For Quick Alerts
  ALLOW NOTIFICATIONS  
  For Daily Alerts

  ಇನ್ನು ಗ್ಯಾರೆಂಟಿ ಸ್ವೀಟಿ ಅನುಷ್ಕಾ ಶೆಟ್ಟಿ ಕಲ್ಯಾಣ, ಆದರೆ ಯಾವಾಗ?

  By ರವೀಂದ್ರ ಕೊಟಕಿ
  |

  ಟಾಲಿವುಡ್ ಮಂದಿ ಜೊತೆಗೆ ಸಿನಿ ಅಭಿಮಾನಿಗಳು ಕಳೆದ ಕೆಲವು ವರ್ಷಗಳಿಂದ ಅವರಿಬ್ಬರ ಮದುವೆ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿದ್ದಾರೆ. ಮದುವೆ ಅನ್ನುವ ಮಾತು ಕಿವಿಗೆ ಬಿದ್ದರೆ ಇವರಿಬ್ಬರ ಮದುವೆಯ ಸುದ್ದಿ ಕೂಡ ಚರ್ಚೆಗೆ ಬಂದೇ ಬರುತ್ತೆ. ಅವರಿಬ್ಬರೂ ಬೇರೆ ಯಾರು ಅಲ್ಲ 'ಬಾಹುಬಲಿ' ಪ್ರಭಾಸ್, 'ದೇವಸೇನಾ' ಅನುಷ್ಕಾ ಶೆಟ್ಟಿ. ಹೌದು ಇವರಿಬ್ಬರ ಮದುವೆ ಯಾವಾಗ? ಯಾರೊಂದಿಗೆ? ಈ ಪ್ರಶ್ನೆಗಳಿಗೆ ಯಾರ ಬಳಿಯೂ ಸ್ಪಷ್ಟವಾದ ಉತ್ತರವಿಲ್ಲ. ಆದರೆ ಅಂತೆ-ಕಂತೆಗಳಿಗೆ ಮಾತ್ರ ಯಾವುದೇ ಕೊರತೆ ಕೂಡ ಇಲ್ಲ.

  ಸ್ವೀಟಿ (ಅನುಷ್ಕಾ ಅವರ ಮೂಲ ಹೆಸರು ಸ್ವೀಟಿ ಶೆಟ್ಟಿ) ಪ್ರಭಾಸ್ ಟಾಲಿವುಡ್‌ನ ಆನ್ ಸ್ಕ್ರೀನ್ ಬೆಸ್ಟ್ ಜೋಡಿಗಳಲ್ಲಿ ಒಂದು. ಆನ್ ಸ್ಕ್ರೀನ್‌ನಲ್ಲಿ ಬೆಸ್ಟ್ ಜೋಡಿಯಾದಾಗ ಸಹಜವಾಗಿಯೇ ಅಭಿಮಾನಿಗಳಲ್ಲಿ 'ಅವರಿಬ್ಬರು ಮದುವೆಯಾದರೆ ಎಷ್ಟು ಚೆಂದ!' ಎಂಬ ಭಾವನೆ ಚಿಗುರೊಡೆಯುತ್ತದೆ. ಪ್ರಭಾಸ್ -ಸ್ವೀಟಿ ವಿಷಯದಲ್ಲೂ ಇದೇ ಆಗಿತ್ತು. ಅವರಿಬ್ಬರದು ಅತ್ಯುತ್ತಮ ಜೋಡಿ, ಮದುವೆಯಾದರೆ ಚೆಂದ ಅಂತ ಅಭಿಮಾನಿಗಳ ಜೊತೆಗೆ ಟಾಲಿವುಡ್ ಮಂದಿ ಕೂಡ ಮಾತನಾಡಿಕೊಂಡಿದ್ದರು. ಇದಕ್ಕೆ ತಕ್ಕಂತೆ ಇವರಿಬ್ಬರ ಮದುವೆಯಾಗ ಗಾಸಿಪ್ ಕೂಡ ದೊಡ್ಡ ಮಟ್ಟದಲ್ಲಿ ಮನೆಮಾಡಿತ್ತು. ಬಾಹುಬಲಿ ಎರಡರ ನಂತರವಂತೂ ಇವರಿಬ್ಬರೂ ಇನ್ನೇನು ಮದುವೆ ಆಗಿಯೇ ಬಿಟ್ಟರು ಅನ್ನೋವದಷ್ಟು ಮಟ್ಟಿಗೆ ಇವರ ವಿವಾಹ ಸುದ್ದಿಯಾಗಿತ್ತು.

  'ನಾವಿಬ್ಬರೂ ಒಳ್ಳೆ ಫ್ರೆಂಡ್ಸ್...' ಎಂಬುವುದು ಇಂದಿಗೂ ಅವರಿಬ್ಬರ ಅಂಬೋಣ.

  'ಆದಿಪುರುಷ'ನ ವಿವಾಹ ಯಾವಾಗ?

  'ಆದಿಪುರುಷ'ನ ವಿವಾಹ ಯಾವಾಗ?

  ಪ್ರಭಾಸ್‌ಗೆ ಈಗ ಬರೋಬ್ಬರಿ 42 ವರ್ಷ. ಈತನ ಸಹಪಾಠಿ ಗೆಳೆಯರು ಮತ್ತು ಸಿನಿಮಾ ಮಂದಿ ಕೂಡ ಈಗಾಗಲೇ ಮದುವೆಯಾಗಿ ಮಕ್ಕಳೊಂದಿಗೆ ಹ್ಯಾಪಿಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಆದರೆ ಈ 'ಸಲಾರ್' ನಾಯಕ ಯಾಕೋ ಇನ್ನೂ ಮದುವೆಗೆ ಮನಸ್ಸು ಮಾಡುತ್ತಿಲ್ಲ. ಅನುಷ್ಕಾ ಎಪಿಸೋಡ್ ಮುಗಿದ ನಂತರ ಕೇಳಿಬಂತು. ಭೀಮಾವರಂಗೆ ಸೇರಿದ ಶ್ರೀಮಂತ ಉದ್ಯಮಿಯೊಬ್ಬರ ಮಗಳನ್ನು ಪ್ರಭಾಸ್‌ಗೆ ಅವರ ಕುಟುಂಬದವರು ನಿಶ್ಚಯಿಸಿದ್ದಾರೆ ಎಂದು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಅನ್ನೋ ಸುದ್ದಿ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೂ 42 ವರ್ಷದ 'ಆದಿಪುರುಷ' ಇನ್ನು ಏಕ ಪುರುಷನಾಗಿ ಉಳಿದು ಹೋಗಿದ್ದಾನೆ. ಪ್ರಭಾಸ್ ಮದುವೆಯ ಬಗ್ಗೆ ಯಾವುದೇ ಕ್ಲಾರಿಟಿ ಅವರ ಆಪ್ತ ಬಳಗ ದಿಂದಲೂ ಕೂಡ ಬರುತ್ತಿಲ್ಲ.

  ಸ್ವೀಟಿ ಮದುವೆ ಯಾವಾಗ?

  ಸ್ವೀಟಿ ಮದುವೆ ಯಾವಾಗ?

  ಪ್ರಭಾಸ್‌ನ ಮದುವೆ ಕಥೆ ಹೀಗಾದರೆ, ಅವನ ಆನ್ ಸ್ಕ್ರೀನ್ ಮನದನ್ನೆ ಸ್ವೀಟಿ ಕತೆ ಇನ್ನೊಂದು ತರ. ಮುಂದಿನ ನವಂಬರ್ ಏಳಕ್ಕೆ ತನ್ನ 40ನೇ ವಸಂತಕ್ಕೆ ಕಾಲಿಡುತ್ತಿದ್ದಾಳೆ ಈ ಮಂಗಳೂರಿನ ಚೆಲುವೆ.ಆದರೂ ಇನ್ನೂ ಏಕಾಂಗಿಯಾಗಿ ಉಳಿದು ಹೋಗಿದ್ದಾಳೆ, ಈ ಮಾಜಿ ಯೋಗ ಟೀಚರ್. ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂದು, ಈಗಾಗಲೇ ಎಂಗೇಜ್ಮೆಂಟ್ ಕೂಡ ಮುಗಿದಿದೆ ಅಂತ ಒಂದಷ್ಟು ಸಮಯ ಸುದ್ದಿಗಳು ಓಡಾಡಿತು. ಈಗ ಆ ಸುದ್ದಿಗಳು ಕೂಡ ಎಲ್ಲಿಯೂ ಕೇಳಿಬರುತ್ತಿಲ್ಲ. ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರ ಕುಟುಂಬದ ಜೊತೆ ಅನುಷ್ಕಾಗೆ ಒಳ್ಳೆ ಒಡನಾಟವಿದೆ. ಹೀಗಾಗಿ ಕಳೆದ ವರ್ಷ ವಿಚ್ಛೇದನ ಪಡೆದಿರುವ ರಾಘವೇಂದ್ರರಾವ್ ಅವರ ಮಗನ ಜೊತೆ ಸ್ವೀಟಿ ಮ್ಯಾರೇಜ್ ಅಂತ ಗುಸುಗುಸು ಸುದ್ದಿಗಳು ಟಾಲಿವುಡ್ ಅಂಗಳದಲ್ಲಿ ಮನೆಮಾಡಿತ್ತು. ಆದರೆ ಇತ್ತೀಚೆಗೆ ಅದು ಕೂಡ ಎಲ್ಲಿಯೂ ಕೇಳಿಬರುತ್ತಿಲ್ಲ.

  ಸ್ವೀಟಿ ಕಲ್ಯಾಣ ಮತ್ತೆ ಮುನ್ನೆಲೆಗೆ

  ಸ್ವೀಟಿ ಕಲ್ಯಾಣ ಮತ್ತೆ ಮುನ್ನೆಲೆಗೆ

  ನಲವತ್ತರ ಈ ಸುಂದರಿ, ತರುಣ ಸುಂದರಾಂಗ ನವೀನ್ ಪೋಲಿ ಶೆಟ್ಟಿ ಜೊತೆಗೆ ಸಿನಿಮಾವೊಂದರಲ್ಲಿ ನಟಿಸಬೇಕಿತ್ತು. ಇವರಿಬ್ಬರ ಸಿನಿಮಾ ಘೋಷಣೆ ಕೂಡ ಆಗಿತ್ತು. ಆದರೆ ಯಾಕೋ ಈ ಚಿತ್ರ ಸೆಟ್ ಮೇಲಕ್ಕೆ ಬರುತ್ತಿಲ್ಲ. ಬಹುತೇಕ ಸಿನಿಮಾ ನಿಂತಂತೆ ಅಂತ ಟಾಲಿವುಡ್‌ನ ಸುದ್ದಿ. ಸಿನಿಮಾ ನಿಲ್ಲುವ ಸುದ್ದಿ ಬರುತ್ತಿದ್ದಂತೆ ಸ್ವೀಟಿ ಮದುವೆ ಮತ್ತೆ ಮುನ್ನೆಲೆಗೆ ಬಂದಿದೆ. 'ನಿಶಬ್ದಂ' ಚಿತ್ರದ ನಂತರ ಕೆಲಕಾಲ ನಿಶಬ್ದವಾಗಿದ್ದ ಅನುಷ್ಕಾ ಶೆಟ್ಟಿ ವಿವಾಹಕ್ಕೆ ಈಗ ಮತ್ತೆ ರೆಕ್ಕೆಪುಕ್ಕಗಳು ಬಂದಿದೆ. ಹಾಗಂತ ಅದು ಈ ಬಾರಿ ಯಾವುದೇ ಗಾಸಿಪ್ ಸುದ್ದಿನೂ ಅಲ್ಲ,ಅನುಷ್ಕಾ ಅವರ ಆಪ್ತರು ಹೇಳುತ್ತಿರುವ ಮಾತು ಅಲ್ಲ. ಬದಲಾಗಿ ಆಂಧ್ರಪ್ರದೇಶದ ಖ್ಯಾತ ಜ್ಯೋತಿಷಿಯೊಬ್ಬರು ಸ್ವೀಟಿ ವಿವಾಹದ ಬಗ್ಗೆ ನುಡಿದಿರುವ ಭವಿಷ್ಯ!

  ಪಂಡಿತ್ ಜಗನ್ನಾಥ್ ಗುರೂಜಿ ಭವಿಷ್ಯ!

  ಪಂಡಿತ್ ಜಗನ್ನಾಥ್ ಗುರೂಜಿ ಭವಿಷ್ಯ!

  ಅನುಷ್ಕಾ ಶೆಟ್ಟಿ ಅವರ ಜೀವನದ ಬಗ್ಗೆ ಭವಿಷ್ಯ ನುಡಿದಿರುವ ಇವರು 'ವೃತ್ತಿಜೀವನದಲ್ಲಿ ಆಕೆ ತುಂಬಾ ಪ್ರಾಮಾಣಿಕಳು. ತಾನೊಂದು ದೊಡ್ಡ ಸ್ಟಾರ್ ಎಂಬ ಅಹಂ ಆಕೆಯಲ್ಲಿ ಇಲ್ಲ. ನಿಜ ಜೀವನದಲ್ಲಿ ಆಕೆ ತುಂಬಾ ಸರಳ ಸ್ವಭಾವದವಳು. ಆಕೆಯ ಮುಖಲಕ್ಷಣಗಳನ್ನು ಆಧರಿಸಿ ಹೇಳುವುದಾದರೆ ಸಿನಿಮಾ ರಂಗಕ್ಕೆ ಸಂಬಂಧವಿಲ್ಲದ ವ್ಯಕ್ತಿಯನ್ನು ಮದುವೆಯಾಗುತ್ತಾಳೆ. ಅನುಷ್ಕಾ 2023ರ ಒಳಗೆ ವಿವಾಹವಾಗುತ್ತಾರೆ' ಅಂತೇಳಿ ಸ್ವೀಟಿ ಕಲ್ಯಾಣದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಅನುಷ್ಕಾ ಮದುವೆಯ ಬಗ್ಗೆ ಇದುವರೆಗೆ ಗಾಳಿಸುದ್ದಿಗಳನ್ನು ಕೇಳಿ ಕೇಳಿ ರೋಸಿಹೋಗಿರುವ ಅವಳ ಅಭಿಮಾನಿಗಳು ಇದಾದರೂ ನಿಜವಾಗಲಿ ಅಂತ ಆಶಿಸುತ್ತಿದ್ದಾರೆ.

  English summary
  An Astrologer Pandit Jagannath Guruji prediction about actress Anushka Shetty's marriage. He said Anushka Shetty will marry before 2023.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X