»   » ಸಪ್ನಾ ಚಿತ್ರಮಂದಿರದಿಂದ ‘ನೀಲಾ’ಗೆ ಕೊಕ್‌ : ಬೀದಿಗಿಳಿದ ನಾಗಾಭರಣ

ಸಪ್ನಾ ಚಿತ್ರಮಂದಿರದಿಂದ ‘ನೀಲಾ’ಗೆ ಕೊಕ್‌ : ಬೀದಿಗಿಳಿದ ನಾಗಾಭರಣ

Subscribe to Filmibeat Kannada

‘ನಿರ್ಮಾಪಕರ ಸಂಘ ಪತ್ರ ಬರೆಯುತ್ತದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅದಕ್ಕೆ ಸೊಪ್ಪು ಹಾಕುತ್ತದೆ. ಚೆನ್ನಾಗಿ ಓಡುತ್ತಿರುವ ಸಿನಿಮಾಗೆ ಕೊಕ್‌. ಬೇಕಾದ ಚಿತ್ರಮಂದಿರದಲ್ಲಿ ತಮಗೆ ಬೇಕಾದವರ ಚಿತ್ರಗಳ ಪ್ರದರ್ಶನ. ಹೀಗಾದರೆ ಸದಭಿರುಚಿಯ ಚಿತ್ರಗಳು ಜನರನ್ನು ತಲುಪುವುದು ಹೇಗೆ?’.


‘ನೀಲಾ’ಭರಣ ಉರುಫ್‌ ನಾಗಾಭರಣ ಕೆಂಡಾಮಂಡಲಾಗಿದ್ದರು. ಸಪ್ನಾ ಚಿತ್ರಮಂದಿರದಿಂದ ‘ನೀಲಾ’ ಎತ್ತಂಗಡಿ ಪ್ರತಿಭಟಿಸಿ ತಮ್ಮ ಸಿನಿಮಾ ತಂಡದೊಂದಿಗೆ ಬೆಂಗಳೂರು ಬೀದಿಗಿಳಿದಿದ್ದರು. ಕೈಯಲ್ಲಿ ‘ಬಂಡವಾಳಶಾಹಿಗಳ ಬಲೆಯಲ್ಲಿ ನೀಲಾ’- ಆಗ್ರಹದ ಬೋರ್ಡು. ಅದು ಮೌನ ಪ್ರತಿಭಟನೆ. ಬೋರ್ಡು ಮಾತಾಡುತ್ತಿತ್ತು.

ಒಳ್ಳೆಯ ಚಿತ್ರಗಳನ್ನು ನೋಡಲು ಜನ ಬರುವುದು ಕೊಂಚ ನಿಧಾನವಾಗುತ್ತದೆ. ಹಾಗಂತ ಜನ ಬರುವ ಮೊದಲೇ ಚಿತ್ರಕ್ಕೆ ಕೊಕ್‌ ಕೊಟ್ಟರೆ ಹೇಗೆ? ನೀಲಾ ಗಳಿಕೆಯೇನೂ ಕಳಪೆಯಾಗಿರಲಿಲ್ಲ. ಸಾಕಷ್ಟು ಸುಧಾರಿಸುತ್ತಿತ್ತು. ಇಂಥಾ ಹೊತ್ತಿನಲ್ಲಿ ಚಿತ್ರ ಎತ್ತಂಗಡಿಯಾಗಿದೆ. ಇದು ತರವಲ್ಲ ಅಂತ ತಂಬೂರಿ ಬಾರಿಸಿದರು ಭರಣ.

ಭರಣಾಗೊಂದು ಮಾತು : ಒಳ್ಳೆ ಚಿತ್ರ ಅಂತ ನೋಡಿದ ಮೇಲೆ ಗೊತ್ತಾಗುತ್ತದೆ. ಇಲ್ಲವೇ ಯಾರಾದರೂ ಹೇಳಿದರೆ, ಬರೆದರೆ ಗೊತ್ತಾಗುತ್ತದೆ. ಆದರೆ ಈ ವಿಷಯದಲ್ಲಿ ನಿಮಗೆ ಸಿಕ್ಕಿರುವುದು ಕಹಿ ಪ್ರತಿಕ್ರಿಯೆಯೇ. ಒಳ್ಳೆ ಚಿತ್ರಗಳೇ ಆಗಿದ್ದ ಮುನ್ನುಡಿ, ಮತದಾನ ಎಷ್ಟು ದಿನ ತೆರೆ ಮೇಲೆ ಬಂದವು? ದೇಶ ವಿದೇಶಗಳಲ್ಲಿ ಸದ್ದು ಮಾಡಿದ ದೇವೀರಿ ಬೆಂಗಳೂರಲ್ಲಿದ್ದದ್ದು ಎಷ್ಟು ದಿನ? ಪಾಪ, ನಿಮಗೆ ಹೇಗೆ ಗೊತ್ತಾಗಬೇಕು. ಯಾಕೆಂದರೆ, ನೀವೇ ಹೇಳಿದ್ದೀರಲ್ಲಾ- ನನಗೆ ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada