»   » ಆಸ್ಕರ್ ಕೃಷ್ಣಗೆ `ಖರಾಬ್' ಡೈರೆಕ್ಟರ್ ಕಿತಾಪತಿ

ಆಸ್ಕರ್ ಕೃಷ್ಣಗೆ `ಖರಾಬ್' ಡೈರೆಕ್ಟರ್ ಕಿತಾಪತಿ

By: ಜೀವನರಸಿಕ
Subscribe to Filmibeat Kannada

ಖರಾಬ್ ಲವ್ಸ್ಟೋರಿ ಅನ್ನೋ ಸಿನಿಮಾ ಮಾಡೋಕೆ ಹೊರಟ ಪ್ರತಾಪ್ ಅನ್ನೋ ಪುಂಗಿರಾಜ ನಿರ್ದೇಶಕರೊಬ್ಬರು ಮಾಧ್ಯಮಗಳ ಮುಂದೆ ಬಿಟ್ಟ ಬುರುಡೆಗಳು ನಿಮಗಿನ್ನೂ ಮರೆತು ಹೋಗಿರೋಕೆ ಸಾಧ್ಯವಿಲ್ಲ. ಹಾಲಿವುಡ್ನ ಪ್ರಸಿದ್ಧ ಡೈರೆಕ್ಟರ್ ಅವತಾರ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ರಿಂದ ಆಕ್ಷನ್ ಸೀನ್ ಡೈರೆಕ್ಷನ್ ಇರುತ್ತೆ. ಈ ಖರಾಬ್ ಲವ್ ಸ್ಟೋರಿ ಅನ್ನೋ ಸಿನಿಮಾಗೆ.

ಅಷ್ಟೇ ಯಾಕೆ ಅಮಿತಾಭ್ ಒಂದು ಹಾಡನ್ನ ಹಾಡ್ತಾರೆ. ಆಮೇಲೆ ಲತಾ ಮಂಗೇಶ್ಕರ್ ಕೊನೆಯ ಹಾಡು ಹಾಡ್ತಾರೆ. ಮತ್ತೊಂದು ಹಾಡನ್ನ ಪಾಪ್ ಸಿಂಗರ್ ಎಕಾನ್ರಿಂದ ಹಾಡಿಸ್ತಾ ಇದ್ದೀನಿ. ರಜನಿಕಾಂತ್ ಗೆಸ್ಟ್ ರೋಲ್ ಮಾಡ್ತಾರೆ. ಒಂದು ಸೀನ್ ಅಷ್ಟೆ.

Beware of such directors in Kannada Film industry

ಹೀಗೆ ಅದೆಷ್ಟೋ ಸಿನಿಮಾಗಳ ಬಗ್ಗೆ ವರದಿಗಾರರ ಮುಂದೆ ರೀಲ್ ಸುತ್ತುತ್ತಾರೆ ನಿರ್ದೇಶಕ ಪ್ರತಾಪ್. ಖರಾಬ್ ಸ್ಟೋರಿ ಅನ್ನೋ ಸಿನಿಮಾ ಮಾಡೋಕೆ ಹೊರಟಿದ್ದ ಪ್ರತಾಪ್ ಹೀಗೆ ಬೇಜಾನ್ ಬುರುಡೆ ಬಿಟ್ಟಿದ್ರು ಅನ್ನೋ ಕಥೆಯನ್ನ ಅಂತ ಗಾಂಧಿನಗರದ ಗಲ್ಲಿ ಗಲ್ಲಿಗಳು ಹೇಳ್ತವೆ.

ಈ ನಿರ್ದೇಶಕರು ಈಗ ತಮ್ಮ ಮುಂದಿನ ಸಿನಿಮಾ ಸಾರಂಗಿಗೆ ಹೊಸ ಹೀರೋಯಿನ್ ಒಬ್ಬರನ್ನ ಸೆಲೆಕ್ಟ್ ಮಾಡಿದ್ರು. ಅವರೇ ತಮಿಳುನಾಡು ಮೂಲದ ಏಂಜೆಲಾ. ಈ ಏಂಜೆಲಾ ಇದಕ್ಕೂ ಮೊದಲೇ ಆಸ್ಕರ್ ಕೃಷ್ಣ ನಿರ್ದೇಶನದ `ಮೋಹಿನಿ ಈಸ್ ಬ್ಯಾಕ್' ಅನ್ನೋ ಸಿನಿಮಾಗೆ ಸಹಿ ಹಾಕಿದ್ರು.

ಈ ನಡುವೆ ಸಾರಂಗಿ ಸಿನಿಮಾದ ಶೂಟಿಂಗ್ ಶುರು ಮಾಡೋ ಪ್ಲಾನ್ನಲ್ಲಿರೋ ಪ್ರತಾಪ್. ಮೋಹಿನಿ ಈಸ್ ಬ್ಯಾಕ್ ಸಿನಿಮಾದಿಂದ ಏಂಜೆಲಾರನ್ನ ತಪ್ಪಿಸುವ ಸಲುವಾಗಿ ಮಾಧ್ಯಮದ ಮುಂದೆ ಆಸ್ಕರ್ ಕೃಷ್ಣ ನಾಯಕಿಯನ್ನ ಅಶ್ಲೀಲವಾಗಿ ನಡೆಸಿಕೊಳ್ತಿದ್ದಾರೆ ಅನ್ನೋ ಸುಳ್ಳು ಮಾಹಿತಿಯನ್ನ ಕನ್ನಡ ಬಾರದ ನಾಯಕಿಯ ಬಾಯಿಂದ ಹೇಳಿಸ್ತಿದ್ದಾರೆ ಅನ್ನೋ ಸುದ್ದಿ ಸ್ಯಾಂಡಲ್ವುಡ್ನಲ್ಲಿ ಸುಳಿದಾಡ್ತಿದೆ. ಇದ್ರಲ್ಲಿ ಯಾವ್ದು ಸುಳ್ಳು ಯಾವ್ದು ಸತ್ಯ ಅವ್ರವ್ರಿಗೇ ಬಿಟ್ಟಿದ್ದು.

English summary
Beware of such directors in Kannada Film industry. These directors are ready to pull anybodies leg to take advantage of the situation. ಆಸ್ಕರ್ ಕೃಷ್ಣಗೆ `ಖರಾಬ್' ಡೈರೆಕ್ಟರ್ ಕಿತಾಪತಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada