»   » ಅಮರೇಂದ್ರ 'ಬಾಹುಬಲಿ' ಪ್ರಭಾಸ್ ಗೆ ಮದ್ವೆ ಅಂತೆ..!

ಅಮರೇಂದ್ರ 'ಬಾಹುಬಲಿ' ಪ್ರಭಾಸ್ ಗೆ ಮದ್ವೆ ಅಂತೆ..!

Posted By: ಸೋನು ಗೌಡ
Subscribe to Filmibeat Kannada

ತೆಲುಗಿನ ಬಾಹುಬಲಿ ಖ್ಯಾತಿಯ ಯಶಸ್ವಿ ನಟ ಪ್ರಭಾಸ್ ಅವರಿಗೆ ಕಂಕಣ ಭಾಗ್ಯ ಮೂಡಿಬಂದಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಸಿನಿಮಾ ಮುಗಿದ ನಂತರ 'ರೆಬೆಲ್' ಪ್ರಭಾಸ್ ಅವರು ಮದುವೆಯಾಗಲಿದ್ದಾರೆ.

36 ವರ್ಷದ ನಟ ಪ್ರಭಾಸ್ ಅವರು ತಮ್ಮ ಜೀವನ ಸಂಗಾತಿಯ ಆಯ್ಕೆ ಮಾಡುವ ಕೆಲಸವನ್ನು ಮನೆಯ ಹಿರಿಯರಿಗೆ ಬಿಟ್ಟುಕೊಟ್ಟಿದ್ದಾರೆ. ಅದರಂತೆ ಅವರ ಮನೆಯ ಹಿರಿಯ ಸದಸ್ಯರು ಇದೀಗ ಸರಿಯಾದ ಹುಡುಗಿಯನ್ನು ಆಯ್ಕೆ ಮಾಡಿದ್ದಾರೆ.

'Baahubali' Actor Prabhas is all set to get married

'ರೆಬೆಲ್' ಪ್ರಭಾಸ್ ಅವರನ್ನು ಕೈ ಹಿಡಿಯುವ ಹುಡುಗಿ ಈಗ ಬಿ.ಟೆಕ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಮುಂದಿನ ವರ್ಷ ಅವರ ವ್ಯಾಸಂಗ ಪೂರ್ಣಗೊಳ್ಳಲಿರುವುದರಿಂದ ಮುಂದಿನ ವರ್ಷಕ್ಕೆ ಮದುವೆ ಎಂದು ನಿರ್ಧಾರ ಮಾಡಲಾಗಿದೆ.[ಹೃತಿಕ್ 'ಧೂಮ್-4'ಗೆ ವಿಲನ್ ಆಗಲಿದ್ದಾರ?, 'ಬಾಹುಬಲಿ' ಶಿವುಡು!]

ಇನ್ನು ಪ್ರಭಾಸ್ ಕೈ ಹಿಡಿಯಲಿರುವ ಹುಡುಗಿ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನವರು. ಮುಂದಿನ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂದು ಬಲ್ಲ ಮಾಹಿತಿಗಳು ಸುದ್ದಿ ಮಾಡಿವೆ.

'Baahubali' Actor Prabhas is all set to get married

ಇತ್ತೀಚೆಗೆ ಗುಲಾಬಿ ಬಣ್ಣದ ಸೀರೆಯುಟ್ಟ ಯುವತಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಆಕೆಯೇ ಪ್ರಭಾಸ್ ಅವರ ಭಾವಿ ಪತ್ನಿ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಜೊತೆಗೆ ಮಾಧ್ಯಮಗಳಲ್ಲಿಯೂ ಇದು ಬಿತ್ತರಗೊಂಡಿತ್ತು. ಇದರಿಂದ ಅವರ ಕುಟುಂಬದವರು ಕಿರಿಕಿರಿಯನ್ನು ಕೂಡ ಅನುಭವಿಸಿದ್ದಾರೆ.

ಆ ಸಂದರ್ಭದಲ್ಲಿ ನಟ ಪ್ರಭಾಸ್ ಅವರ ದೊಡ್ಡಪ್ಪ ಹಿರಿಯ ನಟ ಕೃಷ್ಣಂ ರಾಜು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಂಡ ಫೋಟೋದಲ್ಲಿರುವ ಹುಡುಗಿ ನಮ್ಮ ಕುಟುಂಬದವರಿಗೆ ಬಹಳ ವರ್ಷಗಳಿಂದ ಪರಿಚಯ.

'ನಾವು ಕುಟುಂಬ ಸ್ನೇಹಿತರು. ಪ್ರಭಾಸ್ ಮದುವೆ ವಿಚಾರವಾಗಿ ನಾವ್ಯಾರು ಇದುವರೆಗೂ ಚರ್ಚಿಸಿಲ್ಲ. 'ಬಾಹುಬಲಿ 2' ಬಿಡುಗಡೆಯಾದ ನಂತರವೇ ಪ್ರಬಾಸ್ ಮದುವೆಯಾಗುವುದು. ಆತನ ಮದುವೆ ವಿಷಯವನ್ನು ನಾವೇ ಮಾಧ್ಯಮದವರಿಗೆ ತಿಳಿಸುತ್ತೇವೆ. ಇಲ್ಲದ ವದಂತಿಗಳನ್ನು ಹರಡುವುದು ಬೇಡ' ಎಂದು ಖಾರವಾಗಿ ನುಡಿದಿದ್ದರು.

ಅದೇನೇ ಇರಲಿ 'ಬಾಹುಬಲಿ' ಚಿತ್ರದ ನಂತರ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ ನಟ ಪ್ರಭಾಸ್ ಅವರ ಮದುವೆ ಎಂದರೆ, ಅದರಲ್ಲೂ ಹುಡುಗಿಯರಿಗೆ ಸ್ವಲ್ಪ ಬೇಸರದ ಸಂಗತಿ ಆಗಿರಬಹುದು.

English summary
Looks like spicy gossips around weddings and film industry are inseparable. This time, the sparrow is chirping about Telugu actor, Prabhas, who has become a national star after the release of SS Rajamouli’s, Baahubali: The Beginning.Yes, according to various reports, the actor will be tying the knot after completing the shooting for Baahubali: The Conclusion, in December 2016.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X