For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಎ.ಆರ್ ಮುರುಗದಾಸ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ದಕ್ಷಿಣದ ಸೂಪರ್ ಸ್ಟಾರ್ಸ್

  |

  ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿರುವ ಬಗ್ಗೆ ಗೊತ್ತಿರುವ ವಿಚಾರ. ಬಿಗ್ ಬಜೆಟ್ ನ ಸ್ಟಾರ್ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ದಕ್ಷಿಣ ಭಾರತದ ಅನೇಕ ಚಿತ್ರಗಳು ಪ್ಯಾನ್ ಇಂಡಿಯಾ ರಿಲೀಸ್ ಗೆ ಸಿದ್ಧತೆ ನಡೆಸುತ್ತಿವೆ. ಇದೀಗ ತಮಿಳಿನ ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ಕೂಡ ಪ್ಯಾನ್ ಇಂಡಿಯಾ ಸಿನಿಮಾ ವಿಚಾರವಾಗಿ ಸುದ್ದಿಯಾಗಿದ್ದಾರೆ.

  ಇತ್ತೀಚಿಗಷ್ಟೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ತೆಲುಗು ಸ್ಟಾರ್ ನಟ ರಾಮ್ ಚರಣ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್ ಮಾಡಿದ ಬೆನ್ನಲ್ಲೇ ಈಗ ಮುರುಗದಾಸ್ ಕೂಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಬಿಗ್ ಬಜೆಟ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಮುರುಗದಾಸ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದಕ್ಷಿಣದ ಇಬ್ಬರು ಸೂಪರ್ ಸ್ಟಾರ್ಸ್ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  ಅದು ಮತ್ಯಾರು ಅಲ್ಲ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಮತ್ತು ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಇಬ್ಬರೂ ಮುರುಗದಾಸ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಈಗಾಗಲೇ ಇಬ್ಬರೂ ಸ್ಟಾರ್ ಕಲಾವಿದರ ಜೊತೆ ಮಾತುಕತೆ ನಡೆಸಿದ್ದು, ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ಚಿತ್ರ ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು ಸದ್ಯದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ.

  ಆದರೆ ಈ ಬಗ್ಗೆ ಮುರುಗದಾಸ್ ಆಗಲಿ ಅಥವಾ ಸ್ಟಾರ್ ಕಲಾವಿದರ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಘೋಷಣೆಯಾದ ಬಳಿಕವಷ್ಟೆ ಅಧಿಕೃತವಾಗಲಿದೆ.

  ಇನ್ನು ಎ.ಆರ್ ಮುಗುರದಾಸ್ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಕೇಳಿ ಬಂದಿತ್ತು. ಆದರೆ ಆ ಸಿನಿಮಾ ಘೋಷಣೆಯಾಗುವ ಮೊದಲೇ ಕಮಲ್ ಹಾಸನ್ ಮತ್ತು ಮಹೇಶ್ ಬಾಬು ಜೊತೆಗಿನ ಪ್ಯಾನ್ ಇಂಡಿಯಾ ಸಿನಿಮಾ ಸದ್ದು ಮಾಡುತ್ತಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

  ಕೊಟ್ಟ ಮಾತನ್ನು ಎರಡೇ ದಿನದಲ್ಲಿ ಉಳಿಸಿಕೊಂಡ ಯಶ್ | Filmibeat Kannada

  ಅಂದಹಾಗೆ ಕಮಲ್ ಹಾಸನ್ ಸದ್ಯ ಲೋಕೇಶ್ ಕನಗರಾಜ್ ನಿರ್ದೇಶನದ ವಿಕ್ರಮ್ ಸಿನಿಮಾದಲ್ಲಿ ನಿರತಾಗಿದ್ದಾರೆ. ಇತ್ತ ಮಹೇಶ್ ಬಾಬು ಸರ್ಕಾರು ಪಾರಿ ಪಾಟ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಎಲ್ಲಾ ಪ್ರಾಜೆಕ್ಟ್ ಮುಗಿದ ಬಳಿಕ ಎ.ಆರ್ ಮುರುಗದಾಸ್ ನಿರ್ದೇಶನದ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ ಕಮಲ್ ಮತ್ತು ಮಹೇಶ್ ಬಾಬು ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಲಿದೆ.

  English summary
  AR Murugadoss plans to cast Mahesh babu and Kamal Haasan for Multli starrer movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X