For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ಶಿವಗಾಮಿ ರೇಂಜ್ ಏನು ಕಮ್ಮಿಯಿಲ್ಲ: ಒಂದು ಸಂಚಿಕೆಗೆ ಲಕ್ಷ ಲಕ್ಷ ಸಂಭಾವನೆ!

  |

  ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದರೂ ರಮ್ಯಾ ಕೃಷ್ಣ ಕನ್ನಡಿಗರಿಗೂ ಚಿರಪರಿಚಿತ. ಕ್ರೇಜಿಸ್ಟಾರ್ ರವಿಚಂದ್ರನ್, ಉಪೇಂದ್ರ ಸೇರಿದಂತೆ ಕನ್ನಡದ ದಿಗ್ಗಜರೊಂದಿಗೆ ರಮ್ಯಾ ಕೃಷ್ಣ ನಟಿಸಿದ್ದಾರೆ. ಹೀಗಾಗಿ ರಮ್ಯಾ ಕೃಷ್ಣ ಕನ್ನಡಿಗರಿಗೆ ಚಿರಪರಿಚಿತ.

  ರಮ್ಯಾಕೃಷ್ಣ ಕೇವಲ ನಟನೆಯಿಂದಷ್ಟೇ ಅಲ್ಲ. ಸೌಂದರ್ಯದಿಂದಲೂ ಮನಗೆದ್ದ ನಟಿ. ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಸಿನಿಮಾದಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿಸಿದ ಬಳಿಕವಂತೂ ರಮ್ಯಾ ಕೃಷ್ಣಗೆ ಬೇಡಿಕೆ ದುಪ್ಪಟ್ಟಾಗಿದೆ. ಇತ್ತೀಚೆಗೆ ರಮ್ಯಾಕೃಷ್ಣ 'ಲೈಗರ್' ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ತಾಯಿಯಾಗಿ ನಟಿಸಿದ್ದರು.

  ಡಾನ್ಸ್​ ರಿಯಾಲಿಟಿ ಶೋಗೆ ಜಡ್ಜ್​ ಆದ ಶಿವಗಾಮಿಡಾನ್ಸ್​ ರಿಯಾಲಿಟಿ ಶೋಗೆ ಜಡ್ಜ್​ ಆದ ಶಿವಗಾಮಿ

  'ಬಾಹುಬಲಿ'ಯ ಶಿವಗಾಮಿ ಕೇವಲ ಹಿರಿತೆರೆಯಲ್ಲಷ್ಟೇ ಅಲ್ಲ. ಕಿರುತೆರೆಯಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಟಾಲಿವುಡ್‌ನ ಪ್ರತಿಷ್ಠಿತ ಓಟಿಟಿ ವೇದಿಕೆ ಆಹಾದಲ್ಲಿ ಪ್ರಸಾರ ಆಗಲಿರೋ ರಿಯಾಲಿಟಿ ಶೋನಲ್ಲಿ ರಮ್ಯಾ ಕೃಷ್ಣ ಕಾಣಿಸಿಕೊಳ್ಳಿದ್ದಾರಂತೆ. ಈ ಕಾರ್ಯಕ್ರಮ ವಿಶಿಷ್ಟ ಪರಿಕಲ್ಪನೆಯೊಂದಿಗೆ ಮೂಡಿ ಬರಲಿದೆ. ಈ ಕಾರ್ಯಕ್ರಮಕ್ಕೆ 'ಡ್ಯಾನ್ಸ್ ಐಕಾನ್' ಎಂದು ಹೆಸರಿಡಲಾಗಿದೆ. ಹಾಗಿದ್ದರೆ, ಈ ಶೋನಲ್ಲಿ ರಮ್ಯಾಕೃಷ್ಣ ಪಾತ್ರವೇನು? ಪಡೆದ ಸಂಭಾವನೆ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಪ್ರೋಮೊ ವೈರಲ್

  ಪ್ರೋಮೊ ವೈರಲ್

  ಆಹಾ ಓಟಿಟಿಯಲ್ಲಿ ಪ್ರಸಾರ ಆಗಲಿರುವ 'ಡ್ಯಾನ್ಸ್ ಐಕಾನ್' ಕಾರ್ಯಕ್ರಮದ ಪ್ರೋಮೊ ಈಗಾಗಲೇ ರಿಲೀಸ್ ಆಗಿದೆ. ಪ್ರೋಮೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಈ ಫ್ರೋಮೊ ನೋಡಿದವರಿಗೆ ರಮ್ಯಾಕೃಷ್ಣ ಪಾತ್ರವೇನು ಅನ್ನೋದು ಈಗಾಗಲೇ ಮನವರಿಕೆಯಾಗಿ ಹೋಗಿದೆ.

  ತೀರ್ಪುಗಾರರಾದ ರಮ್ಯಾ ಕೃಷ್ಣ

  ತೀರ್ಪುಗಾರರಾದ ರಮ್ಯಾ ಕೃಷ್ಣ

  ಟಾಲಿವುಡ್‌ನ ಜನಪ್ರಿಯ ನೃತ್ಯ ನಿರ್ದೇಶಕ ಶೇಖರ್ ಮಾಸ್ಟರ್ ಹಾಗೂ ರಮ್ಯಾ ಕೃಷ್ಣ ಡ್ಯಾನ್ಸ್ ಐಕಾನ್ ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಶೋವನ್ನು ಓಂಕಾರ್ ನಿರೂಪಣೆ ಮಾಡಲಿದ್ದಾರೆ. ಸದ್ಯ ಚರ್ಚೆಯಾಗುತ್ತಿರೋದು ವಿಷಯ ಏನಂದ್ರೆ, ಈ ರಿಯಾಲಿಟಿ ಶೋಗೆ ರಮ್ಯಾ ಕೃಷ್ಣ ಸಿಕ್ಕಾಪಟ್ಟೆ ಸಂಭಾವನೆ ಪಡೆಯುತ್ತಿದ್ದಾರಂತೆ. ಆ ಬಗ್ಗೆನೇ ಟಾಲಿವುಡ್‌ನಲ್ಲಿ ಚರ್ಚೆ ಆರಂಭ ಆಗಿದೆ.

  ರಮ್ಯಾ ಕೃಷ್ಣಗೆ ಲಕ್ಷ ಲಕ್ಷ ಸಂಭಾವನೆ

  ರಮ್ಯಾ ಕೃಷ್ಣಗೆ ಲಕ್ಷ ಲಕ್ಷ ಸಂಭಾವನೆ

  'ಡ್ಯಾನ್ಸ್ ಐಕಾನ್' ರಿಯಾಲಿಟಿ ಶೋ ಪ್ರತಿ ಸಂಚಿಕೆಗೆ ರಮ್ಯಾ ಕೃಷ್ಣ 4.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆಂದು ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಆದರೆ, ಈ ಅಧಿಕೃತವಾಗಿ ಎಲ್ಲೂ ಹೇಳಿಕೆ ಬಂದಿಲ್ಲ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ, ರಿಯಾಲಿಟಿ ಶೋಗೆ ತೀರ್ಪುಗಾರರಾಗಲು ಈ ರೇಂಜ್‌ಗೆ ಯಾರು ಸಂಭಾವನೆ ಪಡೆದಿಲ್ಲ ಎಂದೂ ಕೂಡ ಚರ್ಚೆಯಾಗುತ್ತಿದೆ. ಸದ್ಯ ಬಿಗ್ ಬಜೆಟ್ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರೋ ರಮ್ಯಾ ಕೃಷ್ಣ ಕೋಟಿವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

  'ಲೈಗರ್‌'ಗೆ ಪಡೆದ ಸಂಭಾವನೆ ಎಷ್ಟು?

  'ಲೈಗರ್‌'ಗೆ ಪಡೆದ ಸಂಭಾವನೆ ಎಷ್ಟು?

  ರಮ್ಯಾ ಕೃಷ್ಣ ಇತ್ತೀಚೆಗೆ 'ಲೈಗರ್' ಸಿನಿಮಾದಲ್ಲಿ ನಟಿಸಿದ್ದರು. ವಿಜಯ್ ದೇವರಕೊಂಡಗೆ ತಾಯಿಯಾಗಿ ರಮ್ಯಾ ಕೃಷ್ಣ ಅಭಿನಯಿಸಿದ್ದರು. ಆದರೆ, 'ಲೈಗರ್' ಬಾಕ್ಸಾಫೀಸ್‌ನಲ್ಲಿ ಸೋಲುಂಡಿದೆ. ಸದ್ಯ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಶಿವಗಾಮಿ ಈ ಸಿನಿಮಾಗಾಗಿ ಸುಮಾರು 1.5 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಈ ಮೂಲಕ ರಮ್ಯಾಕೃಷ್ಣ ಬಹುತೇಕ ಸ್ಟಾರ್ ಹೀರೊಯಿನ್ ಪಡೆಯುವ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ.

  English summary
  Baahubali Fame Shivagavi Aka Ramya Krishnan Remuneration For Aha Dance Show, Know More.
  Thursday, September 22, 2022, 18:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X