ಪ್ರಭಾಸ್‌ಗೆ ಹೇಳಿದ್ದ ಜೋತಿಷ್ಯ ಸುಳ್ಳಾಯ್ತು: ಜ್ಯೋತಿಷಿ ಹಿಂದೆ ಹೇಳಿದ್ದೇನು?
ನಟ ಪ್ರಭಾಸ್ ಈಗ ಕೇವಲ ತೆಲುಗು ಸಿನಿಮಾ ನಟ ಅಲ್ಲ. ಅವರು ಭಾರತೀಯ ಸಿನಿಮಾರಂಗದ ಸ್ಟಾರ್ ನಟರ ಸಾಲಿಗೆ ಸೇರಿದ್ದಾರೆ. 'ಬಾಹುಬಲಿ'ಗೂ ಮುನ್ನ ಸೌತ್‌ನಲ್ಲಿ ಖ್ಯಾತಿ ಹೊಂದಿದ್ದ ನಟ ಪ್ರಭಾಸ್ ಈಗ ವಿಶ್ವ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ.
Recommended Video
ಸಿನಿಮಾ ಮಂದಿ ಸಹಜವಾಗಿ ಜೋತಿಷ್ಯ ನಂಬುತ್ತಾರೆ. ಭವಿಷ್ಯ ಕೇಳಿಯೇ ಸಾಕಷ್ಟು ಸಿನಿಮಾ ಕೆಲಸಗಳನ್ನು ಆರಂಭಿಸುತ್ತಾರೆ. ಹಾಗೆಯೇ ಪ್ರಭಾಸ್ ಕೂಡ ಜೋತಿಷ್ಯ ನಂಬುತ್ತಾರಂತೆ. ಆದರೆ ಅವರ ವಿಚಾರದಲ್ಲಿ ಜ್ಯೋತಿಷ್ಯ ಸುಳ್ಳಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಬಾಹುಬಲಿ ಚಿತ್ರಕ್ಕೂ ಮುನ್ನ ಮತ್ತು ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಅವರ ಬೆಳವಣಿಗೆ, ಬೇಡಿಕೆ ಎಲ್ಲವೂ ಹೆಚ್ಚಾಗಿದೆ. ಬಾಹುಬಲಿ ಸಿನಿಮಾ ಪ್ರಭಾಸ್‌ಗೆ ದೊಟ್ಟ ಮಟ್ಟದ ಯಶಸ್ಸು ತಂದುಕೊಟ್ಟ ಚಿತ್ರ. ಆದರೆ ಬಾಹುಬಲಿ ವಿಚಾರವಾಗಿ ಪ್ರಭಾಸ್‌ಗೆ ಭವಿಷ್ಯ ಹೇಳಲಾಗಿತ್ತಂತೆ. ಆ ಭವಿಷ್ಯ ಈಗ ಸುಳ್ಳಾಗಿದೆ.

ಬಾಹುಬಲಿ ಸಿನಿಮಾ ನಂತರ ಪ್ರಭಾಸ್‌ಗೆ ಆರ್ಥಿಕ ಬಿಕ್ಕಟ್ಟು!
ನಟ ಪ್ರಭಾಸ್‌ಗೆ ಜ್ಯೋತಿಷಿ ಒಬ್ಬರು ಭವಿಷ್ಯ ನುಡಿದಿದ್ದರಂತೆ. 'ಬಾಹುಬಲಿ' ಸಿನಿಮಾದ ಬಳಿಕ ಪ್ರಭಾಸ್ ಗೆ ದೊಡ್ಡ ಮಟ್ಟದ ನಷ್ಟ ಆಗಲಿದೆ ಎಂದು ಹೇಳಿದ್ದರಂತೆ. ಅಂದರೆ ಸಿನಿಮಾಗಳು ಕೈ ಹಿಡಿಯುವುದಿಲ್ಲ. ಬಾಹುಬಲಿ ನಂತರ ಬರುವ ಸಿನಿಮಾಗಳು ಸೋಲು ಅನುಭವಿಸುತ್ತವೆ. ಪ್ರಭಾಸ್ ವರ್ಚಸ್ಸು ಕಡಿಮೆ ಆಗುತ್ತದೆ. ಅಲ್ಲದೆ ಸಂಭಾವನೆ ಕಡಿಮೆ ಆಗಿ, ಆರ್ಥಿಕ ಬಿಕ್ಕಟ್ಟು ಬರುತ್ತದೆ ಎಂದು ಭವಿಷ್ಯ ನುಡಿದಿದ್ದರಂತೆ.

ಪ್ರಭಾಸ್ ವಿಚಾರದಲ್ಲಿ ಸುಳ್ಳಾಯ್ತು ಜ್ಯೋತಿಷಿ ಭವಿಷ್ಯ!
ಜ್ಯೋತಿಷಿ ಹೇಳಿದ ಭವಿಷ್ಯದ ಪ್ರಕಾರ ನಟ ಪ್ರಭಾಸ್ ಆರ್ಥಿಕ ಬಿಟ್ಟಕ್ಕಿಗೆ ಸಿಲುಕಬೇಕಾಗಿತ್ತು. ಆದರೆ ಅದು ಆಗಿಲ್ಲ. ಬದಲಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. 'ಬಾಹುಬಲಿ' ನಂತರ ಪ್ರಭಾಸ್ ಅವರ ಬೇಡಿಕೆ ಹೆಚ್ಚಾಗಿದೆ. 'ಬಾಹುಬಲಿ' ಬಳಿಕ ಬಂದ 'ಸಾಹೋ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದರೂ ಕೂಡ, ಬಾಕ್ಸಾಫೀಸ್ ನಲ್ಲಿ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

ಇನ್ನು ಮುಂದೆ ಜೋತಿಷ್ಯ ನಂಬೋದಿಲ್ಲವಂತೆ ಪ್ರಭಾಸ್!
ಇನ್ನು ಮುಂದೆ ಜ್ಯೋತಿಷ್ಯ ನಂಬದೆ ಇರಲೂ ಪ್ರಭಾಸ್ ನಿರ್ಧರಿಸಿದ್ದಾರಂತೆ. ಯಾಕೆಂದರೆ ಈ ಹಿಂದೆ ಹೇಳಿದ್ದ ಭವಿಷ್ಯ ಕೇಳಿ ನಟ ಕಂಗಾಲಾಗಿ ಬಿಟ್ಟಿದ್ದರಂತೆ. ಆದರೆ ಸುಳ್ಳಾಗಿದೆ. ಹಾಗಾಗಿ ಇನ್ನು ಮುಂದೆ ಜ್ಯೋತಿಷ್ಯ ನಂಬುವುದು, ಭವಿಷ್ಯ ಕೇಳುವುದನ್ನು ಬಿಟ್ಟುಬಿಡಲು ನಿರ್ಧರಿಸಿದ್ದಾರಂತೆ.

ಪ್ರಭಾಸ್ ಸಂಭಾವನೆ 150 ಕೋಟಿ!
ಬಾಹುಬಲಿ ಚಿತ್ರದ ಬಳಿಕ ಪ್ರಭಾಸ್ ಸಂಭಾವನೆ ಹೆಚ್ಚಾಗಿದೆ. ಸದ್ಯ ಒಂದು ಚಿತ್ರಕ್ಕೆ 150 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ. ಆದಿಪುರುಷ್ ಚಿತ್ರಕ್ಕೆ 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿದೆ. ಬಾಹುಬಲಿ ಬಳಿಕ ಅವರ ಗ್ರಾಫ್ ಹೆಚ್ಚಾಗಿದೆ. ತೆಲುಗು ನಟರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಮೊದಲ ಸ್ಥಾನದಲ್ಲಿ ಇದ್ದಾರೆ. ಸದ್ಯ ಅವರ 'ರಾಧೆ ಶ್ಯಾಮ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. 'ಆದಿಪುರುಷ್' ಚಿತ್ರದ ಶೂಟಿಂಗ್ ಕೂಡ ಮುಗಿಸಿದ್ದಾರೆ. ಈಗ 'ಪ್ರಾಜೆಕ್ಟ್ ಕೆ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಎಲ್ಲಾ ಚಿತ್ರಗಳೂ ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳು. ಈ ಚಿತ್ರಗಳು ಒಂದು ಹಂತಕ್ಕೆ ಸಕ್ಸಸ್ ಆದರೆ ಪ್ರಭಾಸ್ ಪ್ರಭಾವ ಮತ್ತಷ್ಟು ಹೆಚ್ಚಾಗಲಿದೆ.


Click it and Unblock the Notifications











