TOXIC X BGMI: ಕ್ರೇಜಿ ನ್ಯೂಸ್; ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್‌ನಲ್ಲಿ 'ಟಾಕ್ಸಿಕ್' ರಾಯ ಯಶ್!

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಸ್ವತಃ ಚಿತ್ರತಂಡಕ್ಕೂ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಸ್ಪಷ್ಟತೆ ಇಲ್ಲ. ಅದೇ ಕಾರಣಕ್ಕೆ ಪದೇ ಪದೆ ರಿಲೀಸ್ ಮುಂದೂಡಲಾಗುತ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾವ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ತರಲು ಮುಂದಾಗಿರುವುದೇ ಇದಕ್ಕೆಲ್ಲಾ ಕಾರಣ.

ಜೂನ್ 4ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಹಾಲಿವುಡ್ ಮಂದಿಗೂ ನಮ್ಮ ಸಿನಿಮಾವನ್ನು ತೋರಿಸಬೇಕು ಎಂದು ಯಶ್ ಹಠಕ್ಕೆ ಬಿದ್ದಿದ್ದಾರೆ. ಹಾಗಾಗಿ ಅಲ್ಲಿನ ವಿತರಣ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ಅಲ್ಲಿನ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಬಗ್ಗೆ ಚರ್ಚೆ ನಡೆಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಆಗಸ್ಟ್ ಕೊನೆಗೆ ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗ್ತಿದೆ.

BGMI And Yash s Toxic collaboration is reportedly coming in the 4 4 update

ಸದ್ಯ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್‌ ಜೊತೆ 'ಟಾಕ್ಸಿಕ್' ಚಿತ್ರತಂಡ ಒಪ್ಪಂದ ಮಾಡಿಕೊಳ್ಳುತ್ತದೆ. ಆ ಮೂಲಕ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್ ಪ್ಲ್ಯಾನ್ ಮಾಡ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ಹಾಟ್ ಟಾಪಿಕ್ ಆಗಿದೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಭಾರತದಲ್ಲಿ ಜನಪ್ರಿಯ ಆನ್‌ಲೈನ್ ಮಲ್ಟಿಪ್ಲೇಯರ್ ಗೇಮ್ ಎನಿಸಿಕೊಂಡಿದೆ. ಇದು PUBG ಮೊಬೈಲ್‌ನ ಭಾರತೀಯ ಆವೃತ್ತಿಯಾಗಿದೆ.

ಈ ಒಪ್ಪಂದದ ಹಿನ್ನೆಲೆಯಲ್ಲಿ BGMI ತನ್ನ ಮುಂದಿನ 4.4 ಅಪ್‌ಡೇಟ್‌ನಲ್ಲಿ 'ಟಾಕ್ಸಿಕ್' ರಾಯನ ಸ್ಟೈಲ್, ಇನ್‌ಟೆನ್ಸ್ ಆಕ್ಷನ್ ನಿರೀಕ್ಷಿಸಬಹುದು ಎನ್ನಲಾಗ್ತಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳಂತೂ ಈ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ. ಈ ಮೂಲಕ 'ಟಾಕ್ಸಿಕ್' ಸಿನಿಮಾ ದೊಡ್ಡಮಟ್ಟದಲ್ಲಿ ರೀಚ್ ಆಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

BGMI And Yash s Toxic collaboration is reportedly coming in the 4 4 update

ರಕ್ಷಾ ಬಂಧನ ಹಬ್ಬಕ್ಕೆ 'ಟಾಕ್ಸಿಕ್'?

ಕೆಜಿಎಫ್-2 ಸಿನಿಮಾ ತೆರೆಗೆ ಬಂದು 4 ವರ್ಷ ಕಳೆದಿದೆ. ಬಳಿಕ ಯಶ್ ನಟಿಸಿದ ಯಾವುದೇ ಸಿನಿಮಾ ಬಿಡುಗಡೆ ಆಗಲಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಕಳೆದ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ. ಬಳಿಕ ಈ ವರ್ಷ ಮಾರ್ಚ್ 19ಕ್ಕೆ ಎಂದು ಹೇಳಿದ್ದರು. ಇರಾನ್-ಇಸ್ರೇಲ್ ಯುದ್ಧದ ನೆಪವೊಡ್ಡಿ ಜೂನ್ 4ಕ್ಕೆ ಪೋಸ್ಟ್‌ಪೋನ್ ಮಾಡಿದ್ದರು. ಅದು ಸಾಧ್ಯವಾಗದೇ ಈಗ ಸುಮ್ಮನಾಗಿದ್ದಾರೆ. ಏಪ್ರಿಲ್ 28ರಂದು ರಕ್ಷಾ ಬಂಧನ ಹಬ್ಬಕ್ಕೆ ಸಿನಿಮಾ ತೆರೆಗೆ ಬರಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಚಿತ್ರದಲ್ಲಿ ಯಶ್ ಸಹೋದರಿಯಾಗಿ ನಯನತಾರ ನಟಿಸಿದ್ದಾರೆ.

ರಾಕಿಂಗ್ ಸ್ಟಾರ್ ಲೆಕ್ಕಾಚಾರ

ಸಿನಿಮಾಕಾನ್ ವೇದಿಕೆಯಲ್ಲಿ ಯಶ್ 'ಟಾಕ್ಸಿಕ್' ಸಿನಿಮಾ ಪ್ರಚಾರ ಮಾಡಿ ಬಂದಿದ್ದಾರೆ ಯಶ್. ಅಲ್ಲಿ ಕೆಲವರಿಗೆ ಚಿತ್ರದ 9 ನಿಮಿಷಗಳ ಫುಟೇಜ್ ತೋರಿದಿದ್ದಾರೆ. ಅದನ್ನು ನೋಡಿ ಹಾಲಿವುಡ್ ಮಂದಿ ಕೂಡ ಬೆರಗಾಗಿದ್ದಾರೆ ಎನ್ನಲಾಗ್ತಿದೆ. ಅಲ್ಲಿನ ಪ್ರೇಕ್ಷಕರು ಕೂಡ 'ಟಾಕ್ಸಿಕ್' ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಹಾಗಾಗಿ ಈ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಯಶ್ ಮನಸ್ಸು ಮಾಡಿದ್ದಾರೆ. ಅದೇ ಕಾರಣಕ್ಕೆ ತಡವಾದರೂ ಪರವಾಗಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

'ಟಾಕ್ಸಿಕ್' ಸಿನಿಮಾ ಕಥೆ

ಸ್ವಾತಂತ್ರ್ಯ ಬಳಿಕ ಗೋವಾದಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಕಥೆ 'ಟಾಕ್ಸಿಕ್' ಚಿತ್ರದಲ್ಲಿದೆ. 1947ರ ಬಳಿಕ ಕೂಡ ಪೋರ್ಚುಗೀಸರು ಕೆಲ ವರ್ಷ ಗೋವಾದಲ್ಲಿ ಬೀಡು ಬಿಟ್ಟಿದ್ದರು. ಆಗ ಅಲ್ಲಿ ನಡೆಯುತ್ತಿದ್ದ ಮಾಫಿಯಾ, ವ್ಯಾಪಾರ, ಗ್ಯಾಂಗ್‌ಸ್ಟರ್ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸಿನಿಮಾ ಕಥೆ ಸಾಗಲಿದೆ. ಆದರೆ ಇದು ಕಾಲ್ಪನಿಕ ಕಥೆ ಆಗಿರಲಿದೆ.

Read more about: yash toxic kvn productions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X