For Quick Alerts
  ALLOW NOTIFICATIONS  
  For Daily Alerts

  ಆಗಸ್ಟ್ 27ಕ್ಕೆ ಯಶ್-ದರ್ಶನ್ ಕೊಡ್ತಾರೆ ಸರ್ಪ್ರೈಸ್, ಮತ್ತೆ ನಿರಾಸೆ ಮಾಡಿದ 'ವಿಲನ್'.!

  By Bharath Kumar
  |

  ಆಗಸ್ಟ್ ತಿಂಗಳು ಕನ್ನಡದ ಸ್ಟಾರ್ ನಟರ ಚಿತ್ರಗಳು ರಿಲೀಸ್ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಈ ತಿಂಗಳೂ ಬಿಗ್ ನಟರ ಚಿತ್ರಗಳು ತೆರೆಮೇಲೆ ಬರೋದು ಬಹುತೇಕ ಅನುಮಾನವೆನ್ನಲಾಗಿದೆ.

  ಆದ್ರೆ, ಸಿನಿಮಾ ಬಿಡುಗಡೆ ಬಿಟ್ಟು ಬೇರೆಯದ್ದೇ ಸರ್ಪ್ರೈಸ್ ಕೊಡಲು ಸಿದ್ಧವಾಗ್ತಿದ್ದಾರೆ ಸ್ಯಾಂಡಲ್ ವುಡ್ ಸ್ಟಾರ್ಸ್. ಆಗಸ್ಟ್ ತಿಂಗಳಲ್ಲಿ ಕೆಲವು ದೊಡ್ಡ ಸಿನಿಮಾಗಳು ಆಡಿಯೋ, ಟ್ರೈಲರ್ ಬರುವ ಸಾಧ್ಯತೆ ಇದೆ. ಅದರ ಜೊತೆ ಕೆಲವು ಚಿತ್ರಗಳು ಸೆಟ್ಟೇರಲಿವೆ.

  ಇದೆಲ್ಲಾ ಓಕೆ, ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಸ್ಟ್ 27 ರಂದು ಯಾವ ಸರ್ಪ್ರೈಸ್ ನೀಡಲಿದ್ದಾರೆ ಗೊತ್ತಾ.? ಒಂದೇ ದಿನ ಈ ಇಬ್ಬರು ನಟರು ಅವರವರ ಅಭಿಮಾನಿಗಳಿಗೆ ಗಿಫ್ಟ್ ನೀಡಲಿದ್ದಾರೆ. ಏನದು.? ಮುಂದೆ ಓದಿ....

  ಆಗಸ್ಟ್ 27ಕ್ಕೆ ಕುರುಕ್ಷೇತ್ರ ಆಡಿಯೋ

  ಆಗಸ್ಟ್ 27ಕ್ಕೆ ಕುರುಕ್ಷೇತ್ರ ಆಡಿಯೋ

  ಎಲ್ಲ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗಾಗಲೇ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್ ಕೆಲಸ ಹೆಚ್ಚು ಸಮಯ ಹಿಡಿದಿದ್ದರಿಂದ ಬಿಡುಗಡೆ ವಿಳಂಬವಾಗುತ್ತಿದೆ. ಈ ಮಧ್ಯೆ ಆಡಿಯೋ ಬಿಡುಗಡೆ ಯಾವಾಗ ಎಂಬ ಮಾತು ಕೇಳಿ ಬಂದಿದೆ. ಆಗಸ್ಟ್ 27ಕ್ಕೆ ಕುರುಕ್ಷೇತ್ರ ಚಿತ್ರದ ಆಡಿಯೋ ರಿಲೀಸ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ರೆ, ಇನ್ನು ಖಚಿತವಾಗಿಲ್ಲ.

  ಆಗಸ್ಟ್ 27ಕ್ಕೆ ಯಶ್ ಸಿನಿಮಾ ಶುರು

  ಆಗಸ್ಟ್ 27ಕ್ಕೆ ಯಶ್ ಸಿನಿಮಾ ಶುರು

  ಅದೇ ದಿನ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಲಿರುವ 'ಕಿರಾತಕ-2' ಸಿನಿಮಾ ಸೆಟ್ಟೇರಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಅನಿಲ್ ಕುಮಾರ್ ನಿರ್ದೇಶನ ಮಾಡಲಿರುವ ಈ ಚಿತ್ರವನ್ನ ಜಯಣ್ಣ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಕೆಜಿಎಫ್ ಚಿತ್ರದ ಬ್ಯುಸಿಯಲ್ಲಿರುವ ಯಶ್ ಆಗಸ್ಟ್ 27 ರಂದು ಈ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ.

  'ದಿ ವಿಲನ್' ಬರೋದು ಡೌಟು

  'ದಿ ವಿಲನ್' ಬರೋದು ಡೌಟು

  ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 24 ರಂದು ಬರುವ ಸಾಧ್ಯತೆ ಎನ್ನಲಾಗಿತ್ತು. ಆದ್ರೆ, ಆ ದಿನಕ್ಕೆ ಬರೋದು ಅನುಮಾನವಾಗಿದೆ. ಈ ಮಧ್ಯೆ ಆಡಿಯೋ ಬಿಡುಗಡೆಗೆ ಪ್ಲಾನ್ ಮಾಡುತ್ತಿರುವ ಚಿತ್ರತಂಡ ದುಬೈನಲ್ಲಿ ಕಾರ್ಯಕ್ರಮ ಮಾಡಲು ಸಿದ್ಧವಾಗುತ್ತಿದೆ.

  ಇದೇ ತಿಂಗಳು 'ಒಡೆಯ' ಆರಂಭ

  ಇದೇ ತಿಂಗಳು 'ಒಡೆಯ' ಆರಂಭ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ ಒಡೆಯ ಚಿತ್ರ ಇದೇ ತಿಂಗಳು ಆರಂಭವಾಗಲಿದೆ. ಆಗಸ್ಟ್ 16 ರಂದು ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾ ಮುಹೂರ್ತ ಕಾರ್ಯಕ್ರಮ ಜರುಗಲಿದೆ.

  English summary
  challenging star darshan 50th film Muniratna Kurukshetra audio launch on August 27. rocking star yash's new movie kirataka 2 launch on august 27th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X