ಪ್ರಭಾಸ್ ಸೂಪರ್ ಹಿಟ್ ಚಿತ್ರ ಹಿಂದಿಗೆ ರೀಮೇಕ್: ಯಾರಾಗಲಿದ್ದಾರೆ ಹೀರೋ?
ಸೌತ್ ಇಂಡಸ್ಟ್ರಿಯಲ್ಲಿ ಸೂಪರ್ ಹಿಟ್ ಆದ ಚಿತ್ರಗಳನ್ನು ಹಿಂದಿಗೆ ರೀಮೇಕ್ ಮಾಡುವ ಸಂಪ್ರದಾಯ ಬಾಲಿವುಡ್‌ನಲ್ಲಿ ಉಳಿದುಕೊಂಡಿದೆ. ಆಕ್ಷನ್ ಚಿತ್ರಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿರುವ ಹಿಂದಿ ನಿರ್ಮಾಪಕರು, ತೆಲುಗು ಮತ್ತು ತಮಿಳಿನ ಹಿಟ್ ಚಿತ್ರಗಳನ್ನು ಬಿಗ್ ಇಂಡಸ್ಟ್ರಿಯಲ್ಲಿ ಗೆಲುವು ಕಂಡಿರುವ ಉದಾಹರಣೆಗಳಿವೆ.
ಈಗ ತೆಲುಗು ನಟ ಪ್ರಭಾಸ್ ನಟಿಸಿದ್ದ ಸೂಪರ್ ಹಿಟ್ ಚಿತ್ರವೊಂದನ್ನು ಹಿಂದಿಯಲ್ಲಿ ರೀಮೇಕ್ ಮಾಡಲು ಮುಂದಾಗಿದ್ದಾರೆ. 15 ವರ್ಷದ ಹಿಂದೆ ತೆರೆಕಂಡು ಟಾಲಿವುಡ್‌ನಲ್ಲಿ ಚರಿತ್ರೆ ಸೃಷ್ಟಿಸಿದ್ದ ಚಿತ್ರವನ್ನು ಬಾಲಿವುಡ್‌ನಲ್ಲಿ ಮಾಡುವುದಾದರೇ ಹೀರೋ ಯಾರಾಗ್ತಾರೆ? ಮುಂದೆ ಓದಿ....

ಛತ್ರಪತಿ ರೀಮೇಕ್
2005ರಲ್ಲಿ ಬಿಡುಗಡೆಯಾಗಿದ್ದ 'ಛತ್ರಪತಿ' ಸಿನಿಮಾವನ್ನು ಹಿಂದಿಯಲ್ಲಿ ರೀಮೇಕ್ ಮಾಡುವ ಯೋಜನೆ ನಡೆಯುತ್ತಿದೆ. ಪ್ರಭಾಸ್ ನಟಿಸಿದ್ದ ಈ ಚಿತ್ರ ಅಂದಿನ ಸಮಯದಲ್ಲಿ ದೊಡ್ಡ ಹಿಟ್ ಆಗಿತ್ತು. 8 ಕೋಟಿಯಲ್ಲಿ ತಯಾರಾಗಿದ್ದ ಈ ಚಿತ್ರ 22 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು ಎಂದು ವರದಿಯಾಗಿದೆ.

ರಾಜಮೌಳಿ ಸಿನಿಮಾ
ಪ್ರಭಾಸ್, ಶ್ರಿಯಾ ಸರಣ್ ನಟಿಸಿದ್ದ ಈ ಚಿತ್ರವನ್ನು ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದರು. ಸ್ಟೂಡೆಂಟ್ ನಂ 1, ಸಿಂಹಾದ್ರಿ, ಸೈ ಅಂತಹ ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಕಂಡಿದ್ದ ರಾಜಮೌಳಿಯ ನಾಲ್ಕನೇ ಚಿತ್ರ ಛತ್ರಪತಿ.

ಕನ್ನಡದಲ್ಲಿಯೂ ರೀಮೇಕ್ ಆಗಿದೆ
ಅಂದ್ಹಾಗೆ, ಕನ್ನಡದಲ್ಲಿಯೂ ಛತ್ರಿಪತಿ ಸಿನಿಮಾವನ್ನು ಅದೇ ಹೆಸರಿನಲ್ಲಿ ರೀಮೇಕ್ ಮಾಡಿದ್ದರು. ಹೊಸ ನಟ ಸಿದ್ಧಾಂತ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ದಿನೇಶ್ ಗಾಂಧಿ ನಿರ್ದೇಶಿಸಿ, ನಿರ್ಮಾಣ ಸಹ ಮಾಡಿದ್ದರು. ತೆಲುಗಿನಲ್ಲಿ ಹಿಟ್ ಆಗಿದ್ದ ಈ ಚಿತ್ರ ಕನ್ನಡದಲ್ಲಿ ಅಷ್ಟು ಸದ್ದು ಮಾಡಲಿಲ್ಲ.

ಹಿಂದಿಯಲ್ಲಿ ಯಾರು?
ಹದಿನೈದು ವರ್ಷದ ಬಳಿಕ ಛತ್ರಪತಿ ಸಿನಿಮಾವನ್ನು ಹಿಂದಿಯಲ್ಲಿ ರೀಮೇಕ್ ಮಾಡಲು ನಿರ್ಮಾಪಕರು ಆಸಕ್ತಿ ತೋರಿದ್ದಾರಂತೆ. ತೆಲುಗು ನಟ ಬೆಲ್ಲಕೊಂಡ ಶ್ರೀನಿವಾಸ್ ಅವರನ್ನ ನಾಯಕರನ್ನಾಗಿಸಿ ಹಿಂದಿಯಲ್ಲಿ ಸಿನಿಮಾ ಮಾಡುವ ತಯಾರಿ ನಡೆದಿದೆಯಂತೆ. ಬೆಲ್ಲಕೊಂಡ ಶ್ರೀನಿವಾಸ್ ಕಳೆದ ವರ್ಷ 'ರಾಕ್ಷಸಡು' ಎಂಬ ಸಿನಿಮಾ ಮಾಡಿದ್ದರು. ಆದ್ರೆ, ಇದು ಎಷ್ಟರ ಮಟ್ಟಿಗೆ ನಿಜಾ ಆಗುತ್ತೆ ಎನ್ನುವುದು ಕಾದು ನೋಡಬೇಕಿದೆ.


Click it and Unblock the Notifications











