»   » ಫೆಬ್ರವರಿ 23 ರಂದು ಸುದೀಪ್-ಶಿವಣ್ಣ ಕಡೆಯಿಂದ ಅಭಿಮಾನಿಗಳಿಗೆ ಬಂಪರ್

ಫೆಬ್ರವರಿ 23 ರಂದು ಸುದೀಪ್-ಶಿವಣ್ಣ ಕಡೆಯಿಂದ ಅಭಿಮಾನಿಗಳಿಗೆ ಬಂಪರ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಒಟ್ಟಿಗೆ ಸಿನಿಮಾ ಮಾಡ್ತಿರೋದು ಎಲ್ಲರಿಗೂ ಗೊತ್ತೆ ಇದೆ. ಆದ್ರೆ, ಆ ಸಿನಿಮಾ ಬಿಡುಗಡೆಗೂ ಮುಂಚೆನೇ ಈ ಇಬ್ಬರು ಸೂಪರ್ ಸ್ಟಾರ್ ಗಳು ಅವರ ಅಭಿಮಾನಿಗಳಿಗೆ ಬಂಪರ್ ಉಡುಗೊರೆ ಕೊಡ್ತಿದ್ದಾರೆ.[ಶಿವಣ್ಣ ಭಕ್ತರಿಗೆ 'ಶಿವರಾತ್ರಿ ಹಬ್ಬ'ದಂದು ಭರ್ಜರಿ ಕೊಡುಗೆ]

ನಾಳೆ (ಫೆಬ್ರವರಿ 23) ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಫೆಬ್ರವರಿ 24 ರಂದು ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ವಿಶೇಷ ಏನಪ್ಪಾ ಅಂದ್ರೆ, ಈಗ 'ಹೆಬ್ಬುಲಿ' ಚಿತ್ರದ ಜೊತೆಗೆ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ'ನ ಟೀಸರ್ ಲಾಂಚ್ ಆಗಲಿದೆ.['ಹೆಬ್ಬುಲಿ' ಬೇಟೆ ಇದೇ ಗುರುವಾರದಿಂದಲೇ.. ಬದಲಾವಣೆ ಇಲ್ಲ..!]

Bangara S/O Bangarada Manushya Teaser Will Releasing With Hebbuli Movie

ಹೌದು, 'ಹೆಬ್ಬುಲಿ' ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳಲ್ಲಿ ಶಿವಣ್ಣ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ'ನ ಟೀಸರ್ ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆಯಂತೆ.['ಹೆಬ್ಬುಲಿ' ನೋಡೋಕು ಮುಂಚೆ, ನೀವು ತಿಳಿಯಲೇಬೇಕಾದ ಸಂಗತಿಗಳು]

'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಕ್ಕೆ ಯೋಗಿ ಆಕ್ಷನ್ ಕಟ್ ಹೇಳಿದ್ದು, ಹ್ಯಾಟ್ರಿಕ್ ಹೀರೋಗೆ ವಿದ್ಯಾ ಪ್ರದೀಪ್ ನಾಯಕಿಯಾಗಿದ್ದಾರೆ. ಉಳಿದಂತೆ ವಿಶಾಲ್ ಹೆಗಡೆ, ಸಾಧು ಕೋಕಿಲಾ, ಚಿಕ್ಕಣ್ಣ, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಿವರಾಂ, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಜಯಣ್ಣ-ಭೊಗೇಂದ್ರ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ವಿ.ಹರಿಕೃಷ್ಣ ಅವರ ಸಂಗೀತವಿದೆ.

English summary
According to source, Shiva Rajkumar Starrer 'Bangara S/O Bangarada Manushya' Teaser Will Releasing With Sudeep's 'Hebbuli' Movie. Hebbuli Will Releasing On February 23rd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada