»   » 'ಅಕ್ಕ-ನ' ಮಾತು ನಂಬಿ ಮೋ-ಸಹೋದೆನಣ್ಣ

'ಅಕ್ಕ-ನ' ಮಾತು ನಂಬಿ ಮೋ-ಸಹೋದೆನಣ್ಣ

Posted By:
Subscribe to Filmibeat Kannada

ಬೆಂಗಳೂರು : ಕಳೆ-ದು ಹೋದ ಯೌವನ, ಹುರು-ಪುಅಮೆರಿಕಾ ಪ್ರವಾಸದಿಂದ ಮತ್ತೆ ದಕ್ಕಿ-ತು ಎಂದು ಮೊನ್ನೆ ತಾನೇ ನಮ್ಮೊಂ-ದಿ-ಗೆ ಕಡ-ಲಾ-ಚೆ-ಯ ಊರಿ-ನ ಅನುಭವಗಳನ್ನು ಹಂಚಿಕೊಂಡು ಖುಷಿ ಪಟ್ಟಿ-ದ್ದ ಅಶ್ವಥ್‌ಗೆ, ಅಮೆರಿಕಾದಲ್ಲಿ ತನಗೆ ಇಷ್ಟು ದೊಡ್ಡ ಮೋಸವಾಗಬಹುದು ಎಂದು ಯಾವತ್ತೂ ಅನಿಸಿರಲಿಕ್ಕಿಲ್ಲ. ಹಾಡುಹಕ್ಕಿಯ ಕರೆಸಿಕೊಂಡು ಕಂಠ ಸವಿಯನ್ನಾಲಿಸಿ ಗೌರವಿಸಿದಂತೆ ಅಮೆರಿಕಾ ಕನ್ನಡಿಗರ ಕೂಟ ನಟಿಸಿರುವುದು ಬಯಲಾಗಿದೆ. ಅಲ್ಲಿನ ಅಕ್ಕ ಸಂಸ್ಥೆ ಅಶ್ವಥ್‌ಗೆ ನೀಡಿದ ಚೆಕ್‌(053000196/ 23.09.2000 )ಬರೀ ಜೊಳ್ಳು.

ಅಸೋಸಿಯೇಷನ್‌ ಆಫ್‌ ಕನ್ನಡ ಕೂಟಾಸ್‌ ಆಫ್‌ ಅಮೆರಿಕಾ (ಅಕ್ಕ) ಇತ್ತೀಚೆಗೆ ಹೂಸ್ಟನ್‌ನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವಂತೆ ಅಶ್ವಥ್‌ರಿಗೆ ಫಲ ತಾಂಬೂಲ ನೀಡಿ ಕರೆದಿತ್ತು. ಅಶ್ವಥ್‌ ಸಾಧ್ಯವಿರುವ ಎಲ್ಲ ಸಾಲ ಮೂಲವನ್ನು ಶೋಧಿಸಿ ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಸಿಗುವ ಸಂಭಾವನೆಯಿಂದ ಈ ಸಾಲ ತೀರಿಸಿದರಾಯ್ತು ಎಂದುಕೊಂಡ ಅಶ್ವಥ್‌, ಈಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಅಮೆರಿಕಾ ಪ್ರವಾಸದ ಕರೆ ಬಂದಾಗ ಅಶ್ವಥ್‌ ಪ್ರಯಾಣ ವೆಚ್ಚದ ಕುರಿತು ಉಸಿರೆತ್ತುವ ಮುನ್ನವೇ ಅಕ್ಕ ಸಂಸ್ಥೆ ಅವರ ಎಲ್ಲ ಖರ್ಚನ್ನೂ ತಾನು ಭರಿಸುವುದಾಗಿ ಹೇಳಿತ್ತು. ಅ-ಕ್ಕ-ನ ಮಾತು ನಂಬಿ ಅಶ್ವಥ್‌ ಸ-ಪ-ತ್ನೀ-ಕ-ರಾ-ಗಿ ಮಗ-ಳೊಂ-ದಿ-ಗೆ ಅಮೆರಿಕಾಕ್ಕೆ ಹಾರಿದರು. ಅಲ್ಲಿ ಮೂರು ತಿಂಗಳ ಕಾಲ ಹಾಡುವು-ದ-ರ-ಲ್ಲಿ, ಹಾಡು ಕಲಿಸುವುದರಲ್ಲಿ ತಲ್ಲೀನರಾಗಿದ್ದರು. ಹ್ಯೂಸ್ಟನ್‌ ಸಮ್ಮೇಳನದಲ್ಲಿ ಹಾಡಿ ಸಭಿಕರ ಮನಗೆದ್ದಿದ್ದರು. ಅವರ ಹಾಡಿನಿಂದ ಮತ್ತಷ್ಟು ಖುಷಿಯಾದ ಅಕ್ಕ ಸಂಸ್ಥೆ ಅಶ್ವಥ್‌ರ ಹೆಂಡತಿಯ ಖರ್ಚನ್ನೂ ತಾನೇ ಭರಿಸುವುದಾಗಿ ಹೇಳಿ ಅಶ್ವ-ಥ್‌-ರ ಖುಷಿ-ಯ-ನ್ನು ಮತ್ತ-ಷ್ಟು ಹೆಚ್ಚಿ-ಸಿ-ತು. ಅಮೆರಿಕಾದಿಂದ ಹೊರಡುವ ಮುನ್ನ 4,500 ಡಾಲರ್‌ಗಳಿಗೆ ಬ್ಯಾಂಕ್‌ ಆಫ್‌ ಇಂಡಿಯಾದ, -ಸೆಪ್ಟೆಂಬರ್‌ 23ನೇ ದಿನಾಂಕದ ಚೆಕ್‌ ನೀಡಿತ್ತು. 29ರಂದು ಅಶ್ವಥ್‌ ಚೆಕ್‌ನ್ನು ಡಿಸ್ಕೌಂಟ್‌ಗೆ ಹಾಕಿದ್ದರು. ಆದರೆ ನವೆಂಬರ್‌ 2ರಂದು, ಚೆಕ್‌ ಹಿಂದೆ ಬಂದಿರುವುದಾಗಿ ಬ್ಯಾಂಕ್‌ನಿಂದ ಫೋನ್‌ ಬಂತು. ಚೆಕ್‌ ನೀಡಿದ ಸಂಸ್ಥೆಯೇ ಹಣ ನೀಡಬಾರದೆಂದು ಬ್ಯಾಂಕಿಗೆ ಹೇಳಿದೆ ಎಂದು ಮ್ಯಾನೇಜರ್‌ ಹೇಳಿದ್ದಾರೆ. ಅಶ್ವಥ್‌ರಿಗೆ ಅಕ್ಕ ಮಾಡಿದ ಮೋಸ ಗೊತ್ತಾದದ್ದು ಆಗಲೇ.

ಹೊಸದನ್ನು ಕೊಡಬೇಕು, ಅತ್ಯುತ್ತಮ ಸಂಗೀತ ನೀಡಬೇಕು ಎಂಬ ತುಡಿತ ಹೊತ್ತಿರುವ ಅಶ್ವಥ್‌ಗೆ ಜನಪ್ರಿಯತೆ, ಪ್ರಚಾರ ಬಿಟ್ಟರೆ ಹಣ ವ್ಯವಹಾರದ ಚಾಲಾಕಿತನ ತಿಳಿಯದು. ಅಶ್ವಥ್‌ಗೆ ಮೋಸವಾಗಿದೆ. ನಮ್ಮವರೇ ಇದ್ದಾರೆ ಎಂಬ ಧೈರ್ಯದಿಂದ ವಿದೇಶ ಪ್ರವಾಸ ಕೈಗೊಳ್ಳುವವರಿದ್ದರೆ ಅವರಿಗೆ ಈ ಮೋಸ ಪಾಠ.

ಅಸೋಸಿಯೇಷನ್‌ ಆಫ್‌ ಕನ್ನಡ ಕೂಟಾಸ್‌ ಆಫ್‌ ಅಮೆರಿಕಾ (ಅಕ್ಕ) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಸಮಜಾಯಿಷಿ ನೀಡುತ್ತದೆ ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada