twitter
    For Quick Alerts
    ALLOW NOTIFICATIONS  
    For Daily Alerts

    ಬೈರಪ್ಪನವರ ವಿಷಾದ ಪರ್ವ , ಮತದಾನದ ಜೊತೆಗೆ ದುರ್ದಾನ !

    By Staff
    |

    *ಸತ್ಯವ್ರತ ಹೊಸಬೆಟ್ಟು

    ಕನ್ನಡದ ನಿರ್ಮಾಪಕರು ಸಿನಿಮಾ ಮಾಡೋದೇ ವೇಸ್ಟು. ಸಿನಿಮಾ ಮಾಡದೇ ಇದ್ರೆ ಆಕಾಶ ಏನೂ ಬಿದ್ದು ಹೋಗಲ್ಲ. ಯಾರೂ ಉಪವಾಸ ಸಾಯಲ್ಲ. ಹಾಗೆ ಉಪವಾಸ ಸಾಯೋರು ಬೇರೆ ವೃತ್ತಿ ಮಾಡಲಿ. ಇಂಥ ಕೆಟ್ಟ ಸಿನಿಮಾ ಮಾಡಿ ಯಾಕೆ ಜನರನ್ನು ಸಾಯಿಸ್ತೀರಿ...

    ಈ ಅರ್ಥ ಬರುವ ಮಾತುಗಳನ್ನು ಕಾದಂಬರಿಕಾರ ಎಸ್‌. ಎಲ್‌. ಬೈರಪ್ಪ ಆಡಿದ್ದಾರೆ. ತೂಕದ ಮಾತುಗಳು ಎಂದು ಕೆಲವರು ಅಭಿಪ್ರಾಯಪಟ್ಟರೆ, ಎಲ್ಲೋ ಕೂತು ಹೀಗೆ ಮಾತನಾಡೋದು ಸುಲಭ. ಇಲ್ಲಿ ಬಂದು ಸಿನಿಮಾ ಮಾಡಿ ತೋರಿಸಲಿ ಎಂದು ಮತ್ತೆ ಕೆಲವರು ಟೀಕೆ ಮಾಡಿದ್ದಾರೆ. (ಅಂದಹಾಗೆ ಅವತ್ತು ಬೈರಪ್ಪ ಕುಳಿತುಕೊಂಡೇ ಮಾತನಾಡಿದರು ಎಂದಿನಂತೆ)

    ಒಂದು ಕತೆ ಕೊಟ್ಟು ಎಷ್ಟು ಮಾತಾಡ್ತನಪ್ಪ ಎಂದು ಚಿತ್ರರಂಗದ ಮಂದಿಗೆ ಅನ್ನಿಸಬಹುದು. ಆದರೆ ಬೈರಪ್ಪ ಕೆಟ್ಟ ಸಿನಿಮಾ ಮಾಡಬೇಡಿ, ಜನರ ಅಭಿರುಚಿ ಆದೇ ಅಂತ ಹೇಳ್ತಾ ಅವರ ಮಟ್ಟಕ್ಕೆ ಇಳಿಯಬೇಡಿ. ಅವರನ್ನು ಮೇಲಕ್ಕೆತ್ತಿ. ವಲ್ಗರ್‌ ರಿಯಾಲಿಸಂ ಬೇಡ. ಅರ್ಥಪೂರ್ಣ ಚಿತ್ರಗಳನ್ನು ಮಾಡಿ ಎಂಬಿತ್ಯಾದಿ ಉಚಿತ ಸಲಹೆಗಳನ್ನು ಕೊಟ್ಟಿದ್ದಾರೆ. ಯಾರು ಏನೇ ಹೇಳಿದರೂ ನನ್ನ ಮಕ್ಕಳನ್ನು ಸಿನಿಮಾ ನೋಡೋಕೆ ಬಿಡಲಾರೆ ಎಂದು ಎಚ್ಚರಿಸಿದ್ದಾರೆ.

    ಇದೆಲ್ಲಾ ನಡೆದಿದ್ದು ಬೆಂಗಳೂರಿನ ಚಿತ್ರಕಲಾಪರಿಷತ್ತಿನ ಆವರಣದಲ್ಲಿ . ಬೈರಪ್ಪನವರ ಕಾದಂಬರಿ ‘ಮತದಾನ’ ಸಿನಿಮಾ ಆಗುವುದರಲ್ಲಿದೆ. ಕಾನೂರು ಹೆಗ್ಗಡಿತಿ ನಿರ್ಮಿಸಿದ ತೆರೆಮರೆಯ ನಿರ್ಮಾಪಕ ಐ.ಎಂ. ವಿಠಲಮೂರ್ತಿ ಈ ಚಿತ್ರದ ರೂವಾರಿ.

    ಮಾಯಾಮೃಗದಿಂದ ಮೂರು ಜನ್ಮಕ್ಕಾಗುವಷ್ಟು ಜನಪ್ರಿಯತೆ ಸಂಪಾದಿಸಿದ ಟಿ. ಎನ್‌. ಸೀತಾರಾಮ್‌ ಚಿತ್ರದ ನಿರ್ದೇಶಕರು. ಒಬ್ಬ ರಾಜಕಾರಣಿ ಪರಿಸ್ಥಿತಿಯ ಪಿತೂರಿಗೆ ಒಳಗಾಗಿ ಹೇಗೆ ಚುನಾವಣೆಯಲ್ಲಿ ಸೋಲುತ್ತಾನೆ ಅನ್ನುವುದು ಕತೆ. ತಮಾಷೆಯೆಂದರೆ ನಿರ್ದೇಶಕ ಸಿತಾರಾಮ್‌, ನಾಯಕ ಅನಂತನಾಗ್‌ ಇಬ್ಬರೂ ಚುನಾವಣೆಯಲ್ಲಿ ಸೋತವರೇ. ಒಬ್ಬರ ಸೋಲಿಗೆ ಸ್ವಯಂಕೃತಾಪರಾಧಗಳೇ ಕಾರಣ. ಇನ್ನೊಬ್ಬರು ಸೋತದ್ದಕ್ಕೆ ಓವರ್‌ ಕಾನ್ಫಿಡೆನ್ಸ್‌ ಕಾರಣ.

    ಯಥಾಪ್ರಕಾರ ತಾರಾ ಚಿತ್ರದ ಮುಖ್ಯ ಪಾತ್ರದಲ್ಲಿದ್ದಾರೆ. ಸುಂದರರಾಜ್‌, ಅವಿನಾಶ್‌, ಮುಖ್ಯಮಂತ್ರಿ ಚಂದ್ರು, ಪ್ರಕಾಶ್‌ ಬೆಳವಾಡಿ, ಸುಧಾ ಬೆಳವಾಡಿ, ಶ್ರೀದೇವಿ, ಗಿರಿಜಾ ಲೋಕೇಶ್‌ ಮುಂತಾದವರು ನಟಿಸುತ್ತಿದ್ದಾರೆ. ಮತ್ತೊಂದು ಪ್ರಶಸ್ತಿಗೆ ಈಗಾಗಲೇ ಇವರೆಲ್ಲಾ ಸೇರಿ ಕಣ್ಣಿಟ್ಟಿದ್ದಾರೆ ಅನ್ನೋದಂತೂ ಖಚಿತವಾಗಿದೆ.

    ಎಂದೂ ತಮ್ಮ ಕಾದಂಬರಿಯನ್ನು ಸಿನಿಮಾ ಮಾಡೋದಕ್ಕೆ ಕೊಡಲಾರೆ ಎಂದ ಬೈರಪ್ಪನವರಿಗೆ ಈ ಬಾರಿ ಭಾರೀ ಆಮಿಷವನ್ನೇ ಒಡ್ಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಅವರಿಗೆ ಸಂದ ಮೊತ್ತವಿನ್ನೂ ಖಚಿತವಾಗಿಲ್ಲ.

    ಹುಬ್ಬಳ್ಳಿ, ತೀರ್ಥಹಳ್ಳಿಗಳಲ್ಲಿ ಚಿತ್ರೀಕರಣಗೊಳ್ಳಲಿರುವ ಮತದಾನಕ್ಕೆ ಸಂಗೀತ ನೀಡಲಿರುವವರು ಅಶ್ವಥ್‌ ಹಾಗೂ ಮನೋಹರ್‌. ಒಂದು ತಾರಕ, ಇನ್ನೊಂದು ಮಂದ, ಇವೆರಡೂ ಸೇರಿ ಸೃಷ್ಟಿಯಾಗಲಿರುವ ಸಂಗೀತ ಹೇಗಿರಬಹುದು ಎಂಬ ಕುತೂಹಲ ತಣಿಯುವುದಕ್ಕೆ ಕಾಯಬೇಕು ಕನಿಷ್ಠ 10 ವಾರ.

    ಮುಖಪುಟ / ಸ್ಯಾಂಡಲ್‌ವುಡ್‌

    Saturday, April 20, 2024, 17:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X