ಮಹಾನಾಯಕರಾಗುವ ಹಾದಿಯಲ್ಲಿ ಸಿಂಗ್‌ ಬಾಬು

By Staff

*ಸುಂದರ್‌

ಎಸ್‌. ವಿ. ರಾಜೇಂದ್ರ ಸಿಂಗ್‌ ಬಾಬು ಅವರಿಗೆ ತಮ್ಮ 50ನೆಯ ವಯಸ್ಸಿನಲ್ಲಿ ಚಿತ್ರರಂಗದ ಏಕೈಕ ನಾಯಕನಾಗುವ ಉಮೇದು ಬಂದಿದೆ. ಇದೀಗಷ್ಟೇ ಕಣ್ಣು ಬಿಡುತ್ತಿರುವ ಕಲಾವಿದ ತಂತ್ರಜ್ಞರ ಮಹಾಸಂಸ್ಥೆಗೆ ಅವರೇ ಅಧ್ಯಕ್ಷ. ಈಗಾಗಲೇ ನಿರ್ದೇಶಕರ ಸಂಘದ ಖಾಯಂ ಅಧ್ಯಕ್ಷ ಎಂಬ ಬಿರುದು ಪಡೆದುಕೊಂಡಿರುವ ಬಾಬು ಅವರಿಗೆ ಈ ಹೊಸ ಆಸೆ ಯಾಕೆ ಮೂಡಿತು ಅನ್ನೋದು ಮಿಲಿಯನ್‌ ಡಾಲರ್‌ ಪ್ರಶ್ನೆ.

ಬಹುಶಃ ಬಾಬು ಇತಿಹಾಸವನ್ನು ಒಂದು ಗುಲಗುಂಜಿಯಷ್ಟು ಕೆದಕಿದರೆ ಈ ಪ್ರಶ್ನೆಗೆ ಸಣ್ಣ ಉತ್ತರ ಸಿಗಬಹುದೇನೋ, ಮೂಲತಃ ಬಾಬು ಒಳ್ಳೇ ತಂತ್ರಜ್ಞ. ಅನಂತರ ಇದೇ ಹೊಗಳಿಕೆ ಅವರಿಗೇ ಅಜೀರ್ಣವಾಗುವಷ್ಟು ಸಲ ಬಳಕೆಯಾಗುವುದಕ್ಕೆ ಮುಖ್ಯ ಕಾರಣ ಅದರಿಂದಾಚೆಗೆ ಅವರು ಮುಂದುವರಿಯದೇ ಹೋದದ್ದು. ‘ನಾಗರಹೊಳೆ’ಯಂಥ ಮಕ್ಕಳ ಚಿತ್ರದಲ್ಲೇ ಆಗಲಿ, ‘ಅಂತ’ದಂಥಾ ರಾಜಕೀಯ ಚಿತ್ರದಲ್ಲಿ ಅಥವಾ ‘ಬಂಧನ’ದಂಥಾ ಸೆಂಟಿಮೆಂಟ್‌ ಚಿತ್ರದಲ್ಲೇ ಆಗಲಿ ಬಾಬು ಮಿಂಚಿದ್ದು ತಂತ್ರಜ್ಞನಾಗಿಯೇ. ಅದೃಷ್ಟವಶಾತೋ ಅಥವಾ ದುರದೃಷ್ಟವಶಾತೋ ಅನಂತರ ಈ ತಂತ್ರಜ್ಞ ಆಯ್ಕೆ ಮಾಡಿಕೊಂಡ ಕಥಾವಸ್ತುಗಳೆಲ್ಲಾ ಮನುಷ್ಯರ ನಡುವಣ ಸಂಬಂಧ, ಮಾನವೀಯತೆ, ತ್ಯಾಗ, ಪ್ರೇಮ ಕಾಮಕ್ಕೆ ಸಂಬಂಧಿಸಿದ್ದು. ಉದಾಹರಣೆಗೆ ಮುತ್ತಿನ ಹಾರ, ಹಿಮಪಾತ, ಹೂವುಹಣ್ಣು , ಇತ್ಯಾದಿ. ಕಾದಂಬರಿ ಆಧಾರಿತ ಕತೆಗಳಾದ್ದರಿಂದ ಸಹಜವಾಗಿಯೇ ಅಲ್ಲೊಂದು ಮಾನವೀಯ ಸಂಬಂಧಗಳ ಝಲಕ್‌ ಇದ್ದೇ ಇತ್ತು. ಆದರೆ ಬಾಬು ನಿರೂಪಣೆಯಲ್ಲಿ ಇದಕ್ಕೆ ಅರ್ಧದಷ್ಟೇ ನ್ಯಾಯ ಸಂದಾಯವಾಯಿತು. ಯಾಕೆಂದರೆ ಅವರೊಬ್ಬ ಒಳ್ಳೇ ತಂತ್ರಜ್ಞ.

ಹೊಸಬರನ್ನು ಪರಿಚಯಿಸುವ ಅಭ್ಯಾಸಕ್ಕೆ ತಿಲಾಂಜಲಿ ಇಟ್ಟರು

ಬಂಧನದ ನಂತರ ಯಾವುದೇ ಚಿತ್ರ ಜನಮೆಚ್ಚುಗೆ ಪಡೆಯದೇ ಇದ್ದಾಗ ಬಾಬು ಹತಾಶರಾದರು. ತೆರೆಯೀಚೆಗೂ ತಂತ್ರಜ್ಞನಾದರು. ಪ್ರೇಕ್ಷಕರಿಂದ ತಿರಸ್ಕೃತರಾಗುವ ಭಯ ಕಾಡಿದ ತಕ್ಷ ಣ ಹುಶಾರಾದರು. ಇಂಗ್ಲಿಷ್‌ ಚಿತ್ರಗಳ ಕ್ಯಾಸೆಟ್‌ ನೋಡಿದರು. ಇಂಗ್ಲಿಷ್‌ ಕತೆಗಳನ್ನು ಓದಿದರು. ಅದೇ ಲೆವೆಲ್‌ನಲ್ಲಿ ಯೋಚನೆ ಮಾಡುವ ಸಾಹಿತಿಗಳನ್ನೂ ಹುಡುಕಿದರು. ಹೊಸಬರನ್ನು ಪರಿಚಯಿಸುವ ಒಳ್ಳೇ ಅಭ್ಯಾಸಕ್ಕೆ ತಿಲಾಂಜಲಿ ಇಟ್ಟರು. ಸ್ಟಾರ್‌ಗಳ ಹಿಂದೆ ಬಿದ್ದರು. ಹೀಗೆ ಸಿದ್ಧವಾಗಿದ್ದು ಮುಂಗಾರಿನ ಮಿಂಚು ಮತ್ತು ಭೂಮಿತಾಯಿಯ ಚೊಚ್ಚಿಲ ಮಗ ಚಿತ್ರಗಳು. ಯಥಾಪ್ರಕಾರ ವಿಮರ್ಶಕರು ಹೊಗಳಿದರು, ಬಾಬು ಬೀಗಿದರು. ನಿರ್ಮಾಪಕ ಜೈಜಗದೀಶ್‌ ಒಳಗೊಳಗೇ ಕೊರಗಿದರು. ಆದರೇನಂತೆ ಬಾಬು ಅವರಿಗೆ ಸುದ್ದಿಯಲ್ಲಿರಬೇಕಾಗಿತ್ತು.

ಆದರೆ ಬಾಬು ಅವರ ತಂತ್ರಗಳು ಬೂಮ್‌ ರಾಂಗ್‌ ಆಗಿದ್ದು ಭಾರತ್‌-2000 ಎಂಬ ಚಿತ್ರದಲ್ಲಿ. ಎರಡೂ ಭಾಷೆಯಲ್ಲಿ ತಯಾರಾಗುತ್ತಿರುವ ಚಿತ್ರ ಎಂದು ಪ್ರಚಾರ ಮಾಡಲಾಗಿದ್ದರೂ ಚಿತ್ರದ ಸಂಭಾಷಣೆ ಟ್ರಾಕ್‌ ಮೂಲತಃ ತೆಲುಗಿನಲ್ಲಿತ್ತು. ಅನಂತರ ಅದನ್ನು ಕನ್ನಡಕ್ಕೆ ಡಬ್‌ ಮಾಡಲಾಯಿತು. ಡಬ್ಬಿಂಗ್‌ ಚಿತ್ರಗಳಿಗೆ ಕನ್ನಡದಲ್ಲಿ ಪ್ರವೇಶವಿಲ್ಲ ಎಂದು ಗೊತ್ತಿದ್ದರೂ ಬಾಬು ತಪ್ಪು ಮಾಡಿದರು. ರೆಡ್‌ ಹ್ಯಾಂಡೆಡ್‌ ಆಗಿ ಸಿಕ್ಕಿಬಿದ್ದರು. ಆ ಗಿಲ್ಟ್‌ನಿಂದ ಬಚಾವಾಗಲು ಚಿತ್ರದಲ್ಲಿ ನಟಿಸಿದ್ದ ಇತರೇ ಕನ್ನಡ ನಟರ ಮೈಗೂ ಕೆಸರೆರಚಿದರು. ಮೊದಲು ಚಿತ್ರವನ್ನು ಬಹಿಷ್ಕರಿಸಿದ್ದ ಫಿಲಂ ಚೇಂಬರ್‌ ಅನಂತರ ಬಾಬುಗೆ ಕ್ಷಮಾದಾನ ಮಾಡಿತು. ತಮ್ಮ ತಂತ್ರಗಳು ತಮಗೇ ತಿರುಗಿ ಬಿದ್ದಾಗ ಬಾಬು ಮಾಡುವ ಕೆಲಸವೇನೆಂದರೆ ಬಾಂಬೆಗೆ ಹೊರಟುಹೋಗುವುದು, ಮಾಧ್ಯಮಗಳಿಂದ ದೂರವಿರೋದು. ಜನರ ನೆನಪು ಕ್ಷಣಿಕ ಅನ್ನೋದು ಅವರಿಗೆ ಚೆನ್ನಾಗಿ ಗೊತ್ತು. ಉದಾಹರಣೆಗೆ ಈ ಹಿಂದೆ ಬಾಬು ಸೃಷ್ಟಿಸಿದ ವಿವಾದಗಳನ್ನೇ ನೋಡಿ.

ವಿಷ್ಣುವರ್ಧನ್‌ ಕಾಲ್‌ಷೀಟ್‌ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಅವರ ವಿರುದ್ಧ ಸಹಿ ಸಂಗ್ರಹಣೆಗೆ ಇಳಿದದ್ದು , ಲಹರಿ ವೇಲು ಅವರಿಗೆ ಕೊಟ್ಟ ಚೆಕ್‌ ಬೌನ್ಸ್‌ ಆಗಿದ್ದು, ನಿರ್ದೇಶಕ ಸಂಘಕ್ಕೆ ರಾಜೀನಾಮೆ ನೀಡಿ ಹಿಂದಿನ ಬಾಗಿಲಿನಿಂದ ಒಳಗೆ ನುಗ್ಗಿದ್ದು, ರಿಮೇಕ್‌ ವಿರೋಧಿಗಳ ಸಂಘ ಕಟ್ಟಿ ತಾವೇ ಡಬ್ಬಿಂಗ್‌ ಚಿತ್ರ ಮಾಡಿದ್ದು, ಕಾಡಿನಿಂದ ರಾಜ್‌ ಬರುವ ತನಕ ಆ್ಯಕ್ಷನ್‌ ಹೇಳೋದಿಲ್ಲ ಎಂದು ಘೋಷಿಸಿ ತಾವೇ ಎಲ್ಲರಿಗಿಂತ ಮುಂಚೆ ಶೂಟಿಂಗ್‌ ಶುರುಹಚ್ಚಿಕೊಳ್ಳಿ ಎಂದಿದ್ದು, ಉಪೇಂದ್ರರ ಕಾಲ್‌ ಷೀಟ್‌ ಸಿಕ್ಕಿದ್ದರೂ ಅದನ್ನು ಬಳಸಿಕೊಳ್ಳಲಾಗದೇ ಕೊನೆಗೆ ಉಪೇಂದ್ರರ ವಿರುದ್ಧ ಅಪಪ್ರಚಾರಕ್ಕಿಳಿದದ್ದುರು.

ಮುಖಪುಟ / ಸ್ಯಾಂಡಲ್‌ವುಡ್‌

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X