twitter
    For Quick Alerts
    ALLOW NOTIFICATIONS  
    For Daily Alerts

    ಮಹೇಶ್ ಬಾಬು ಜತೆ ಆ ಚಿತ್ರದಲ್ಲಿ ನಟಿಸಬಾರದಿತ್ತು: ಪಶ್ಚಾತ್ತಾಪಪಟ್ಟ ನಟ

    By Avani Malnad
    |

    ತೆಲುಗು ಚಿತ್ರರಂಗದ ನಿರ್ಮಾಪಕ, ನಟ ಬಂಡ್ಲ ಗಣೇಶ್ ಇತ್ತೀಚೆಗೆ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದಾರೆ. ಒಂದಿಷ್ಟು ಸಮಯ ನಟನೆ ಮತ್ತು ನಿರ್ಮಾಣ ಎರಡರಿಂದಲೂ ದೂರವಿದ್ದ ಅವರು ವರ್ಷದ ಆರಂಭದಲ್ಲಿ ಮಹೇಶ್ ಬಾಬು ಜತೆ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ನಟಿಸಿದ್ದರು. 2020ರ ಆರಂಭದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಸೇರಿಕೊಂಡಿತ್ತು.

    Recommended Video

    Boycott Prabhas !! ಕನ್ನಡಿಗರು ಗರಂ | Filmibeat Kannada

    ಅನಿಲ್ ರವಿಪುಡಿ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ವಿಜಯಶಾಂತಿ, ಪ್ರಕಾಶ್ ರೈ ಮುಂತಾದವರು ತಾರಾಬಳಗದಲ್ಲಿದ್ದ ಇದರಲ್ಲಿ ನಟ ಬಂಡ್ಲ ಗಣೇಶ್, 'ಬ್ಲೇಡ್ ಗಣೇಶ್' ಎಂಬ ಪಾತ್ರದಲ್ಲಿ ನಟಿಸಿದ್ದರು. 2012ರಲ್ಲಿ ಬಿಸಿನೆಸ್ ಮ್ಯಾನ್ ಚಿತ್ರದ ನಂತರ ಮಹೇಶ್ ಬಾಬು ಹಾಗೂ ಬಂಡ್ಲ ಗಣೇಶ್ ಮತ್ತೆ ಜತೆಯಾಗಿ ನಟಿಸಿದ್ದರು. ಮುಂದೆ ಓದಿ...

    ನಾನು ನಟಿಸಬಾರದಿತ್ತು...

    ನಾನು ನಟಿಸಬಾರದಿತ್ತು...

    ಆದರೆ ಮಹೇಶ್ ಬಾಬು ಜತೆ ಈ ಚಿತ್ರದಲ್ಲಿ ತಾವು ನಟಿಸಬಾರದಿತ್ತು ಎಂದು ಬಂಡ್ಲ ಗಣೇಶ್ ಪಶ್ಚಾತ್ತಾಪ ಪಡುತ್ತಿದ್ದಾರೆ. 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಅಭಿನಯಿಸಿ ತಪ್ಪು ಮಾಡಿದೆ. ಅದರಲ್ಲಿ ನಟಿಸಬಾರದಿತ್ತು ಎಂದು ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ.

    ತೆಲುಗು ನಟ, ನಿರ್ಮಾಪಕ ಬಂಡ್ಲ ಗಣೇಶ್‌ಗೆ ಕೊರೊನಾ ವೈರಸ್‌ ಸೋಂಕುತೆಲುಗು ನಟ, ನಿರ್ಮಾಪಕ ಬಂಡ್ಲ ಗಣೇಶ್‌ಗೆ ಕೊರೊನಾ ವೈರಸ್‌ ಸೋಂಕು

    ಮಹೇಶ್ ಬಾಬುಗಾಗಿ ನಟಿಸಿದ್ದರು

    ಮಹೇಶ್ ಬಾಬುಗಾಗಿ ನಟಿಸಿದ್ದರು

    ಈ ಚಿತ್ರದ ಗಣೇಶ್ ಪಾತ್ರಕ್ಕೆ ವಿಪರೀತ ಹೈಪ್ ನೀಡಲಾಗಿತ್ತು. ಅದು ಸಾಕಷ್ಟು ತಮಾಷೆಯ ಪಾತ್ರ ಎನ್ನಲಾಗಿತ್ತು. ಈ ಹಿಂದೆ ಅನೇಕ ಚಿತ್ರಗಳನ್ನು ನಿರಾಕರಿಸಿದ್ದ ಗಣೇಶ್, ಮಹೇಶ್ ಬಾಬು ಚಿತ್ರ ಎಂಬ ಕಾರಣಕ್ಕೆ ಈ ಪಾತ್ರವನ್ನು ಒಪ್ಪಿಕೊಂಡಿದ್ದರು.

    ಟೀಕೆಗೆ ಒಳಗಾದ ಪಾತ್ರ

    ಟೀಕೆಗೆ ಒಳಗಾದ ಪಾತ್ರ

    ಆದರೆ ಈ ಚಿತ್ರದಲ್ಲಿ ನಟಿಸದೆ ಇದ್ದಿದ್ದರೆ ಒಳ್ಳೆಯದಿತ್ತು ಎಂದು ಅವರು ಹೇಳಲು ಕಾರಣ, ಅವರ ರೋಲ್‌ಗೆ ಸಿಕ್ಕ ನೆಗೆಟಿವ್ ವಿಮರ್ಶೆಗಳು. ಅವರ ಪಾತ್ರದಿಂದ ಅವರು ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಿದ್ದರು. ಅವರ ಪಾತ್ರ ಕಂಡ ಅನೇಕರು ತೀವ್ರವಾಗಿ ಟೀಕಿಸಿದ್ದರು. ವಿಮರ್ಶಕರೂ ಕೆಟ್ಟ ಪಾತ್ರ ಎಂದಿದ್ದರು. ಇದು ಅವರಲ್ಲಿ ಬೇಸರ ಮೂಡಿಸಿದೆಯಂತೆ.

    ಹೃದಯ ಗೆಲ್ಲುತ್ತಿದೆ ಮಹೇಶ್ ಬಾಬು ಮಾಡಿದ ಈ ಕಾರ್ಯಹೃದಯ ಗೆಲ್ಲುತ್ತಿದೆ ಮಹೇಶ್ ಬಾಬು ಮಾಡಿದ ಈ ಕಾರ್ಯ

    ನೆಗೆಟಿವ್ ವಿಮರ್ಶೆ ಪಡೆದ ಚಿತ್ರ

    ನೆಗೆಟಿವ್ ವಿಮರ್ಶೆ ಪಡೆದ ಚಿತ್ರ

    ಬಂಡ್ಲ ಗಣೇಶ್ ಪಾತ್ರ ಮಾತ್ರವಲ್ಲ, ಇಡೀ ಚಿತ್ರದ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿತ್ತು. ದೇಶ ಸೇವೆಯಲ್ಲಿರುವ ಮೇಜರ್ ಅಜಯ್ ಕೃಷ್ಣ ಪಾತ್ರ ಹೀರೋಯಿಸಂನ ವೈಭವೀಕರಣವಿದೆ. ಕೆಲವು ಪಾತ್ರಗಳು ಯಾವ ಕಾರಣಕ್ಕೆ ಇವೆ ಎಂಬುದೇ ತಿಳಿದಿಲ್ಲ ಎಂದು ಅನೇಕರು ಟೀಕಿಸಿದ್ದರು.

    ಆರೋಗ್ಯ ಕೈಕೊಟ್ಟಿತು

    ಆರೋಗ್ಯ ಕೈಕೊಟ್ಟಿತು

    ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿದ್ದರೂ ಆರಂಭದಲ್ಲಿ ಒಂದಷ್ಟು ಹಣ ಮಾಡಿತು. ಬಳಿಕ ಅದರ ಬಿಜಿನೆಸ್ ಇಳಿಕೆ ಕಂಡಿತು. ಪಾತ್ರವೂ ಟೀಕೆಗೆ ಒಳಗಾಯಿತು. ಇದರಿಂದ ಗಣೇಶ್ ನೊಂದಿದ್ದರು. ಇದರ ಜತೆಗೆ ಅವರ ಆರೋಗ್ಯವೂ ಕೈಕೊಟ್ಟಿತು. ಈ ಬೇಸರದಲ್ಲಿ ಅವರು ಸ್ನೇಹಿತರ ಜತೆ ತಮ್ಮ ನೋವು ಹೊರಹಾಕಿದ್ದಾರಂತೆ.

    ಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾ

    English summary
    Telugu Producer, actor Bandla Ganesh has shares his regrets with friends about playing role in Mahesh Babu starrer Sarileru Neekevvaru.
    Friday, July 10, 2020, 9:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X