''ಅಪ್ಪ ಊಟ ಚೆನ್ನಾಗಿಲ್ಲ...'' ಮಗನ ಮಾತು ಕೇಳಿ ಶಾರುಖ್ ಖಾನ್ ಕಣ್ಣೀರು!

By ರವೀಂದ್ರ ಕೊಟಕಿ

ಶಾರುಖ್ ಖಾನ್ ಮಗ ಆರ್ಯನ್ ಖಾನ್ ಗೆ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ಇನ್ನೂ ದೊರೆಯುತ್ತಿಲ್ಲ. ಆರ್ಯನ್ ಖಾನ್ ವಕೀಲರು ಮುಂಬೈ ಹೈಕೋರ್ಟ್ ಕದ ತಟ್ಟಿದರು, ಜಾಮೀನು ವಿಚಾರಣೆಯನ್ನು ಮಂಗಳವಾರಕ್ಕೆ ಹೈಕೋರ್ಟ್ ನಿಗದಿಪಡಿಸಿದೆ. ಹೀಗಾಗಿ ಮುಂದಿನ ಮಂಗಳವಾರದವರೆಗೂ ಆರ್ಯನ್ ಖಾನ್‌ಗೆ ಜೈಲಿನಲ್ಲೇ ಊಟ ಮಾಡುವುದು ಅನಿವಾರ್ಯವಾಗಿದೆ. ಆದರೆ ಮಂಗಳವಾರದ ನಂತರವಾದರೂ ಮನೆಯ ಊಟ ಸಿಗುವ ಭರವಸೆ ಕೂಡ ಇನ್ನೂ ಸಂಶಯಾತ್ಮಕ ವಾಗಿದೆ.

NCB ಪರ ವಕೀಲರು ಮಂಡಿಸುತ್ತಿರುವ ವಾದದ ಎದುರು ಆರ್ಯನ್ ಖಾನ್ ವಕೀಲರಾದ ಸತೀಶ್ ಮಾನ್ ಶಿಂಧೆ, ಅಮಿತ್ ದೇಸಾಯಿ ತಂಡ ಮಂಕಾಗಿದೆ. ಕೆಳಹಂತದ ನ್ಯಾಯಾಲಯಗಳಲ್ಲಿ ಈಗಾಗಲೇ ಈ ತಂಡ ಮೂರು ಬಾರಿ ಆರ್ಯನ್ ಖಾನ್ ಪರವಾಗಿ ವಾದ ಮಂಡಿಸಿ ಬೇಲ್ ಗಾಗಿ ಹೋರಾಟ ಮಾಡಿದರು ಕೂಡ ಇದುವರೆಗೂ ಬೇಲ್ ಸಿಕ್ಕಿಲ್ಲ. ಅಲ್ಲದೆ ನಿನ್ನೆ, ಮುಂಬೈ ಹೈಕೋರ್ಟಿನಲ್ಲಿ ಬೇಲ್ ಅರ್ಜಿಯನ್ನು ಸಲ್ಲಿಸಿದಾಗ ತುರ್ತಾಗಿ ಬೇಲ್ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುವಂತೆ ಇದೇ ತಂಡ ಹೈಕೋರ್ಟಿನ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿತ್ತು.ಆದರೆ ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶರಾದ ಸಾಂಬ್ರೆ ಅವರು ವಿಚಾರಣೆಯನ್ನು ಮಂಗಳವಾರ ಅಂದರೆ ಅಕ್ಟೋಬರ್ 26ಕ್ಕೆ ನಿಗದಿಪಡಿಸಿದ್ದಾರೆ.

ಈ ನಡುವೆ NCB ನ್ಯಾಯಾಲಯ ಕೂಡ ಆರ್ಯನ್ ಖಾನ್ ಅವರ ನ್ಯಾಯಾಲಯ ಬಂಧನವನ್ನು ಅಕ್ಟೋಬರ್ 30ರ ವರೆಗೂ ವಿಸ್ತರಿಸಿದೆ. ಹೀಗಾಗಿ, Sections 8 (c), 20 (b), 27,28, 29 and 35 of NDPS act ಇವುಗಳ ಅಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಆರ್ಯನ್ ಖಾನ್ ಅವರ ಸಂಕಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.

ಆರ್ಯನ್ ಖಾನ್ ಗೆಳತಿ ಅನನ್ಯಾ ಪಾಂಡೆ ವಿಚಾರಣೆ

ಆರ್ಯನ್ ಖಾನ್ ಗೆಳತಿ ಅನನ್ಯಾ ಪಾಂಡೆ ವಿಚಾರಣೆ

ಆರ್ಯನ್ ಗೆಳತಿ ನಟಿ ಅನನ್ಯಾ ಪಾಂಡೆ ಎನ್‌ಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ ವಿಚಾರಣೆಯನ್ನು ತೀವ್ರಗೊಳಿಸಿರುವ NCB ಅಧಿಕಾರಿಗಳು ದಿನೇದಿನೇ ಈ ಪ್ರಕರಣದಲ್ಲಿ ಹೊಸ ಹೆಸರುಗಳೊಂದಿಗೆ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಇದೇ ಕ್ರಮದಲ್ಲಿ ಬಾಲಿವುಡ್ ನಟಿ ಹಾಗೂ ಆರ್ಯನ್ ಖಾನ್ ಸ್ನೇಹಿತೆ ಅನನ್ಯಾ ಪಾಂಡೆ ಅವರಿಗೂ ಕೂಡ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ಸೂಚಿಸಿತ್ತು. ಇದೇ ಹಿನ್ನೆಲೆಯಲ್ಲಿ ಅಧಿಕಾರಿಗಳ ಎದುರು ಅನನ್ಯಾ ಹಾಜರಾಗಿ ವಿಚಾರಣೆಯನ್ನು ಎದುರಿಸಿದ್ದಾರೆ. ವಿಚಾರಣೆ ಮುಂದುವರೆದಿದ್ದು, ಇಂದು ಕೂಡ ಅನನ್ಯಾ ಪಾಂಡೆ NCB ಅಧಿಕಾರಿಗಳ ಎದುರು ವಿಚಾರಣೆಯನ್ನು ಎದುರಿಸಲಿದ್ದಾರೆ. ಆರ್ಯನ್ ಖಾನ್ ಮತ್ತು ಅನನ್ಯಾ ಪಾಂಡೆ ಒಳ್ಳೆ ಸ್ನೇಹಿತರು ಜೊತೆಗೆ ಇವರಿಬ್ಬರ ವಾಟ್ಸಪ್ ಚಾಟ್ ನಲ್ಲಿ ಡ್ರಗ್ಸ್ ಮತ್ತು ಪಾರ್ಟಿಗಳಿಗೆ ಸಂಬಂಧಪಟ್ಟಂತೆ ಅನೇಕ ವಿಚಾರಗಳು ಎಕ್ಸ್ಚೇಂಜ್ ಆಗಿದೆ.

ಎಂಬ ಗುಮಾನಿಯ ಮೇಲೆ ಅನನ್ಯಾ ಪಾಂಡೆ ಅವರನ್ನು NCB ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಇದೇ ವಿಚಾರದ ಮೇಲೆ ಮತ್ತಷ್ಟು ಬಾಲಿವುಡ್ ನಟಿಯರಿಗೂ ಸಂಕಷ್ಟ ಎದುರಾಗುವ ಸಂಭವವಿದೆ ಅಂತ ಹೇಳಲಾಗುತ್ತಿದೆ.

ಅರ್ಥರ್ ರೋಡ್ ಜೈಲಿನಲ್ಲಿ ಮಗನನ್ನು ಭೇಟಿಯಾದ ಶಾರುಖ್ ಖಾನ್

ಅರ್ಥರ್ ರೋಡ್ ಜೈಲಿನಲ್ಲಿ ಮಗನನ್ನು ಭೇಟಿಯಾದ ಶಾರುಖ್ ಖಾನ್

ಪರಿಸ್ಥಿತಿಗಳು ಆರ್ಯನ್ ಖಾನ್ ಗೆ ವಿರುದ್ಧವಾಗಿ ದಿನೇ-ದಿನೇ ಬಿಗಡಾಯಿಸುತ್ತಿರುವ ಸಮಯದಲ್ಲೇ ನಟ ಶಾರುಖ್ ಖಾನ್ ತನ್ನ ಮಗನ ಆರೋಗ್ಯ ಮತ್ತು ಯೋಗಕ್ಷೇಮವನ್ನು ವಿಚಾರಿಸುವ ಹಿನ್ನೆಲೆಯಲ್ಲಿ ನಿನ್ನೆ ಆರ್ಥರ್ ರೋಡ್ ಜೈಲಿನಲ್ಲಿರುವ ವಿಚಾರಣಾ ಕೈದಿ ನಂಬರ್ 956ನ್ನು ಭೇಟಿಯಾಗಿದ್ದಾರೆ. ಆರ್ಯನ್ ಬಂಧನದ ಸುಮಾರು 20 ದಿನಗಳ ನಂತರ ಅವರ ತಂದೆ ಶಾರುಖ್ ಖಾನ್ ಅವರಿಗೆ ಮಗನನ್ನು ಭೇಟಿಯಾಗಲು ಅವಕಾಶ ಸಿಕ್ಕಿದೆ. ನಿನ್ನೆ ಬೆಳಗ್ಗೆ ಸುಮಾರು 11 ಗಂಟೆಯ ಸಮಯದಲ್ಲಿ ಶಾರುಖ್ ಖಾನ್ ಅರ್ಥರ್ ರೋಡ್ ಜೈಲಿನಲ್ಲಿ ಇರುವ ಮಗನನ್ನು ಭೇಟಿಯಾಗಿದ್ದಾರೆ.ಇದಕ್ಕೆ ಮೊದಲು ಕೆಲ ದಿನಗಳ ಹಿಂದೆ

ವಿಡಿಯೋ ಕಾಲ್ ಒಂದರ ಮೂಲಕ ತಂದೆ ಮಗನ ನಡುವೆ ಐದು ನಿಮಿಷದ ಸಂವಾದ ನಡೆದಿತ್ತು. ಶಾರುಖ್ ಖಾನ್ ಮಗನನ್ನು ಭೇಟಿಯಾಗುವ ಆ ಸಂದರ್ಭದಲ್ಲಿ ಸಂದರ್ಶನ ವಿಭಾಗದಲ್ಲಿ ಇಬ್ಬರು ಜೈಲ್ ಗಾರ್ಡುಗಳು ಅಲ್ಲಿ ಉಪಸ್ಥಿತರಿದ್ದರು.ತಂದೆ-ಮಗ ಇಂಟರ್ ಕಾಮ್ ಮೂಲಕ ಪರಸ್ಪರ ಮಾತನಾಡಿಕೊಂಡಿದ್ದಾರೆ.

ಗ್ರಿಲ್ ಮತ್ತು ಕ್ಲಾಸ್ ವಾಲ್ ಮಧ್ಯೆ ಸುಮಾರು ಹದಿನೈದು ನಿಮಿಷಗಳ ಸಮಯ ಅಪ್ಪ-ಮಗ ಮಾತುಕತೆ ನಡೆಸಿದ್ದಾರೆ.

''ಅಪ್ಪ ಊಟ ಸೇರ್ತಾ ಇಲ್ಲ...'' ಮಗನ ಅಳಲು

''ಅಪ್ಪ ಊಟ ಸೇರ್ತಾ ಇಲ್ಲ...'' ಮಗನ ಅಳಲು

ಇದೇ ಸಮಯದಲ್ಲಿ ಮಗನ ಆರೋಗ್ಯದ ಬಗ್ಗೆ ವಿಚಾರಿಸಿದ ತಂದೆ, ಊಟದ ಬಗ್ಗೆ ಕೇಳಿದಾಗ ಮಗ ಅಳುತ್ತಾ 'ಅಪ್ಪ ನನಗೆ ಊಟ ಸೇರ್ತಾ ಇಲ್ಲ...'ಅಂತ ಅಪ್ಪನ ಎದುರು ಅಳಲು ತೋಡಿಕೊಂಡಿದ್ದಾನೆ ಅಂತ ಜೈಲಿನ ವರ್ಗಗಳು ಹೇಳುತ್ತಿವೆ. ಮಗನ ಈ ಮಾತಿನಿಂದ ನೊಂದುಕೊಂಡ ಶಾರುಖ್ ಖಾನ್ ಜೈಲು ಅಧಿಕಾರಿಗಳಿಗೆ 'ಮಗನಿಗೆ ಮನೆ ಊಟ ತಂದು ಕೊಡಲು ಅವಕಾಶ ಮಾಡಿಕೊಡಿ' ಅಂತ ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಜೈಲಿನ ಅಧಿಕಾರಿಗಳು 'ನ್ಯಾಯಾಲಯದ ಆದೇಶವಿಲ್ಲದೆ ಹಾಗೆ ಮನೆ ಊಟವನ್ನು ಕೊಡಲು ಸಾಧ್ಯವಿಲ್ಲ' ಅಂತ ಹೇಳಿ ಶಾರುಖ್ ಖಾನ್ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸುಮಾರು 15 ನಿಮಿಷಗಳ ಕಾಲ ಮಗನ ಜೊತೆ ಮಾತನಾಡಿದ ಶಾರುಖ್ ಖಾನ್ ಮಗನಿಗೆ ಧೈರ್ಯ ತುಂಬಿ 'ಮನ್ನತ್' ಕಡೆಗೆ ಮುಖ ಮಾಡಿದ್ದಾರೆ.

ಮಗನ ಬಿಡುಗಡೆಗಾಗಿ ಅಮ್ಮನ ಪೂಜೆ

ಮಗನ ಬಿಡುಗಡೆಗಾಗಿ ಅಮ್ಮನ ಪೂಜೆ

ಇತ್ತ 'ಮನ್ನತ್' ನಲ್ಲಿ ಆರ್ಯನ್ ಖಾನ್ ತಾಯಿ ಗೌರಿ ಖಾನ್ ಮಗನ ಶೀಘ್ರ ಬಿಡುಗಡೆಗಾಗಿ ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸುತ್ತಿದ್ದು, ಮಗ ಬಿಡುಗಡೆಯಾಗುವವರೆಗೂ ಮನೆಯಲ್ಲಿ ಯಾವುದೇ ತರದ ಸಿಹಿ ಪದಾರ್ಥಗಳು ಮಾಡದಂತೆ ಅಡುಗೆ ಭಟ್ಟರಿಗೆ ಆರ್ಡರ್ ಮಾಡಿದ್ದಾರೆ. ನವೆಂಬರ್ 2, ಶಾರುಖ್ ಖಾನ್ ಅವರ ಹುಟ್ಟುಹಬ್ಬ. ಕನಿಷ್ಠ ಆ ಹೊತ್ತಿಗಾದರೂ ಆರ್ಯನ್ ಬಿಡುಗಡೆಯಾಗಬಹುದು ಅಂತ ಶಾರುಖ್ ಖಾನ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

ದೀಪಾವಳಿಗಾದರೂ ಮಗ ಮನೆಗೆ ಬರಬಹುದೇ?

ದೀಪಾವಳಿಗಾದರೂ ಮಗ ಮನೆಗೆ ಬರಬಹುದೇ?

ಶಾರುಖ್ ಖಾನ್ ಅವರಿಗಿರುವ ಆತಂಕ ಕೂಡ ಮುಂದಿನವಾರ ಮುಂಬೈ ಹೈ ಕೋರ್ಟಿನಲ್ಲಿ ವಿಚಾರಣೆ ತಡವಾದರೆ ಸಾಲು-ಸಾಲು ದೀಪಾವಳಿ ರಜೆಗಳು ಇರುವುದರಿಂದ ಮತ್ತೆ ಕನಿಷ್ಠ 10 ದಿನಗಳಾದರೂ ಮಗ ಜೈಲಿನಲ್ಲಿ ಇರಬೇಕಾದ ಪ್ರಸಂಗ ಒದಗಿ ಬರುತ್ತದೆ. ತನ್ನ ಹುಟ್ಟುಹಬ್ಬ ಮತ್ತು ದೀಪಾವಳಿಯನ್ನು ಮಗನ ಜೊತೆ ಆಚರಿಸಲು ಶಾರುಖ್ ಖಾನ್ ಮತ್ತು ಕುಟುಂಬದವರು ಎದುರುನೋಡುತ್ತಿದ್ದಾರೆ. ಆದರೆ ಆರ್ಯನ್ ಖಾನ್ ಬಿಡುಗಡೆಯ ಭವಿಷ್ಯ ಹೈ ಕೋರ್ಟ್ ನೀಡುವ ತೀರ್ಪಿನ ಮೇಲೆ ಅವಲಂಬಿತವಾಗಿದೆ.

More from Filmibeat

English summary
Shah Rukh Khan visited son Aryan Khan in Aurtur road jail. Its said to be Aryan Khan complaints about food they giving in the jail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X