For Quick Alerts
  ALLOW NOTIFICATIONS  
  For Daily Alerts

  'ಕಲಿ' ಚಿತ್ರದಲ್ಲಿ ಶಿವಣ್ಣ-ಸುದೀಪ್ ಜೊತೆ 'ಪವರ್ ಸ್ಟಾರ್' ಪಂಚ್.!

  By Harshitha
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಮೊಟ್ಟ ಮೊದಲ ಬಾರಿಗೆ 'ಕಲಿ' ಚಿತ್ರದ ಮೂಲಕ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾದ ಬಗ್ಗೆ ಹೈ ಎಕ್ಸ್ ಪೆಕ್ಟೇಷನ್ಸ್ ಇದೆ.

  ಸ್ಯಾಂಡಲ್ ವುಡ್ ನ ಈ ಇಬ್ಬರು ಸ್ಟಾರ್ ನಟರಿಗೆ ತಕ್ಕ ಹೀರೋಯಿನ್ ಹುಡುಕಾಟದಲ್ಲಿ ನಿರ್ದೇಶಕ 'ಜೋಗಿ' ಪ್ರೇಮ್ ಇದ್ದಾರೆ. ಇದೇ ಗ್ಯಾಪ್ ನಲ್ಲಿ 'ಕಲಿ' ಅಡ್ಡದಿಂದ ಹೊಸ ಖಬರ್ ಹೊರಬಿದ್ದಿದೆ. [ಆರಂಭಿಕ ಹಂತದಲ್ಲಿಯೇ ರೆಕಾರ್ಡ್ ಬ್ರೇಕ್ ಮಾಡಿದ 'ಕಲಿ']

  ಅದು ಮತ್ತದೇ ನಾಯಕಿ ವಿಚಾರಕ್ಕೆ ಅಂತ ತಿಳಿಯಬೇಡಿ. ಇದು 'ಪವರ್' ಹೌಸ್ ಗೆ ಸಂಬಂಧ ಪಟ್ಟ ಸುದ್ದಿ. ಕಂಪ್ಲೀಟ್ ಮ್ಯಾಟರ್ ಇಲ್ಲಿದೆ. ಸ್ಲೈಡ್ ಗಳಲ್ಲಿ ಓದಿ....

  'ಕಲಿ' ಚಿತ್ರಕ್ಕೆ ಹೊಸ ಎಂಟ್ರಿ!

  'ಕಲಿ' ಚಿತ್ರಕ್ಕೆ ಹೊಸ ಎಂಟ್ರಿ!

  ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಜೊತೆ 'ಕಲಿ' ಚಿತ್ರದಲ್ಲಿ ಮತ್ತೊಬ್ಬರು 'ಸ್ಟಾರ್' ಇದ್ದಾರೆ. ಅದ್ಯಾರು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

  'ಕಲಿ' ಚಿತ್ರದಲ್ಲಿ ಪವರ್ ಸ್ಟಾರ್?

  'ಕಲಿ' ಚಿತ್ರದಲ್ಲಿ ಪವರ್ ಸ್ಟಾರ್?

  'ಕಲಿ' ಅಡ್ಡದಿಂದ ಬಂದಿರುವ ಮಾಹಿತಿ ಪ್ರಕಾರ, ಚಿತ್ರದಲ್ಲಿ ಶಿವಣ್ಣ ಹಾಗೂ ಸುದೀಪ್ ಜೊತೆ ಪುನೀತ್ ರಾಜ್ ಕುಮಾರ್ ಕೂಡ ಇರಲಿದ್ದಾರೆ. [ಶಿವಣ್ಣ-ಸುದೀಪ್ ರವರ 'ಕಲಿ' ಚಿತ್ರದ ನಾಯಕಿ ಇವರೇನಾ?]

  ಪುನೀತ್ ರಾಜ್ ಕುಮಾರ್ ಪಾತ್ರವೇನು?

  ಪುನೀತ್ ರಾಜ್ ಕುಮಾರ್ ಪಾತ್ರವೇನು?

  'ಕಲಿ' ಚಿತ್ರದಲ್ಲಿ ಶಿವಣ್ಣ ಹಾಗೂ ಸುದೀಪ್ ಪಾತ್ರಗಳಂತೆಯೇ, ಪುನೀತ್ ರಾಜ್ ಕುಮಾರ್ ರವರಿಗೂ ಪ್ರಮುಖ ಪಾತ್ರ ಇದೆ ಅಂತ ಹೇಳಲಾಗಿದೆ. ['ಕಲಿ'ಗೆ ಪೂಜೆ ಆಯ್ತು ಇನ್ನು ಶೂಟಿಂಗ್ ಹಬ್ಬ ಶುರು ಕಣ್ರೀ]

  ಪ್ರೇಮ್ ಗೆ ಪುನೀತ್ ಆಪ್ತ!

  ಪ್ರೇಮ್ ಗೆ ಪುನೀತ್ ಆಪ್ತ!

  ಈಗಾಗಲೇ ನಿರ್ದೇಶಕ ಪ್ರೇಮ್ ಜೊತೆ ಪುನೀತ್ ರಾಜ್ ಕುಮಾರ್ 'ರಾಜ್, ದಿ ಶೋ ಮ್ಯಾನ್' ಸಿನಿಮಾ ಮಾಡಿದ್ದಾರೆ. ಪ್ರೇಮ್ ಮೇಲೆ ಭರವಸೆ ಇಟ್ಟು ಶಿವಣ್ಣ ಕಾಲ್ ಶೀಟ್ ನೀಡಿದಂತೆ ಅಪ್ಪು ಕೂಡ 'ಹ್ಹೂಂ' ಅಂತ ತಲೆ ಅಲ್ಲಾಡಿಸಿದ್ದಾರೆ ಎನ್ನಲಾಗಿದೆ.

  ಸುದೀಪ್ ಗೂ ಅಪ್ಪು ಅಚ್ಚುಮೆಚ್ಚು!

  ಸುದೀಪ್ ಗೂ ಅಪ್ಪು ಅಚ್ಚುಮೆಚ್ಚು!

  ಪುನೀತ್ ರಾಜ್ ಕುಮಾರ್ ಹಾಗೂ ಸುದೀಪ್ ನಡುವೆ ಉತ್ತಮ ಅನುಬಂಧ ಇದೆ. ಅಪ್ಪು ಅಭಿನಯದ 'ಚಕ್ರವ್ಯೂಹ' ಚಿತ್ರಕ್ಕೆ ಸುದೀಪ್ ಇತ್ತೀಚೆಗಷ್ಟೇ ವಾಯ್ಸ್ ಓವರ್ ನೀಡಿ ಸದ್ದು ಮಾಡಿದ್ದರು. ಈಗ ಅಪ್ಪು-ಸುದೀಪ್ ತೆರೆ ಹಂಚಿಕೊಳ್ಳುವ ಸಮಯ ಬಂದಿದೆ. [ಚಿತ್ರಗಳು ; ಕಿಚ್ಚ ಸುದೀಪ್ - ಪುನೀತ್ ಒಂದಾಗೇಬಿಟ್ಟರು ನೋಡಿ.!]

  ಪ್ರೇಮ್ ತಲೆಯಲ್ಲಿ ಮತ್ತೊಂದು ಪ್ಲಾನ್ ಇದೆ!

  ಪ್ರೇಮ್ ತಲೆಯಲ್ಲಿ ಮತ್ತೊಂದು ಪ್ಲಾನ್ ಇದೆ!

  'ಕಲಿ' ಚಿತ್ರದಲ್ಲಿ ಶಿವಣ್ಣನ ಜೊತೆ ಪುನೀತ್ ಬರಲು ಒಪ್ಪಿಕೊಂಡಿದ್ದಾರೆ. ಹೇಗಾದರೂ ಮಾಡಿ ರಾಘವೇಂದ್ರ ರಾಜ್ ಕುಮಾರ್ ರನ್ನೂ ಒಪ್ಪಿಸಿಬಿಟ್ಟರೆ, ಅಣ್ಣಾವ್ರ ಮಕ್ಕಳನ್ನ ತೆರೆ ಮೇಲೆ ಮೊದಲ ಬಾರಿಗೆ ಒಂದು ಮಾಡಿದ ಖ್ಯಾತಿ ಪ್ರೇಮ್ ಗೆ ಸಲ್ಲುತ್ತೆ.

  ರವಿವರ್ಮ ಸಿನಿಮಾ ಮಾಡುತ್ತಿದ್ದಾರೆ!

  ರವಿವರ್ಮ ಸಿನಿಮಾ ಮಾಡುತ್ತಿದ್ದಾರೆ!

  ಶಿವಣ್ಣ, ರಾಘಣ್ಣ ಹಾಗೂ ಪುನೀತ್ ರನ್ನ ಮೊದಲು ತೆರೆ ಮೇಲೆ ಒಂದು ಮಾಡಲು ಹೊರಟವರು ಸಾಹಸ ನಿರ್ದೇಶಕ ರವಿವರ್ಮ. ಅವರ ಪ್ರಾಜೆಕ್ಟ್ ಇನ್ನೂ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ಅದಕ್ಕೂ ಮುನ್ನ, 'ಕಲಿ' ಸೆಟ್ಟೇರಿದರೆ 'ಪ್ರಚಾರ ಪ್ರಿಯ' ಪ್ರೇಮ್ ಗೆ ಹಬ್ಬದೂಟ ಮಾಡಿದ ಹಾಗೇ ಲೆಕ್ಕ.

  ದುಡ್ಡು ಸುರಿಯಲು ನಿರ್ಮಾಪಕರು ರೆಡಿ

  ದುಡ್ಡು ಸುರಿಯಲು ನಿರ್ಮಾಪಕರು ರೆಡಿ

  ನಿರ್ಮಾಪಕ ಸಿ.ಆರ್.ಮನೋಹರ್ 'ಕಲಿ' ಚಿತ್ರಕ್ಕಾಗಿ ಎಷ್ಟು ಬೇಕಾದರೂ ದುಡ್ಡು ಸುರಿಯಲು ರೆಡಿಯಿದ್ದಾರೆ. ಅದನ್ನ ಪ್ರೇಮ್ ಹೇಗೆ ಸದ್ಬಳಿಕೆ ಮಾಡಿಕೊಳ್ಳುತ್ತಾರೋ, ನೋಡ್ಬೇಕು.

  ಇಂದು ಏಪ್ರಿಲ್ 1..! ದಯವಿಟ್ಟು ಗಮನಿಸಿ!

  ಇಂದು ಏಪ್ರಿಲ್ 1..! ದಯವಿಟ್ಟು ಗಮನಿಸಿ!

  'ಕಲಿ' ಚಿತ್ರದ ಬಗ್ಗೆ ಈ ಲೇಖನ ಓದಿದ ಸಮಸ್ತ ಓದುಗರಿಗೂ ಮೂರ್ಖರ ದಿನಾಚರಣೆಯ ಶುಭಾಶಯಗಳು. ನಿರ್ದೇಶಕ ಪ್ರೇಮ್ ಇನ್ನೂ 'ಕಲಿ' ಚಿತ್ರದ ಕಥೆ ಕಟ್ಟುವಲ್ಲಿ ಬಿಜಿಯಾಗಿದ್ದಾರೆ. ಹೀಗಾಗಿ ಯಾರ್ಯಾರಿಗೆ ಯಾವ ಪಾತ್ರಗಳು ಅನ್ನೋದಿನ್ನೂ ಫೈನಲ್ ಆಗಿಲ್ಲ. ಸದ್ಯಕ್ಕೆ 'ಕಲಿ' ಚಿತ್ರಕ್ಕೂ ಪುನೀತ್ ರಾಜ್ ಕುಮಾರ್ ಗೂ ಸಂಬಂಧ ಇಲ್ಲ. ಮುಂದಕ್ಕೆ 'ಗಿಮಿಕ್ ರಾಜ' ಪ್ರೇಮ್ ರಿಂದ ಆದರೂ ಆಗಬಹುದು. ಈಗಿನ ಮಟ್ಟಕ್ಕೆ 'ಏಪ್ರಿಲ್ ಫೂಲ್' ಪ್ರಯುಕ್ತ ಇದು ಕಾಲ್ಪನಿಕ ಲೇಖನ ಅಷ್ಟೆ.

  English summary
  Filmibeat Kannada wishes all Readers 'A Very Happy All Fool's Day'. On this occasion, here is an article about Power Star Puneeth Rajkumar and Kannada Movie 'Kali' which is fictitious. Have a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X