For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟನೊಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಅನುಷ್ಕಾ ಶೆಟ್ಟಿ: ಭರ್ಜರಿ ಕಮ್‌ಬ್ಯಾಕ್

  |

  ನಟಿಯೊಬ್ಬರು ನಟನಂತೆ ದೊಡ್ಡ ಮಟ್ಟದ ಅಭಿಮಾನಿ ವರ್ಗ ಪಡೆಯುವುದು ಬಹಳ ಅಪರೂಪ. ಆದರೆ ಆ ರೀತಿಯ ಅಪರೂಪದ ನಟಿ ಅನುಷ್ಕಾ ಶೆಟ್ಟಿ.

  ಕರ್ನಾಟಕ ಮೂಲದ ಅನುಷ್ಕಾ ಶೆಟ್ಟಿ ತೆಲುಗು, ತಮಿಳು ಸಿನಿಮಾಗಳಲ್ಲಿ ಬಹಳ ದೊಡ್ಡ ಹೆಸರು. 2005 ರಿಂದಲೂ ನಟಿಸುತ್ತಿರುವ ಅನುಷ್ಕಾ ಶೆಟ್ಟಿ ಈ ಹದಿನೇಳು ವರ್ಷಗಳಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಮೂಲಕ ದೊಡ್ಡ ಮಟ್ಟದ ಅಭಿಮಾನಿ ವರ್ಗವನ್ನು ಸಂಪಾದಿಸಿದ್ದಾರೆ.

  ವಯಸ್ಸಿನ ಕಾರಣಕ್ಕೆ ಅಥವಾ ಇತರೆ ಕಾರಣಗಳಿಂದಾಗಿ ಅನುಷ್ಕಾ ಶೆಟ್ಟಿ ಸಿನಿಮಾದಿಂದ ದೂರ ಉಳಿದಿದ್ದಾರೆ. 2020ರ ಆರಂಭದಲ್ಲಿ ಬಿಡುಗಡೆ ಆದ 'ನಿಶ್ಯಬ್ಧಂ' ಸಿನಿಮಾದ ಬಳಿಕ ಯಾವುದೇ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಟಿಸಿಲ್ಲ. ಇದು ಅನುಷ್ಕಾ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೆ ಇದೀಗ ಬಂದಿರುವ ಹೊಸ ಸುದ್ದಿಯ ಪ್ರಕಾರ, ಸ್ಟಾರ್ ನಟನ ಸಿನಿಮಾ ಮೂಲಕ ಅನುಷ್ಕಾ ಶೆಟ್ಟಿ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಲಿದ್ದಾರಂತೆ!

  ಸ್ಟಾರ್ ನಟನೊಟ್ಟಿಗೆ ಅನುಷ್ಕಾ ಸಿನಿಮಾ

  ಸ್ಟಾರ್ ನಟನೊಟ್ಟಿಗೆ ಅನುಷ್ಕಾ ಸಿನಿಮಾ

  ಹೌದು, ನಟಿ ಅನುಷ್ಕಾ ಶೆಟ್ಟಿ ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಅದೂ ಮೆಗಾಸ್ಟಾರ್ ಚಿರಂಜೀವಿ ಜೊತೆ! ಮೆಗಾಸ್ಟಾರ್ ನಟಿಸಲಿರುವ ಸಿನಿಮಾ ಒಂದರಲ್ಲಿ ಅನುಷ್ಕಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಇದೀಗ ಚಿರಂಜೀವಿ ನಟಿಸುತ್ತಿರುವ 'ಆಚಾರ್ಯ' ಸಿನಿಮಾದಲ್ಲಿ ಕಾಜಲ್ ನಾಯಕಿ. ಆ ಬಳಿಕ ನಟಿಸಲಿರುವ ಎರಡು ಸಿನಿಮಾಗಳಲ್ಲಿ ಒಂದರಲ್ಲಿ ತಮನ್ನಾ ಭಾಟಿಯಾ ನಾಯಕಿಯಾದರೆ ಮತ್ತೊಂದರಲ್ಲಿ ಶ್ರುತಿ ಹಾಸನ್ ನಾಯಕಿ.

  ನಾಯಕ-ನಾಯಕಿ ಆಗಿ ಇದೇ ಮೊದಲು!

  ನಾಯಕ-ನಾಯಕಿ ಆಗಿ ಇದೇ ಮೊದಲು!

  ಅನುಷ್ಕಾ ಶೆಟ್ಟಿ ಹಾಗೂ ಮೆಗಾಸ್ಟಾರ್ ಚಿರಂಜೀವಿ ಒಟ್ಟಿಗೆ ಸಿನಿಮಾದಲ್ಲಿ ನಟಿಸಿದ್ದಾರಾದರೂ ಪರಸ್ಪರ ನಾಯಕ-ನಾಯಕಿ ಆಗಿ ಈವರೆಗೆ ನಟಿಸಿಲ್ಲ. 2006ರಲ್ಲಿ ಚಿರಂಜೀವಿ ನಟಿಸಿದ್ದ 'ಸ್ಟಾಲಿನ್' ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ವಿಶೇಷ ಹಾಡೊಂದರಲ್ಲಿ ನರ್ತಿಸಿದ್ದರು. ಬಳಿಕ 2015 ರಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದ 'ರುದ್ರಮ್ಮ ದೇವಿ' ಸಿನಿಮಾಕ್ಕೆ ಚಿರಂಜೀವಿ ಧ್ವನಿ ನೀಡಿದ್ದರು. ಬಳಿಕ 2019ರಲ್ಲಿ ಬಿಡುಗಡೆ ಆದ ಚಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ರಾಣಿ ಲಕ್ಷ್ಮೀಭಾಯಿ ಪಾತ್ರದಲ್ಲಿ ನಟಿಸಿದ್ದರು.

  ಅನುಷ್ಕಾ ಶೆಟ್ಟಿ ಹೊಸ ಸಿನಿಮಾಗಳು

  ಅನುಷ್ಕಾ ಶೆಟ್ಟಿ ಹೊಸ ಸಿನಿಮಾಗಳು

  ನಟಿ ಅನುಷ್ಕಾ ಶೆಟ್ಟಿ, ಹೊಸ ನಟ ನವೀನ್ ಪೊಲಿಶೆಟ್ಟಿ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಗಟ್ಟಿಯಾಗಿ ಹರಿದಾಡಿದ್ದವು. ಆದರೆ ಆ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಜೊತೆಗೆ ಮತ್ತೊಂದು ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲಿಯೂ ಅನುಷ್ಕಾ ನಟಿಸಲಿದ್ದಾರೆ ಎನ್ನಲಾಗಿತ್ತು. ಸಿನಿಮಾಕ್ಕೆ 'ಸೈಲೆನ್ಸ್' ಹೆಸರು ಸಹ ಇಡಲಾಗಿದೆ. ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಠ' ಸಿನಿಮಾದಲ್ಲಿಯೂ ವಿಶೇಷ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಅನುಷ್ಕಾ ಶೆಟ್ಟಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  ಚಿರಂಜೀವಿ ಮುಂದಿನ ಸಿನಿಮಾಗಳು

  ಚಿರಂಜೀವಿ ಮುಂದಿನ ಸಿನಿಮಾಗಳು

  ಇನ್ನು ನಟ ಮೆಗಾಸ್ಟಾರ್ ಚಿರಂಜೀವಿ ರಾಜಕೀಯದಿಂದ ದೂರವಾಗಿ ಸಿನಿಮಾಗಳ ಮೇಲೆ ಮಾತ್ರವೇ ಪೂರ್ಣ ಗಮನ ಕೇಂದ್ರೀಕರಿಸಿದ್ದಾರೆ. ಚಿರಂಜೀವಿ ನಟನೆ 'ಆಚಾರ್ಯ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದರ ಜೊತೆಗೆ ಇನ್ನೆರಡು ಸಿನಿಮಾಗಳನ್ನು ಚಿರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಮಲಯಾಳಂನಲ್ಲಿ ಮೋಹನ್‌ಲಾಲ್ ನಟಿಸಿದ್ದ 'ಲುಸಿಫರ್' ಸಿನಿಮಾದ ರೀಮೇಕ್‌ನಲ್ಲಿ ಚಿರು ನಟಿಸುತ್ತಿದ್ದಾರೆ. ಇದಕ್ಕೆ 'ಗಾಡ್ ಫಾದರ್' ಎಂದು ಹೆಸರಿಡಲಾಗಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಬಳಿಕ 'ಭೊಲಾ ಶಂಕರ್' ಹೆಸರಿನ ಸಿನಿಮಾದಲ್ಲಿಯೂ ಚಿರು ನಟಿಸುತ್ತಿದ್ದು, ಇದು ತಮಿಳಿನ ಸಿನಿಮಾದ ರೀಮೇಕ್ ಆಗಿದೆ. ಸಿನಿಮಾದಲ್ಲಿ ಕೀರ್ತಿ ಸುರೇಶ್ ಚಿರಂಜೀವಿ ಅವರ ಸಹೋದರಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಕೆ.ಎಸ್.ರವೀಂದ್ರ ನಟನೆಯ ಹೊಸ ಸಿನಿಮಾದಲ್ಲಿಯೂ ಚಿರಂಜೀವಿ ನಟಿಸಲಿದ್ದಾರೆ.

  English summary
  Actress Anushak Shetty will act along with Megastar Chiranjeevi in his upcoming movie. Anushka not acted in any movie after Nishyambham which is released in 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X