ಕೆಎಲ್ ರಾಹುಲ್ ಅನ್ನು ಬಿಟ್ಟು ಹೊಸ ಮನೆಗೆ ಹೋಗುತ್ತಿರುವ ಗರ್ಲ್‌ಫ್ರೆಂಡ್!

ಕೆಎಲ್ ರಾಹುಲ್ ಹಾಗೂ ನಟಿ ಆತಿಯಾ ಶೆಟ್ಟಿ ಪ್ರೀತಿಯಲ್ಲಿರುವ ವಿಷಯ ಗುಟ್ಟೇನಲ್ಲ. ಇನ್ನೇನು ಕೆಲವೇ ತಿಂಗಳಲ್ಲಿ ಈ ಜೋಡಿ ವಿವಾಹ ಸಹ ಆಗಲಿದ್ದಾರೆ.

ಮದುವೆ ಆದ ಬಳಿಕ ಈ ತಾರಾ ದಂಪತಿ ಸೆಟಲ್ ಆಗಲು ಮನೆಯೊಂದನ್ನು ಸಹ ಮುಂಬೈನ ದುಬಾರಿ ಏರಿಯಾದಲ್ಲಿ ಹುಡುಕಿಟ್ಟಿದ್ದಾರೆ ಎಂದು ವರದಿಯಾಗಿತ್ತು. ಇದು ಸತ್ಯವೂ ಹೌದು, ಆದರೆ ಅದರಲ್ಲಿ ಟ್ವಿಸ್ಟ್ ಒಂದು ಎದುರಾಗಿದೆ.

ಆತಿಯಾ ಶೆಟ್ಟಿ ಹೊಸ ಮನೆಗೆ ಪ್ರವೇಶಿಸುತ್ತಿರುವುದು ನಿಜವೇ, ಆದರೆ ಕೆ.ಎಲ್.ರಾಹುಲ್ ಜೊತೆಗಲ್ಲ. ಬದಲಿಗೆ ತಮ್ಮ ಕುಟುಂಬದವರೊಟ್ಟಿಗೆ.

Athiya Shetty Moving To New House Without KL Rahul

ಈ ಬಗ್ಗೆ ಸ್ವತಃ ಆತಿಯಾ ಶೆಟ್ಟಿ ಸ್ಪಷ್ಟನೆ ನೀಡಿದ್ದು, ''ನಾವು ಹೊಸ ಮನೆ ಖರೀದಿಸಿದ್ದೇವೆ. ಅಲ್ಲಿಗೆ ನನ್ನ ಕುಟುಂಬದವರೊಟ್ಟಿಗೆ ನಾವು ವಾಸ್ತವ್ಯ ಬದಲಾಯಿಸಲಿದ್ದೇನೆ. ಬೇರೆ ಯಾರೊಂದಿಗೂ ಅಲ್ಲ'' ಎಂದಿದ್ದಾರೆ.

ಮುಂಬೈನ ಬಾಂದ್ರಾ ಏರಿಯಾದಲ್ಲಿ ಇನ್ನು ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಹಲವು ಫ್ಲಾಟ್‌ಗಳನ್ನು ಖರೀದಿಸಿದ್ದಾರೆ. ಈ ಫ್ಲಾಟ್‌ನಲ್ಲಿ ಕೆ.ಎಲ್.ರಾಹುಲ್ ಹಾಗೂ ಆತಿಯಾ ಶೆಟ್ಟಿ ವಾಸವಿರಲಿದ್ದಾರೆ ಎನ್ನಲಾಗಿತ್ತು. ಆದರೆ ಇದನ್ನು ಆತಿಯಾ ಶೆಟ್ಟಿ ಅಲ್ಲಗಳೆದಿದ್ದಾರೆ.

ಇನ್ನು ಕೆ.ಎಲ್.ರಾಹುಲ್ ಜೊತೆಗೆ ವಿವಾಹದ ಬಗ್ಗೆ ಮಾತನಾಡಿರುವ ಆತಿಯಾ ಶೆಟ್ಟಿ, ''ಈ ಬಗ್ಗೆ ಉತ್ತರಿಸಿ ಉತ್ತರಿಸಿ ನನಗೆ ಸಾಕಾಗಿದೆ. ಮೊದಲೆಲ್ಲ ಈ ಪ್ರಶ್ನೆ ಎದುರಾದಾಗ ಬೇಸರವಾಗುತ್ತಿತ್ತು. ಈಗ ನಗು ಬರುತ್ತದೆ. ನಾನಂತೂ ಸದ್ಯಕ್ಕೆ ನನ್ನ ಕರಿಯರ್ ಮೇಲೆ ಫೋಕಸ್ ಮಾಡಿದ್ದೇನೆ. ಮದುವೆಯ ಯೋಚನೆ ಇಲ್ಲ'' ಎಂದಿದ್ದಾರೆ.

ಆತಿಯಾ ಶೆಟ್ಟಿ ಹಾಗೂ ಕೆ.ಎಲ್.ರಾಹುಲ್ ಕಳೆದೊಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ತಮ್ಮ ಮಗಳ ಪ್ರೀತಿಗೆ ತಂದೆ ಸುನಿಲ್ ಶೆಟ್ಟಿ ಬಹಿರಂಗ ಒಪ್ಪಿಗೆಯನ್ನೇ ನೀಡಿದ್ದಾರೆ. 'ಕೆಎಲ್ ರಾಹುಲ್ ಅದ್ಭುತ ವ್ಯಕ್ತಿ' ಎಂದು ಬಣ್ಣಿಸಿದ್ದರು. ಈ ಜೋಡಿ ಕೆಲವೇ ತಿಂಗಳಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

ಬಾಂದ್ರಾದ ಹೊಸ ಅಪಾರ್ಟ್‌ಮೆಂಟ್‌ನಲ್ಲಿ ಹಲವು ಫ್ಲಾಟ್‌ಗಳನ್ನು ಕೆ.ಎಲ್.ರಾಹುಲ್ ಹಾಗೂ ಸುನಿಲ್ ಶೆಟ್ಟಿ ಜಂಟಿಯಾಗಿ ಖರೀದಿಸಿದ್ದು, ಅಪಾರ್ಟ್‌ಮೆಂಟ್‌ನ ಒಂದು ಭಾಗದಲ್ಲಿ ಸುನಿಲ್ ಶೆಟ್ಟಿ ಕುಟುಂಬ ಹಾಗೂ ಮತ್ತೊಂದು ಭಾಗದಲ್ಲಿ ಕೆ.ಎಲ್.ರಾಹುಲ್ ಹಾಗೂ ಆತಿಯಾ ಶೆಟ್ಟಿ ಇರಲಿದ್ದಾರೆ ಎನ್ನಲಾಗಿದೆ.

ಕೆಎಲ್ ರಾಹುಲ್ ಪ್ರಸ್ತುತ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಐಪಿಎಲ್ ಟೂರ್ನಿ ಮುಗಿದ ಬಳಿಕ ಟಿ20 ವಿಶ್ವಕಪ್ ಆಡಬೇಕಿದೆ. ಈ ಎರಡು ಮಹತ್ವದ ಟೂರ್ನಿಗಳ ಬಳಿಕ ರಾಹುಲ್-ಆತಿಯಾ ವಿವಾಹವಾಗಲಿದ್ದಾರೆ. ಆತಿಯಾ ಸಹ ಸದ್ಯಕ್ಕೆ ಬ್ಯುಸಿಯಾಗಿದ್ದಾರೆ. 2019 ರಲ್ಲಿ ತೆರೆಕಂಡ 'ಮೋತಿಚೂರ್-ಚಕ್ನಾಚೂರ್' ಸಿನಿಮಾದ ಬಳಿಕ ಕೆಲ ಕಾಲ ಬ್ರೇಕ್ ತೆಗೆದುಕೊಂಡಿದ್ದ ಆತಿಯಾ ಇದೀಗ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎರಡೂ ಸಹ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಲಿವೆ.

More from Filmibeat

English summary
Actress Athiya Shetty moving to new house without KL Rahul. She said she is moving to new house with her family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X