ಶಿವಣ್ಣ ಹಾಗೂ ಉಪೇಂದ್ರ ನಟನೆಯ '45' ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್?
ಐಪಿಎಲ್ ಭರಾಟೆ ನಡುವೆ ಸಿನಿಮಾಗಳನ್ನು ಬಿಡುಗಡೆ ಮಾಡುವುದೇ ಕಷ್ಟ ಎನ್ನುವಂತಾಗಿದೆ. ದೊಡ್ಡ ಸಿನಿಮಾಗಳ ಬಿಡುಗಡೆಯನ್ನು ಎರಡು ತಿಂಗಳು ಮುಂದೂಡಲಾಗಿದೆ. ಬೇರೆ ವಿಧಿಯಿಲ್ಲದೇ ಕೆಲವರು ಸಿನಿಮಾ ತೆರೆಗೆ ತರುವ ಸಾಹಸ ಮಾಡುತ್ತಿದ್ದಾರೆ. ಆದರೆ ಐಪಿಎಲ್ ಮುಗಿದ ಬಳಿಕ ಥಿಯೇಟರ್‌ಗಳಲ್ಲಿ ಸಿನಿಮಾ ಟ್ರಾಫಿಕ್ ಆಗಲಿದೆ.
ದೊಡ್ಡ ಸಿನಿಮಾಗಳ ಬಿಡುಗಡೆಗೆ ಲಾಂಗ್ ವೀಕೆಂಡ್, ಫೆಸ್ಟಿವಲ್ ವೀಕೆಂಡ್ ಮೇಲೆ ಫಿಲ್ಮ್ ಮೇಕರ್ಸ್ ಕಣ್ಣಿಟ್ಟಿದ್ದಾರೆ. ಆದರೆ ಹೀಗೆ ಎಲ್ಲರೂ ಒಟ್ಟೊಟ್ಟಿಗೆ ಸಿನಿಮಾ ರಿಲೀಸ್ ಮಾಡುವ ಪ್ರಯತ್ನಕ್ಕೆ ಮುಂದಾದರೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆ. ಕೆಲವೊಮ್ಮೆ ಅನಿವಾರ್ಯವಾಗಿ ಸಿನಿಮಾ ತೆರೆಗೆ ತರುವುದನ್ನು ಮುಂದೂಡಬೇಕಾಗುತ್ತದೆ. ಸದ್ಯ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ವೀಕೆಂಡ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

ಆಗಸ್ಟ್ 15, ಶುಕ್ರವಾರ. ಅಂದರೆ 3 ದಿನಗಳ ರಜೆ ವೀಕೆಂಡ್. ಹಾಗಾಗಿ ಬಾಲಿವುಡ್ 'ವಾರ್- 2' ಹಾಗೂ ತಮಿಳಿನ 'ಕೂಲಿ' ಸಿನಿಮಾಗಳನ್ನು ಆ ದಿನ ತೆರೆಗೆ ತರುವ ಪ್ರಯತ್ನ ನಡೀತಿದೆ. ಈಗಾಗಲೇ 'ಕೂಲಿ' ಸಿನಿಮಾವನ್ನು ಆಗಸ್ಟ್ 15ಕ್ಕೆ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಆದರೆ ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್- 2' ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆ ಆಗಿಲ್ಲ.
'ವಾರ್- 2' ಚಿತ್ರದ ಸಣ್ಣ ಪೋಸ್ಟರ್ ಕೂಡ ಈವರೆಗೆ ಹೊರ ಬಂದಿಲ್ಲ. ಹಾಗಾಗಿ ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರುವುದು ಇನ್ನು ಖಚಿತವಾಗಿಲ್ಲ. ಈ ಎರಡೂ ಸಿನಿಮಾಗಳ ನಡುವೆ ಕನ್ನಡದ '45' ಸಿನಿಮಾ ಬಿಡುಗಡೆ ಬಗ್ಗೆ ಇದೀಗ ಗೊಂದಲ ಶುರುವಾಗಿದೆ. ಅರ್ಜುನ್ ಜನ್ಯಾ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಈ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಟೀಸರ್ ಸೂಪರ್ ಹಿಟ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ತರುವ ತಯಾರಿ ನಡೀತಿದೆ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಎಂದು ಬಹಳ ಹಿಂದೆಯೇ ಚಿತ್ರತಂಡ ಘೋಷಿಸಿದೆ. ಆದರೆ 'ಕೂಲಿ' ಎದುರು '45' ಸಿನಿಮಾ ಬರೋದು ಅನುಮಾನ ಎನ್ನುವಂತಾಗಿದೆ.
'ಕೂಲಿ' ತಮಿಳು ಸಿನಿಮಾ, '45' ಕನ್ನಡ ಸಿನಿಮಾ, ಹಾಗಾಗಿ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯಲ್ಲ ಎಂದು ಹೇಳಬಹುದು. ವಿಪರ್ಯಾಸ ಎಂದರೆ ಎರಡೂ ಸಿನಿಮಾಗಳಲ್ಲಿ ಉಪೇಂದ್ರ ನಟಿಸಿದ್ದಾರೆ. ಇದೇ ಈಗ ಗೊಂದಲಕ್ಕೆ ಕಾರಣವಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಆ ಪಟ್ಟಿಯಲ್ಲಿ ನಮ್ಮ ಉಪ್ಪಿ ಕೂಡ ಇದ್ದಾರೆ.
ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬಹುಕೋಟಿ ವೆಚ್ಚದ ಸಿನಿಮಾ 'ಕೂಲಿ'. ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ರಜನಿಕಾಂತ್ ಜೊತೆಗೆ ಉಪೇಂದ್ರ, ಆಮೀರ್ ಖಾನ್, ನಾಗಾರ್ಜುನ, ಸತ್ಯರಾಜ್, ಶ್ರುತಿ ಹರಿಹರನ್ ಚಿತ್ರದ ತಾರಾಗಣದಲ್ಲಿದ್ದಾರೆ.
ಕರ್ನಾಟಕದಲ್ಲಿ ರಜನಿಕಾಂತ್ ಸಿನಿಮಾಗಳಿಗೆ ದೊಡ್ಡ ಮಾರ್ಕೆಟ್ ಇದೆ. ಇನ್ನು ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ಕೂಡ ನಟಿಸಿದ್ದಾರೆ ಎಂದಮೇಲೆ ಕ್ರೇಜ್ ಸಹಜವಾಗಿಯೇ ಹೆಚ್ಚುತ್ತದೆ. ಅದರ ನಡುವೆ '45' ಸಿನಿಮಾ ಬರುತ್ತಾ? ಎನ್ನುವ ಪ್ರಶ್ನೆ ಇದೀಗ ಮೂಡಿದೆ. ಚಿತ್ರತಂಡಕ್ಕೂ ಈ ಬಗ್ಗೆ ಗೊಂದಲ ಶುರುವಾಗಿದೆ. ಸದ್ಯ ಅರ್ಜುನ್ ಜನ್ಯಾ ಅಂಡ್ ಟೀಂ '45' ಚಿತ್ರವನ್ನು ತಿದ್ದಿ ತೀಡುವ ಕೆಲಸದಲ್ಲಿ ನಿರತವಾಗಿದೆ. ಶೀಘ್ರದಲ್ಲೇ ಹೊಸ ರಿಲೀಸ್ ಡೇಟ್ ಘೋಷಣೆ ಆಗುವ ಸಾಧ್ಯತೆಯಿದೆ.


Click it and Unblock the Notifications











