ಪ್ರಭಾಸ್ ಮದುವೆ ಬಗ್ಗೆ ಬಂದ ಬ್ರೇಕಿಂಗ್ ನ್ಯೂಸ್: ದಿನ ಮತ್ತು ಮುಹೂರ್ತ ಫಿಕ್ಸ್

By Bharath Kumar

ಕಟ್ಟಪ್ಪ, ಬಾಹುಬಲಿಯನ್ನ ಯಾಕೆ ಕೊಂದ......? ಈ ಪ್ರಶ್ನೆ ಆಲ್ ಮೋಸ್ಟ್ ಒಂದೂವರೆ ವರ್ಷ ಇಡೀ ಚಿತ್ರಜಗತ್ತನ್ನ ಕಾಡಿತ್ತು. ಅದಾದ ನಂತರ ಮತ್ತೆ ಸಿನಿರಸಿಕರನ್ನ ಕಾಡಿರುವ ಪ್ರಶ್ನೆ ಬಾಹುಬಲಿ ನಟ ಪ್ರಭಾಸ್ ಮದುವೆ ಯಾವಾಗ.?

ಪ್ರಭಾಸ್ ಮದುವೆ ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇದೆ. ಈ ಮೊದಲು ಬಾಹುಬಲಿ ಚಿತ್ರದ ನಂತರ ಮದುವೆ ಮಾಡಿಕೊಳ್ಳುತ್ತೇನೆ ಎಂದು ಪ್ರಭಾಸ್ ಹೇಳಿದ್ದರು. ಅಲ್ಲಿಂದ ಮತ್ತೆ ಮದುವೆ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಇದೀಗ, ಪ್ರಭಾಸ್ ಕಡೆಯಿಂದ ಬ್ರೇಕಿಂಗ್ ನ್ಯೂಸ್ ಬಂದಿದೆ.

ಪ್ರಭಾಸ್ ಅವರ ಅಂಕಲ್ ನಟ ಕೃಷ್ಣಂರಾಜು ಅವರು ಈಗ ಪ್ರಭಾಸ್ ಮದುವೆ ಬಗ್ಗೆ ಮಾತನಾಡಿದ್ದು, ಇದು ಪಕ್ಕಾ ನ್ಯೂಸ್ ಅಂತಿದ್ದಾರೆ. ಮುಂದೆ ಓದಿ....

ಮದುವೆ ಪ್ರಭಾಸ್ ಗೆ ಬಿಟ್ಟಿದ್ದು

ಮದುವೆ ಪ್ರಭಾಸ್ ಗೆ ಬಿಟ್ಟಿದ್ದು

''ಮದುವೆ ಮಾಡಿಕೊ ಎಂದು ಒತ್ತಾಯ ಮಾಡಲು ಪ್ರಭಾಸ್ ಚಿಕ್ಕ ಹುಡುಗನಲ್ಲ. ಮದುವೆ ಎನ್ನುವುದು ಆತನ ವೈಯಕ್ತಿಕ. ನಾವು ದೊಡ್ಡವರಾಗಿ ಅದನ್ನ ನೆರವೇರಿಸಲು ಸಾಧ್ಯ. ಸದ್ಯ, ಪ್ರಭಾಸ್ ಅವರಿಗೆ ಹುಡುಗಿಯನ್ನ ಹುಡುಕುತ್ತಿದ್ದೇವೆ. ಇನ್ನು ಯಾವ ಹುಡುಗಿಯೂ ಪಕ್ಕಾ ಆಗಿಲ್ಲ'' ಎಂದು ಕೃಷ್ಣಂ ರಾಜು ತಿಳಿಸಿದ್ದಾರೆ.

'ಸಾಹೋ' ಚಿತ್ರದ ನಂತರ ದಾಂಪತ್ಯ

'ಸಾಹೋ' ಚಿತ್ರದ ನಂತರ ದಾಂಪತ್ಯ

''ಆ ಕಡೆ ಪ್ರಭಾಸ್ ಸಾಹೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಆದ್ಮೇಲೆ ಪ್ರಭಾಸ್ ಮದುವೆ ಆಗೋದು ಪಕ್ಕಾ'' ಎಂದು ಕೃಷ್ಣಂರಾಜು ಹೇಳಿದ್ದಾರೆ.

ಅನುಷ್ಕಾ ಜೊತೆ ಮದುವೆ ಸುಳ್ಳು

ಅನುಷ್ಕಾ ಜೊತೆ ಮದುವೆ ಸುಳ್ಳು

ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಮದುವೆ ಎನ್ನಲಾಗಿದೆ. ಆದ್ರೆ, ಅದು ಬರಿ ಸುಳ್ಳು ಮತ್ತು ವದಂತಿಯಷ್ಟೇ ಎನ್ನುತ್ತಿವೆ. ಪ್ರಭಾಸ್ ಕುಟುಂಬ. ಅನುಷ್ಕಾ ಕೂಡ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸಿನಿಮಾ ಮಾಡ್ತಿದ್ದಾರೆ.

ಸಂಕ್ರಾಂತಿಗೆ 'ಸಾಹೋ' ಬರ್ತಿದೆ

ಸಂಕ್ರಾಂತಿಗೆ 'ಸಾಹೋ' ಬರ್ತಿದೆ

ಹಿಂದಿ, ತೆಲುಗು ಹಾಗೂ ತಮಿಳು ಸೇರಿದಂತೆ ಬಹುಭಾಷೆಯಲ್ಲಿ ತಯಾರಾಗುತ್ತಿರುವ ಸಾಹೋ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುಂದಿನ ವರ್ಷ ಬಿಡುಗಡೆಯಾಗುತ್ತೆ. ಸುಮಾರು 300 ಕೋಟಿ ವೆಚ್ಚದಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದ್ದು, ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಾಯಕಿಯಾಗಿದ್ದಾರೆ.

More from Filmibeat

English summary
Baahubali star Prabhas's marriage have been doing the rounds for a while and reports suggest that he will get married next year. After the release of his film Saaho with Shraddha Kapoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X