For Quick Alerts
  ALLOW NOTIFICATIONS  
  For Daily Alerts

  ಗಾಂಧಿನಗರದಲ್ಲಿ ಮತ್ತೆ 'ಪದ್ಮಾವತಿ' ಪ್ರತ್ಯಕ್ಷ: ಪುನೀತ್ ಜೊತೆಗೆ ರಮ್ಯಾ ನಟನೆ!

  By Harshitha
  |

  ಕಡೆಗೂ ತಮ್ಮ ಅಭಿಮಾನಿಗಳಿಗೆ ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್ ರಮ್ಯಾ ಸಿಹಿ ಸುದ್ದಿ ನೀಡಿದ್ದಾರೆ. ತೆರೆಮೇಲೆ ಮತ್ತೆ ಮಿನುಗಲು ಗಾಂಧಿನಗರದ ಪದ್ಮಾವತಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ರಾಜಕೀಯಕ್ಕೆ ಎಂಟ್ರಿಕೊಟ್ಮೇಲೆ, ರಮ್ಯಾ ಮೇಡಂ ಬಣ್ಣ ಹಚ್ಚಲಿಲ್ಲ. ಗಾಂಧಿನಗರದ ಕಡೆ ಮುಖ ಮಾಡಲಿಲ್ಲ. ಮಂಡ್ಯದಲ್ಲಿ ಎಂ.ಪಿ ಗದ್ದುಗೆಗೆ ಏರಿದ್ಮೇಲೆ, ಅಲ್ಲೇ ಸೆಟಲ್ ಆಗುವ ಸೂಚನೆ ಕೊಟ್ಟ ರಮ್ಯಾ 'ಇನ್ಮೇಲೆ ಸಿನಿಮಾ ಮಾಡಲ್ಲ' ಅಂತ ಹೇಳಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದರು.

  'ಆರ್ಯನ್' ಹಾಗೂ 'ನಾಗರಹಾವು' ಸಿನಿಮಾಗಳ ಬಳಿಕ ರಮ್ಯಾ ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಸಿಲ್ವರ್ ಸ್ಕ್ರೀನ್ ಮೇಲೆ ರಮ್ಯಾ ರನ್ನ ಮಿಸ್ ಮಾಡಿಕೊಳ್ಳುತ್ತಿರುವ ಫ್ಯಾನ್ಸ್ ಗೆ ಗುಡ್ ನ್ಯೂಸ್ ಇಲ್ಲಿದೆ, ಓವರ್ ಟು ಫೋಟೋ ಸ್ಲೈಡ್ಸ್....

  ಮತ್ತೆ ಬಣ್ಣ ಹಚ್ಚಲಿರುವ ರಮ್ಯಾ

  ಮತ್ತೆ ಬಣ್ಣ ಹಚ್ಚಲಿರುವ ರಮ್ಯಾ

  ನಟಿ ರಮ್ಯಾ ಮತ್ತೆ ಬಣ್ಣ ಹಚ್ಚಲಿದ್ದಾರೆ. ಬೆಳ್ಳಿತೆರೆ ಮೇಲೆ ನಟಿ ರಮ್ಯಾ ಮತ್ತೆ ಮಿನುಗಲಿದ್ದಾರೆ. ಸಿನಿಮಾವೊಂದರಲ್ಲಿ ನಟಿಸಲು ರಮ್ಯಾ ಒಪ್ಪಿಕೊಂಡಿದ್ದಾರೆ.

  ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯಾ ಕೂದಲಿಗೆ ಬಿತ್ತು ಕತ್ತರಿಸ್ಯಾಂಡಲ್ ವುಡ್ ಪದ್ಮಾವತಿ ರಮ್ಯಾ ಕೂದಲಿಗೆ ಬಿತ್ತು ಕತ್ತರಿ

  ಪುನೀತ್ ಜೊತೆಗೆ ರಮ್ಯಾ ನಟನೆ

  ಪುನೀತ್ ಜೊತೆಗೆ ರಮ್ಯಾ ನಟನೆ

  ರಮ್ಯಾ ಮತ್ತೆ ಬಣ್ಣ ಹಚ್ಚಲು ಒಪ್ಪಿಕೊಂಡಿರುವುದು ಪುನೀತ್ ರಾಜ್ ಕುಮಾರ್ ಚಿತ್ರಕ್ಕಾಗಿ.! ಹಾಗ್ನೋಡಿದ್ರೆ, ರಮ್ಯಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದೇ ಅಪ್ಪು ಅಭಿನಯದ 'ಅಭಿ' ಸಿನಿಮಾದ ಮೂಲಕ. ಪುನೀತ್ ಜೊತೆಗೆ 'ಅಭಿ', 'ಅಕಾಶ್', 'ಅರಸು' ಸಿನಿಮಾಗಳಲ್ಲಿ ನಟಿಸಿರುವ ರಮ್ಯಾ ಇದೀಗ ಮತ್ತೊಂದು ಚಿತ್ರದಲ್ಲಿ ಅಪ್ಪು ಜೊತೆಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.

  ರಮ್ಯಾ ಬರ್ತಡೇ ಸ್ಪೆಷಲ್ : ಅಬ್ಬಾ..'ಮೋಹಕ ತಾರೆ' ಮೇಲೆ ಅಭಿಮಾನಿಗಳಿಗೆ ಎಷ್ಟೊಂದು ಪ್ರೀತಿ.!ರಮ್ಯಾ ಬರ್ತಡೇ ಸ್ಪೆಷಲ್ : ಅಬ್ಬಾ..'ಮೋಹಕ ತಾರೆ' ಮೇಲೆ ಅಭಿಮಾನಿಗಳಿಗೆ ಎಷ್ಟೊಂದು ಪ್ರೀತಿ.!

  'ನಟ ಸಾರ್ವಭೌಮ' ಚಿತ್ರದಲ್ಲಿ ರಮ್ಯಾ

  'ನಟ ಸಾರ್ವಭೌಮ' ಚಿತ್ರದಲ್ಲಿ ರಮ್ಯಾ

  ಪವನ್ ಒಡೆಯರ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರದಲ್ಲಿ ರಮ್ಯಾ ಆಕ್ಟ್ ಮಾಡಲಿದ್ದಾರೆ. ಸಿನಿಮಾದ ವಿಶೇಷ ಪಾತ್ರವೊಂದರಲ್ಲಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ. ಅಂದ್ಹಾಗೆ, ಈ ಚಿತ್ರದಲ್ಲಿ ಪುನೀತ್ ಗೆ ರಚಿತಾ ರಾಮ್ ನಾಯಕಿ.

  Happy All Fool's Day

  Happy All Fool's Day

  ರಮ್ಯಾ ಮತ್ತೆ ಬಣ್ಣ ಹಚ್ಚಲಿರುವ ಸುದ್ದಿ ಓದಿದ ಎಲ್ಲರಿಗೂ Happy All Fool's Day. ರಾಜಕೀಯದಲ್ಲಿ ಅದರಲ್ಲೂ ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿರುವ ರಮ್ಯಾ ಅವರಿಗೆ ನಟಿಸಲು ಪುರುಸೊತ್ತು ಇಲ್ಲ. ಆದ್ರೆ, ಅಭಿಮಾನಿಗಳು ಮಾತ್ರ ರಮ್ಯಾ ರನ್ನ ತೆರೆಮೇಲೆ ಮಿಸ್ ಮಾಡಿಕೊಳ್ಳುತ್ತಿರುವುದು ಸತ್ಯ. ಮುಂದೊಂದು ದಿನ ರಮ್ಯಾ ಮತ್ತೆ ಬಣ್ಣ ಹಚ್ಚಿದರೆ, ಅಭಿಮಾನಿಗಳಿಗೇ ಖುಷಿ. ಅದರಲ್ಲೂ ಅಪ್ಪು ಜೊತೆಗೆ ತೆರೆ ಹಂಚಿಕೊಂಡರೆ ಫ್ಯಾನ್ಸ್ ಗೆ ಅದಕ್ಕಿಂತ ಸಿಹಿ ಸುದ್ದಿ ಮತ್ತೊಂದಿಲ್ಲ.!

  English summary
  Filmibeat Kannada wishes all Readers 'A Very Happy All Fool's Day'. On this occasion, here is an article about Ramya's comeback in Puneeth Rajkumar starrer 'Nata Sarvabhauma' which is fictitious. Have a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X