»   » ಸೆನ್ಸಾರ್‌ ತಿಕ್ಕಲ ವಿರುದ್ಧಕುರಿಗಳೊಡೆಯನ ಯುದ್ಧ

ಸೆನ್ಸಾರ್‌ ತಿಕ್ಕಲ ವಿರುದ್ಧಕುರಿಗಳೊಡೆಯನ ಯುದ್ಧ

Subscribe to Filmibeat Kannada

*ಎಸ್ಕೆ. ಶಾಮಸುಂದರ

ಸೆನ್ಸಾರ್‌ ಮಂಡಳಿಯಲ್ಲಿ ಇರುವವರೆಲ್ಲ ಮೂರ್ಖರು, ಮುಠ್ಠಾಳರು ಹಾಗೂ ಭ್ರಷ್ಟರು - ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ವಿಜೇತ, ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ಆರೋಪವಿದು. ತಮ್ಮ ಕುರಿಗಳು ಸಾರ್‌ ಕುರಿಗಳು ಸಿನಿಮಾಕ್ಕೆ ಸೆನ್ಸಾರ್‌ ಎತ್ತಿರುವ ಆಕ್ಷೇಪಗಳ ಹಿನ್ನೆಲೆಯಲ್ಲಿ ಬಾಬು ಕೆಂಡವಾಗಿದ್ದಾರೆ.

ಇಷ್ಟಕ್ಕೂ, ಸಿನಿಮಾಗಳ ಗುಣಮಟ್ಟವನ್ನು ನಿರ್ಧರಿಸಲು ಕತ್ತರಿ ಹಿಡಿದು ಕೂತಿರುವ ಸೆನ್ಸಾರ್‌ ಮಂಡಳಿಯಾದರೂ ಎಂಥಾದ್ದು . ಅದೊಂದು, ಕೆಲಸಕ್ಕೆ ಬಾರದವರ ಹಾಗೂ ಬರುವವರ ಸಂತೆ. ಕುರಿಗಳು ... ಸಿನಿಮಾ ಹಿನ್ನೆಲೆಯಲ್ಲಿ ಬಾಬು ಎತ್ತಿರುವ ಇಂಥಾ ಆರೋಪಗಳು ಸೆನ್ಸಾರ್‌ ಮಂಡಳಿಯ ಕಾರ್ಯ ವೈಖರಿಗೆ ಕನ್ನಡಿ ಹಿಡಿಯುವಂತಿವೆ.

ನೀವು ಸೆನ್ಸಾರ್‌ ಮಂಡಳಿಯ ಸದಸ್ಯರಾಗಬೇಕಾ ?

ಯಾಕಾಗಬಾರದು ಅನ್ನುತ್ತಾರೆ ಬಾಬು. ಅವರು ಹೇಳುವಂತೆ - ಸೆನ್ಸಾರ್‌ ಮಂಡಳಿಯ ಸದಸ್ಯರು ಯಾರಾಗಬೇಕು ಅನ್ನುವ ಬಗೆಗೆ ನಿರ್ದಿಷ್ಟ ಮಾನದಂಡಗಳಿಲ್ಲ . ಮಂಡಳಿಯ ಸದಸ್ಯರ ಆಯ್ಕೆಯಲ್ಲಿ ಮುಖ್ಯ ಪಾತ್ರ ವಹಿಸುವುದು ವಶೀಲಿ ಬಾಜಿಯೇ ಹೊರತು ಸದಸ್ಯರ ಅರ್ಹತೆಯಲ್ಲ . ಸಿ.ಎಂ. ಇಬ್ರಾಹಿಂ ಸಚಿವರಾಗಿದ್ದ ಸಮಯದಲ್ಲಿ ತಮ್ಮ ಹಿಂಬಾಲಕರನ್ನು ಸೆನ್ಸಾರ್‌ ಮಂಡಳಿಯ ಸದಸ್ಯರಾಗಿಸುವ ಪ್ರಯತ್ನ ನಡೆಸಿದ್ದರು. ಒಬ್ಬ ಮಂತ್ರಿಯಂತೂ ತಮ್ಮ ಕಾರಿನ ಡ್ರೆೃವರ್‌ನನ್ನೇ ಮಂಡಳಿಯ ಸದಸ್ಯನಾಗಿಸಲು ಯತ್ನಿಸಿದ್ದರು (ಬಾಬು ಆ ಸಚಿವರ ಹೆಸರು ಹೇಳಲಿಲ್ಲ ). ಬಾಬು ಸತ್ಯಗಳನ್ನು ಸ್ಫೋಟಿಸುತ್ತಾರೆ.

ಪ್ರಸ್ತುತ, ಸೆನ್ಸಾರ್‌ ಮಂಡಳಿ ಎಂಥೆಂಥಾ ಸದಸ್ಯ ಶಿರೋಮಣಿಗಳನ್ನು ಒಳಗೊಂಡಿದೆ ಅನ್ನುವ ಪಟ್ಟಿಯನ್ನು ಬಾಬು ನೀಡುತ್ತಾರೆ. ಎಚ್‌.ಎಸ್‌. ಪಾರ್ವತಿ, ವಿ.ಎನ್‌. ಸುಬ್ಬರಾವ್‌, ಸುರೇಖಾ, ಭಾಷಾ, ಹರಿಕೃಷ್ಣನ್‌, ಆರ್‌. ಲಕ್ಷ್ಮಣ್‌, ಸಿ. ಸೀತಾರಾಂ, ಶ್ರೀಧರ್‌, ಬಿ. ಸರೋಜಾದೇವಿ.. ಇವರಲ್ಲಿ ಯಾರು ಹಿತವರು, ಯಾರು ಅಯೋಗ್ಯರು ಅನ್ನುವುದನ್ನು ನೀವೇ ನಿರ್ಧರಿಸಿ.

ಮೊಸರಲ್ಲಿ ಕಲ್ಲು ಹುಡುಕಿದ ಒಲ್ಲದ ಗಂಡ

ಕುರಿಗಳು .. ಸಿನಿಮಾ ನೋಡಿದ ಸೆನ್ಸಾರ್‌ ಮಂಡಳಿಯ ರಿವೈಸಿಂಗ್‌ ಕಮಿಟಿ ಸಿನಿಮಾಕ್ಕೆ ಏಳು ಕಟ್‌ಗಳನ್ನು ಸೂಚಿಸಿದೆ. ಸಮಾಜದ ಸ್ವಾಸ್ಥ್ಯಕ್ಕೆ ಅವುಗಳು ಮಾರಕ ಅನ್ನುವುದು ಮಂಡಳಿಯ ಆರೋಪ. ಅವುಗಳಲ್ಲಿ ಮೂರರ ಸ್ಯಾಂಪಲ್‌ ಬಾಬು ಪ್ರತಿಕ್ರಿಯೆಯಾಂದಿಗೆ ಇಲ್ಲಿವೆ.

ದೃಶ್ಯ 1 - ಒಬ್ಬ ಹುಡುಗ. ಅವನಿಗೆ ಬೆಟ್ಟು ಚೀಪುವ ಅಭ್ಯಾಸ. ಹೆಸರು ನಕ್ಕೀರನ್‌. ಮತ್ತೊಬ್ಬ ಹುಡುಗ, ಹೆಸರು ವೀರಪ್ಪನ್‌. ಇಬ್ಬರನ್ನೂ ಕಳ್ಳರು ಅನ್ನುತ್ತಾರೆ ನಿರ್ದೇಶಕರು. ಕಳ್ಳರು ಅಂದದ್ದು ಯಾಕೆ ಅನ್ನುವುದು ಮಂಡಳಿಯ ಆಕ್ಷೇಪ.

ಬಾಬು - ವೀರಪ್ಪನ್‌ ಹಾಗೂ ನಕ್ಕೀರನ್‌ ಬಗ್ಗೆ ಇಡೀ ಜಗತ್ತಿಗೇ ಗೊತ್ತಿದೆ. ಅವರನ್ನು ಕಳ್ಳರು ಅನ್ನದೆ ಇನ್ನೇನು ದೇವತೆಗಳು ಅನ್ನಬೇಕೆ ? ಅಂದಹಾಗೆ, ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada