For Quick Alerts
  ALLOW NOTIFICATIONS  
  For Daily Alerts

  ದರ್ಶನ್ ನಾಯಕಿಗೆ ಅದೃಷ್ಟ: 'ಕಬ್ಜ' ಚಿತ್ರಕ್ಕೆ ಕನ್ನಡದವರೇ ಹೀರೋಯಿನ್?

  |

  ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ಕಬ್ಜ' ಚಿತ್ರ ಭಾರಿ ನಿರೀಕ್ಷೆಗಳೊಂದಿಗೆ ತಯಾರಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಏಳು ಪ್ರಮುಖ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅತಿ ದೊಡ್ಡ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಎನಿಸಿಕೊಂಡಿದೆ.

  ಹಲವು ದಿನಗಳಿಂದ 'ಕಬ್ಜ' ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಹಲವು ಸ್ಟಾರ್ ನಟರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಆರ್ ಚಂದ್ರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ 'ಕಬ್ಜ' ಚಿತ್ರಕ್ಕೆ ಹೀರೋಯಿನ್ ಯಾರಾಗ್ತಾರೆ ಎಂಬ ವಿಚಾರ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿದೆ. ತೆಲುಗಿನ ಸ್ಟಾರ್ ನಟಿ ಅಥವಾ ಬಾಲಿವುಡ್‌ನಿಂದ ನಾಯಕಿಯನ್ನು ಕರೆತರಬಹುದು ಎಂದು ಹೇಳಲಾಗುತ್ತಿತ್ತು. ಆದ್ರೀಗ, ಕಬ್ಜ ಚಿತ್ರಕ್ಕೆ ಕನ್ನಡ ನಟಿಯೇ ನಾಯಕಿ ಆಗುವ ಸುಳಿವು ಸಿಕ್ಕಿದೆ. ಮುಂದೆ ಓದಿ...

  'ಕಬ್ಜ' ಚಿತ್ರಕ್ಕೆ ರಾಬರ್ಟ್ ನಾಯಕಿ?

  'ಕಬ್ಜ' ಚಿತ್ರಕ್ಕೆ ರಾಬರ್ಟ್ ನಾಯಕಿ?

  'ಕಬ್ಜ' ಸಿನಿಮಾಗೆ ರಾಬರ್ಟ್ ನಾಯಕಿ ಆಶಾ ಭಟ್ ಅವರನ್ನು ನಾಯಕಿಯನ್ನಾಗಿಸಲು ಚರ್ಚೆ ನಡೆದಿದೆ ಎಂಬ ಸುದ್ದಿ ಹೊರಬಿದ್ದಿದೆ. 'ರಾಬರ್ಟ್' ಸಿನಿಮಾದ ಯಶಸ್ಸಿನ ಬಳಿಕ ಆಶಾ ಭಟ್ ಯಾವ ಸಿನಿಮಾದಲ್ಲಿ ನಟಿಸಬಹುದು ಎಂಬ ಪ್ರಶ್ನೆಗೆ ಬಹುಶಃ ಉತ್ತರ ಸಿಕ್ಕಿದಂತಿದೆ. ಪ್ರಾಥಮಿಕ ಹಂತದ ಮಾತುಕತೆ ಆಗಿದೆ, ಅಂತಿಮ ನಿರ್ಧಾರ ಇನ್ನು ತೆಗೆದುಕೊಂಡಿಲ್ಲ ಎಂಬ ಮಾಹಿತಿ ಇದೆ.

  ಈ ಕಡೆ ಆರ್ ಚಂದ್ರು, ಆ ಕಡೆ ಪ್ರೇಮ್ಸ್: ಬಹುಮುಖ್ಯ ಘೋಷಣೆ ಅಂತಿದ್ದಾರೆ, ಏನಿರಬಹುದು?ಈ ಕಡೆ ಆರ್ ಚಂದ್ರು, ಆ ಕಡೆ ಪ್ರೇಮ್ಸ್: ಬಹುಮುಖ್ಯ ಘೋಷಣೆ ಅಂತಿದ್ದಾರೆ, ಏನಿರಬಹುದು?

  ಬೇರೆ ಯಾವ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ

  ಬೇರೆ ಯಾವ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ

  ರಾಬರ್ಟ್ ಸಿನಿಮಾದ ಯಶಸ್ಸಿನ ಬಳಿಕ ಹಲವು ಪ್ರಾಜೆಕ್ಟ್‌ಗಳ ಆಫರ್ ಆಶಾ ಭಟ್ ಅವರಿಗೆ ಬಂದಿದೆ. ಆದರೆ, ಸೂಕ್ತ ಸ್ಕ್ರಿಪ್ಟ್ ಆಯ್ಕೆ ಮಾಡುವಲ್ಲಿ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಈ ನಡುವೆ ಕಬ್ಜ ಅಂತಹ ಪ್ಯಾನ್ ಇಂಡಿಯಾ ಸಿನಿಮಾದ ಅವಕಾಶ ಬಂದಿರುವ ಸಂದರ್ಭದಲ್ಲಿ ಯಾವ ರೀತಿ ಅದನ್ನು ನಿಭಾಯಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

  'ಕಬ್ಜ' ಚಿತ್ರದಲ್ಲಿ ಸುದೀಪ್

  'ಕಬ್ಜ' ಚಿತ್ರದಲ್ಲಿ ಸುದೀಪ್

  ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ನಟಿಸುತ್ತಿದ್ದಾರೆ. ಭಾರ್ಗವ್ ಬಕ್ಷಿ ಎಂಬ ಪಾತ್ರದಲ್ಲಿ ಸುದೀಪ್ ಅತಿಥಿ ಪಾತ್ರ ನಿರ್ವಹಿಸುತ್ತಿದ್ದಾರೆ. ಸುದೀಪ್ ಅವರ ಫಸ್ಟ್ ಲುಕ್ ಪೋಸ್ಟರ್ ಸಹ ಈ ಹಿಂದೆ ಬಿಡುಗಡೆಯಾಗಿತ್ತು. ಅಂಡರ್‌ವರ್ಲ್ಡ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕಿಚ್ಚ ಸಹ ಡಾನ್ ಆಗಿ ನಟಿಸಲಿದ್ದಾರೆ.

  ವಿಡಿಯೋ: ಶೂಟಿಂಗ್ ಸೆಟ್‌ನಲ್ಲಿ ನಟ ಉಪೇಂದ್ರ ತಲೆಗೆ ಪೆಟ್ಟುವಿಡಿಯೋ: ಶೂಟಿಂಗ್ ಸೆಟ್‌ನಲ್ಲಿ ನಟ ಉಪೇಂದ್ರ ತಲೆಗೆ ಪೆಟ್ಟು

  ಕೆಜಿಎಫ್ ತಂತ್ರಜ್ಞರು

  ಕೆಜಿಎಫ್ ತಂತ್ರಜ್ಞರು

  ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರು ಕಬ್ಜ ಚಿತ್ರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಶಿವಕುಮಾರ್ ಕಲಾ ನಿರ್ದೇಶಿಸಲಿದ್ದಾರೆ. ರವಿ ಬಸ್ರೂರು ಸಂಗೀತವಿದೆ. ಎಂಟಿಬಿ ನಾಗರಾಜ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಎಜೆ ಶೆಟ್ಟಿ ಛಾಯಾಗ್ರಹಣವಿದೆ. ಇನ್ನುಳಿದಂತೆ ಕಬೀರ್ ದುಹಾನ್ ಸಿಂಗ್, ಕೋಟಾ ಶ್ರೀನಿವಾಸ್, ಡ್ಯಾನಿಶ್ ಅಖ್ತರ್ ಸೈಫಿ, ಅನೂಪ್ ರೇವಣ್ಣ ಸೇರಿದಂತೆ ಹಲವರು ತಾರಬಳಗದಲ್ಲಿದ್ದಾರೆ.

  English summary
  Roberrt Fame Asha Bhat has approached by director R Chandru for female lead role in Upendra's Kabza.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X