಲಿ ಇದ್ದಾರೆ. [ಮದುವೆ ಬಗ್ಗೆ ಮೌನ ಮುರಿದ ನಟಿ ಅನುಷ್ಕಾ ಶೆಟ್ಟಿ]

Anushka Shetty3

ಮತ್ತೆ, ಅನುಷ್ಕಾರನ್ನ ನೀವು ಸೂಕ್ಷ್ಮವಾಗಿ ಗಮನಿಸಿದರೆ, ದಿನೇ ದಿನೇ ಅವರ ತೂಕ ಕೂಡ ಹೆಚ್ಚಾಗುತ್ತಿದೆ. ಗ್ಲಾಮರಸ್ ಪಾತ್ರಗಳಿಂದ ಕೊಂಚ ದೂರ ಸರಿಯುತ್ತಿರುವ ಅನುಷ್ಕಾ, ವೈಯುಕ್ತಿಕ ಬದುಕಿನ ಬಗ್ಗೆ ಹೆಚ್ಚಾಗಿ ಗಮನ ಹರಿಸುತ್ತಿರುವ ಹಾಗಿದೆ. [ಗಾಂಧಿನಗರದ 'ಲೇಡಿ ಸಿಂಗಂ' ಆಗ್ತಾರಾ ಅನುಷ್ಕಾ ಶೆಟ್ಟಿ?]

ಮದುವೆ ಸುದ್ದಿ ಬರೀ ಗಾಸಿಪ್ ಅಂತ ತಳ್ಳಿಹಾಕಿದ್ದರೂ, ಅನುಷ್ಕಾ ಸಿನಿಮಾಗಳನ್ನ ಒಪ್ಪಿಕೊಳ್ಳದೇ ಇರುವುದಕ್ಕೆ ಬೇರೆ ಕಾರಣವೇನಿದೆಯೋ ನಮಗಂತೂ ಗೊತ್ತಿಲ್ಲ. ಆದ್ರೆ, ಅನುಷ್ಕಾ ರನ್ನ ಬಲ್ಲ ಮೂಲಗಳ ಪ್ರಕಾರ ಸದ್ಯದಲ್ಲೇ ಸಿಹಿ ಸುದ್ದಿಯೊಂದನ್ನ ಅನುಷ್ಕಾ ಕೊಡ್ತಾರೆ. ಅದು ಪಡ್ಡೆಗಳಿಗೆ ಹಾಗಲಕಾಯಿ ತಿಂದಷ್ಟೇ ಕಹಿಯಾದ್ರೆ, ನಾವೇನೂ ಮಾಡೋಕ್ಕಾಗಲ್ಲ...! (ಏಜೆನ್ಸೀಸ್)

English summary
Tollywood leading lady Anushka Shetty is all set to marry a Kannadiga. There is a buzz that Anushka Shetty is tying knot to a Bangalore based Businessman.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X