Ashika Ranganath Wedding: ಆಶಿಕಾ ರಂಗನಾಥ್‌ ಮದುವೆ ಫಿಕ್ಸ್, ಹುಡುಗ ಇವರೇ ನೋಡಿ!

ನಟಿ ಆಶಿಕಾ ರಂಗನಾಥ್ ಕನ್ನಡದ ಸ್ಟಾರ್ ನಟಿಯರಲ್ಲಿ ಒಬ್ಬರು. ಸಾಲು ಸಾಲು ಚಿತ್ರಗಳನ್ನು ಮಾಡಿ ಆಶಿಕಾ ರಂಗನಾಥ್ ಹೆಚ್ಚಿನ ಪ್ರೇಕ್ಷಕರನ್ನು ಸಂಪಾದಿಸಿದ್ದಾರೆ. ಆಸಿಕಾಗೆ ತನ್ನದೇ ಆದ ಅಭಿಮಾನಿ ಬಳಗ ಇದೆ. ಆಶಿಕಾ ರಂಗನಾಥ್ ಎಷ್ಟೋ ಹುಡುಗರ ಹಾರ್ಟ್ ಫೇವರಿಟ್ ಕೂಡ ಹೌದು. ಆದರೆ ಈಗ ನಟಿ ಆಶಿಕಾಗೆ ಮದುಗೆ ಫಿಕ್ಸ್ ಅಗಿದೆ. ಸಪ್ತಪದಿ ತುಳಿಯಲು ಆಶಿಕಾ ಸಜ್ಜಾಗಿದ್ದಾರೆ.

ನಟಿ ಆಶಿಕಾ ರಂಗನಾಥ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಮದುವೆ ಆಗಲು ಆಶಿಕಾ ಅಣಿಯಾಗಿದ್ದಾರೆ. ಸದ್ಯ ಆಶಿಕ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆಶಿಕ ಅಭಿನಯದ 'ಅವತಾರ ಪುರುಷ' ಮತ್ತು ರೆಮೋ ಚಿತ್ರಗಳು ರಿಲೀಸ್ ಆಗಬೇಕಿದೆ. ಈ ನಡುವೆ ಆಶಿಕಾ ತಮ್ಮ ಮದುವೆಯ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಆಶಿಕಾ ರಂಗನಾಥ್‌ಗೆ ಮದುವೆ ನಿಗದಿ ಆಗಿರುವ ವಿಚಾರ ಅವರ ಆಪ್ತ ಬಳಗದಲ್ಲಿ ಹೆಚ್ಚು ಸುದ್ದಿ ಮಾಡುತ್ತಾ ಇದೆ. ಇದು ಅಚ್ಚರಿ ಎನಿಸಿದರೂ ನಿಜ. ಆಶಿಕಾಗೆ ಮನೆಯವರೇ ಮದುವೆ ನಿಗದಿ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಆಶಿಕಾ ಮದುವೆ ಸುದ್ದಿ ಅಧಿಕೃತಗೊಳ್ಳಲಿದೆ.

ಆಶಿಕಾ ಕೈ ಹಿಡಿಯುತ್ತಿರುವ ಹುಡುಗ ಯಾರು?

ನಟಿ ಆಶಿಕಾ ರಂಗನಾಥ್ ಮದುವೆ ಆಗುತ್ತಿರುವ ಹುಡುಗನ ಯಾರು ಎನ್ನುವ ಪ್ರಶ್ನೆ ಮೂಡಿದೆ. ಆದರೆ ಈ ಪ್ರಶ್ನೆಗೆ ಇನ್ನೂ ಕೂಡ ಉತ್ತರ ಸಿಕ್ಕಿಲ್ಲ. ಈಗಷ್ಟೇ ಮದುವೆ ಮಾತುಕತೆ ಮುಗಿದಿದೆಯಂತೆ. ಹುಡುಗ ಬ್ಯುಸಿನೆಸ್ ಮ್ಯಾನ್ ಮತ್ತು ಕೋಟಿ ಆಸ್ತಿಯ ಒಡೆಯ ಎನ್ನುವುದು ಮಾತ್ರ ತಿಳಿದು ಬಂದಿದೆ. ಆದರೆ ಈ ಆಶಿಕಾ ಮದುವೆಗೆ ಆಗುತ್ತಿರುವ ಹುಡುಗ ಚಿತ್ರರಂಗಕ್ಕೆ ಸಂಬಂಧ ಪಟ್ಟವರಲ್ಲ.

ಆಶಿಕಾಗೆ ಗಂಡು ನೋಡಿದ ಮನೆಯವರು!

ನಟಿ ಆಶಿಕಾ ರಂಗನಾಥ್ ಸಿನಿಮಾರಂಗದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ಮನೆಯವರೇ ನೋಡಿದ ಹುಡುಗನ ಕೈ ಹಿಡಿಯಲು ಸಜ್ಜಾಗಿದ್ದಾರೆ. ಮನೆಯರೆ ನಿಶ್ಚಯ ಮಾಡಿದ ಮದುವೆ ಇದು. ಹುಡುಗನ ಕುಟುಂಬ, ಆಶಿಕಾ ಕುಟುಂಬಕ್ಕೆ ಚಿರಪರಿಚಿತವಂತೆ. ಹಾಗಾಗಿ ಕುಟುಂಬದವರೇ ಈ ಜೋಡಿಯ ಮದುವೆ ನಿಗದಿ ಮಾಡಿದೆ. ಇನ್ನು ಹುಡುಗನ ಹೆಸರು ಕೂಡ ತಿಳಿದು ಬಂದಿಲ್ಲ.

ಆಶಿಕಾ ಮದುವೆ ಯಾವಾಗ?

ನಟಿ ಆಶಿಕಾ ರಂಗನಾಥ್ ಮದುವೆ ದಿನಾಂಕ ಇನ್ನು ಕೂಡ ನಿಗದಿ ಆಗಿಲ್ಲ. ಸದ್ಯ ಮದುವೆ ಬಗ್ಗೆ ಕುಟುಂಬಸ್ಥರು ಮಾತ್ರ ಮಾತುಕಥೆ ಮಾಡಿದ್ದಾರಂತೆ. ಮೊದಲು ಈ ಜೋಡಿಯ ಅದ್ದೂರಿ ನಿಶ್ಚಿತಾರ್ಥ ನೇರವೇರಲಿದೆ. ನಂತರ ಬೆಂಗಳೂರಿನಲ್ಲೇ ಅದ್ಧೂರಿಯಾಗಿ ಮದುವೆ ನಡೆಯಲಿದೆ ಎನ್ನಲಾಗಿದೆ. ಈ ವರ್ಷಾಂತ್ಯಕ್ಕೆ ಅಂದರೆ 2022 ಡಿಸೆಂಬರ್‌ನಲ್ಲಿ ಮದುವೆ ನಿಶ್ಚಿತಾರ್ಥದ ನಡೆಯುವ ಸಾಧ್ಯತೆ ಇದೆ.

ಸಾಲು ಸಾಲು ಸಿನಿಮಾಗಳಲ್ಲಿ ಆಶಿಕಾ ಬ್ಯುಸಿ!

ನಟಿ ಆಶಿಕಾ ರಂಗನಾಥ್ ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಅವತಾರ ಪುರುಷ' ಮತ್ತು 'ರೆಮೋ' ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಇದರೊಂದಿಗೆ ಆಶಿಕಾ ತೆಲುಗು ಚಿತ್ರರಂಗದಲ್ಲೂ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಒಂದು ಚಿತ್ರವನ್ನು ಈಗಾಗಲೇ ಮಾಡಿ ಮುಗಿಸಿದ್ದಾರೆ. ತೆಲುಗಿನಲ್ಲೂ ಆಶಿಕಾಗೆ ಹೆಚ್ಚಿನ ಬೇಡಿಕೆ ಇದ್ದು, ಸದ್ಯ ಸಿನಿಮಾ ಬದಲಿಗೆ ಮದುವೆ ಸುದ್ದಿ ಮೂಲಕ ಸುದ್ದಿ ಆಗಿದ್ದಾರೆ.

"ಈ ಸುದ್ದಿ ನಿಜ ಆಗಲಿ ಎನ್ನುವುದು ಎಲ್ಲರ ಆಶಯ... ಆದರೆ ಸ್ವಲ್ಪ ಸಾವಧಾನ.. ಇಂದು ಏಪ್ರಿಲ್ 1 ಆಗಿದ್ದರಿಂದ... ಏಪ್ರಿಲ್ ಫೂಲ್‌ಗಾಗಿ ಈ ಸ್ಟೋರಿ... ತಾರೆಯರ ಒಪ್ಪಿಗೆಯ ಮೇರೆಗೆ ಈ ಸುದ್ದಿ ಪ್ರಕಟ ಮಾಡಲಾಗಿದೆ."

More from Filmibeat

English summary
Ashika Ranganath Getting Married, Here Is The Details About Groom
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X