'ವಿಲನ್' ಬಳಗ ಸೇರಿದ ಮೂವರು 'ಸ್ಟಾರ್' ನಟಿಯರು.!
Recommended Video

'ದಿ ವಿಲನ್' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಟಾಕೀ ಪೋಷನ್ ಮುಗಿಸಿದ್ದ ನಿರ್ದೇಶಕ ಪ್ರೇಮ್, ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭಾಗದ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಹಿಂದೆ ಹೇಳಿದ್ದಾಗೆ ಶಿವರಾಜ್ ಕುಮಾರ್ ಅವರ ಎಂಟ್ರಿ ಹಾಡಿನಲ್ಲಿ 6 ಜನ ನಟಿಯರು ಹೆಜ್ಜೆ ಹಾಕಲಿದ್ದಾರೆ.
ಡಿಂಪಲ್ ಕ್ವೀನ್ ರಚಿತಾ ರಾಮ್, ರಂಗಿತ ರಂಗ ಖ್ಯಾತಿಯ ರಾಧಿಕಾ ಚೇತನ್ ಹಾಗೂ ಯು-ಟರ್ನ್ ಖ್ಯಾತಿಯ ಶ್ರದ್ಧಾ ಶ್ರೀನಾಥ್ 'ದಿ ವಿಲನ್' ಅಡ್ಡಾದಲ್ಲಿ ಸೊಂಟ ಬಳುಕಿಸಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು.
ಈಗ ಈ ಮೂವರ ಜೊತೆಯಲ್ಲಿ ಇನ್ನು ಮೂರು ಜನ ಯಾರು ಎಂಬುದು ರಿವಿಲ್ ಆಗಿದೆ. ಭಾವನಾ ರಾವ್, ಸಂಯುಕ್ತಾ ಹೊರನಾಡು, ಶಾನ್ವಿ ಶ್ರೀವಾಸ್ತವ್ 'ದಿ ವಿಲನ್' ಹಾಡಿನಲ್ಲಿ ಶಿವರಾಜ್ ಕುಮಾರ್ ಅವರಿಗೆ ಸಾಥ್ ನೀಡಲಿದ್ದಾರಂತೆ.

ಇನ್ನುಳಿದಂತೆ ರಾಮನಗರದಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಮಾರ್ಚ್ ಅಂತ್ಯಕ್ಕೆ ಕಂಪ್ಲೀಟ್ ಶೂಟಿಂಗ್ ಮುಗಿಸಲು ನಿರ್ಧರಿಸಲಾಗಿದೆ. ಸದ್ಯ ಚಿತ್ರದ ಟ್ರೈಲರ್ ಸಿದ್ದವಾಗುತ್ತಿದ್ದು, ಚಿತ್ರೀಕರಣ ಮುಗಿಯುತ್ತಿದ್ದಂತೆ ಟ್ರೈಲರ್ ರಿಲಿಸ್ ಮಾಡಲಿದ್ದಾರೆ.
ಮತ್ತೊಂದೆಡೆ ಸುದೀಪ್ ಇಂಟ್ರೋ ಸಾಂಗ್ ಗಾಗಿ ಸುಮಾರು 3 ಕೋಟಿ ಖರ್ಚು ಮಾಡಲಾಗುತ್ತಿದೆಯಂತೆ. ಇಬ್ಬರು ದೊಡ್ಡ ನಟರ ಎಂಟ್ರಿ ಅದ್ಧೂರಿಯಾಗಿರಬೇಕು ಎಂದು ಇಷ್ಟೆಲ್ಲಾ ತಯಾರಿ ಮಾಡಿದ್ದಾರೆ ನಿರ್ದೇಶಕ ಪ್ರೇಮ್.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಆಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ತೆಲುಗು ನಟ ಶ್ರೀಕಾಂತ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿ.ಆರ್.ಮನೋಹರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.


Click it and Unblock the Notifications











