Samantha Attack Challenge: ಸಮಂತಾ ಟೈಗರ್ ಶ್ರಾಫ್‌ಗಾಗಿ ಮಾಡಿದ ವರ್ಕೌಟ್ ವಿಡಿಯೋ ವೈರಲ್!

ನಟಿ ಸಮಂತಾ ಫಿಟ್ನೆಸ್ ಫ್ರೀಕ್ ಎನ್ನುವುದು ಎಲ್ಲರಿಗೂ ಗೊತ್ತು. ಸಮಂತಾ ಫಿಟ್ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಏನೇ ಮಿಸ್ ಮಾಡಿದರು ತಮ್ಮ ವರ್ಕೌಟ್ ರೊಟೀನ್ ಮಾತ್ರ ಮಿಸ್ ಮಾಡುವುದಿಲ್ಲ. ಆಗಾಗ ತಮ್ಮ ಸಾಮಾಜಿಕ ಅಕೌಂಟ್‌ಗಳಲ್ಲಿ ವರ್ಕೌಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸದ್ಯ ಸಮಂತಾ ಮತ್ತೊಂದು ರೋಚಕ ವರ್ಕೌಟ್ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಈ ಬಾರಿ ಸಮಂತಾ ಸಿಕ್ಕಾ ಪಟ್ಟೆ ವರ್ಕೌಟ್ ಮಾಡಿ ವಿಡಿಯೋ ಹಂಚಿಕೊಳ್ಳಲು ಪ್ರಮುಖ ಕಾರಣ ಇದೆ. ಬಾಲಿವುಡ್‌ನಿಂದ ಬಂದ ಚಾಲೆಂಜ್‌ ಸ್ವೀಕರಿಸಿದ ಬಳಿಕ ಸಮಂತಾ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಹೌದು ಬಾಲಿವುಡ್‌ ನಟ ಟೈಗರ್‌ ಶ್ರಾಫ್ ನಟಿ ಸಮಂತಾಗೆ ಚಾಲೆಂಜ್ ಹಾಕಿದ್ದಾರೆ. ಅದು ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ. ಸಮಂತಾ ಕೂಡ ಆ ಸವಾಲನ್ನು ಸ್ವೀಕರಿಸಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಚಾಲೆಂಜ್‌ಗೆ ಸಮಂತಾ ಕೊಟ್ಟಿರುವ ಹೆಸರು 'ಅಟ್ಯಾಕ್' ಚಾಲೆಂಜ್.

ಸಮಂತಾಗೆ ಟೈಗರ್‌ಗ್ರಾಫ್ 'ಅಟ್ಯಾಕ್ ಚಾಲೆಂಜ್'!

ನಟಿ ಸಮಂತಾ ಹೊಸ ವರ್ಕೌಟ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋವನ್ನು ಸಮಂತಾ ಮಾಡಿರುವುದು ಬಾಲಿವುಡ್‌ ನಟ ಟೈಗರ್ ಶ್ರಾಫ್‌ಗಾಗಿ. ನಟ ಟೈಗರ್ ಶ್ರಾಫ್ ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡು ಸಮಂತಾಗೆ ಚಾಲೆಂಜ್ ಹಾಕಿದ್ದಾರೆ. ಸವಾಲು ಸ್ವೀಕರಿಸಿದ ನಟಿ ಸಮಂತಾ ಹೆವೀ ವರ್ಕೌಟ್ ಮಾಡಿ, ಆ ವಿಡಿಯೋವನ್ನು ಶೇರ್ ಮಾಡಿದ್ದಾರೆ. "ನನಗೆ ಚಾಲೆಂಜ್ ನೀಡಿದಕ್ಕೆ ಧನ್ಯವಾದಗಳು ಟೈಗರ್ ಶ್ರಾಫ್, ಈ ಚಾಲೆಂಜ್‌ ಅನ್ನು ಅರ್ಜುನ್ ಕಪೂರ್‌ಗೆ ನೀಡುತ್ತಿದ್ದೇನೆ." ಎಂದು ಬರೆದುಕೊಂಡು ಅರ್ಜುನ್ ಕಪೂರ್‌ಗೆ ಟ್ಯಾಗ್ ಮಾಡಿದ್ದಾರೆ.

ಏನಿದು 'ಅಟ್ಯಾಕ್ ಚಾಲೆಂಜ್'?

ಬಾಲಿವುಡ್‌ನಲ್ಲಿ ಇದ್ದಕ್ಕಿದ್ದ ಹಾಗೆ ಈ ಅಟ್ಯಾಕ್ ಚಾಲೆಂಜ್ ಶುರುವಾಗಿದೆ. ಜೊತೆಗೆ ಅದು ಟ್ರೆಂಡ್ ಕೂಡ ಆಗಿದೆ. ಬಾಲಿವುಡ್‌ನಲ್ಲಿ ಮಾತ್ರ ಅಲ್ಲ ಸೌತ್ ತಾರೆಯರಿಗೂ ಈ ಸವಾಲು ಎದುರಾಗಿದೆ. ಇದನ್ನು ಶುರು ಮಾಡಿದ್ದು, ಬಾಲಿವುಡ್‌ನ 'ಅಟ್ಯಾಕ್' ಚಿತ್ರತಂಡ. ಚಿತ್ರದ ಹೆಸರಲ್ಲಿ ವರ್ಕೌಟ್ ಚಾಲೆಂಜ್ ಆರಂಭ ಮಾಡಿ, ಸಿನಿಮಾ ಪ್ರಚಾರಕ್ಕೆ ಚಿತ್ರತಂಡ ಸಜ್ಜಾಗಿದೆ. ಹಾಗಾಗಿ ಈ ಚಾಲೆಂಜ್ ಯಾರು ಯಾರಿಗೆ ಟ್ಯಾಗ್ ಮಾಡುತ್ತಾರೋ, ಅವರು ವರ್ಕೌಟ್ ವಿಡಿಯೋ ಹಂಚಿಕೊಂಡು ಮತ್ತೊಬ್ಬರಿಗೆ ಟ್ಯಾಗ್ ಮಾಡುತ್ತಾರೆ.

ಚಾಲೆಂಜ್ ಸ್ವೀಕರಿಸಿದ ತಾರೆಯರು!

ಇಲ್ಲಿಯ ತನಕ ಹಲವು ತಾರೆಯರು ಈ ಸವಾಲನ್ನು ಸ್ವೀಕರಿಸಿದ್ದಾರೆ. ಸಮಂತಾಗೆ ಸವಾಲು ಹಾಕಿದ, ಟೈಗರ್ ಶ್ರಾಫ್ ತಾನು ಕೂಡ ವರ್ಕೌಟ್ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಟೈಗರ್ ಶ್ರಾಫ್‌ಗೆ ನಟಿ ರಕುಲ್ ಪ್ರೀತ್ ಸಿಂಗ್ ಸವಾಲು ಹಾಕಿದ್ದರು. ರಕುಲ್ 'ಅಟ್ಯಾಕ್' ಚಿತ್ರದ ನಾಯಕಿ. ಈ ಕಾರಣಕ್ಕೆ ಸ್ವತಃ ರಕುಲ್ ಪ್ರೀತ್ ಸಿಂಗ್ ಈ ಚಾಲೆಂಜ್ ಶುರು ಮಾಡಿದ್ದಾರೆ. ಬಳಿಕ ಈ ಸವಾಲನ್ನು ನಟಿ ಜಾಕ್ವೆಲಿನ್‌ಗೆ ಮತ್ತು ಟೈಗರ್ ಶ್ರಾಫ್‌ಗೆ ಹಾಕಿದ್ದರು.

ವೈರಲ್ ಆಯ್ತು ಅಟ್ಯಾಕ್ ಚಾಲೆಂಜ್ ವಿಡಿಯೋ!

ಈ ಅಟ್ಯಾಕ್ ಚಾಲೆಂಜ್ ವಿಡಿಯೋಗಳು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸಾಲು, ಸಾಲು ತಾರೆಯರು ಈ ಚಾಲೆಂಜ್ ಸ್ವೀಕರಿಸಿದ್ದಾರೆ. ನಟಿ ರಕುಲ್ ಪ್ರೀತ್ ಸಿಂಗ್, ಜಾಕ್ವೆಲಿನ್ ಫರ್ನಾಂಡಿಸ್, ಸಮಂತಾ, ಟೈಗರ್ ಶ್ರಾಫ್ ವಿಡಿಯೋಗಳು ವೈರಲ್ ಆಗಿವೆ. ಇನ್ನು ಚಿತ್ರದ ನಟ ಜಾನ್ ಅಬ್ರಾಹಂ ಮತ್ತು ಅರ್ಜುನ್ ಕಪೂರ್ ವಿಡಿಯೋಗಳು ಬರಬೇಕಿವೆ. ಬಳಿಕ ಅವರು ಯಾವ ನಟ, ನಟಿಯರಿಗೆ ಸವಾಲು ಹಾಕುತ್ತಾರೆ ಅಂತ ನೋಡಬೇಕು.

More from Filmibeat

English summary
Attack Challenge Is Going Viral, Samantha Hard Workout For Tiger Shroff's Attack Challenge, Know More Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X