For Quick Alerts
  ALLOW NOTIFICATIONS  
  For Daily Alerts

  '99' ಚಿತ್ರದ ತ್ರಿಷಾ ಪಾತ್ರಕ್ಕೆ ಈಕೆಯೇ ನಾಯಕಿ

  |

  ಕಾಲಿವುಡ್ ಚಿತ್ರರಂಗ ಈ ವರ್ಷದ ಸೂಪರ್ ಹಿಟ್ ಸಿನಿಮಾ '96'. ಈ ಸಿನಿಮಾ ಈಗ ಕನ್ನಡಕ್ಕೆ ಬರುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಈ ಸಿನಿಮಾ '99' ಎಬ ಹೆಸರಿನಲ್ಲಿ ಸೆಟ್ಟೇರಿದೆ.

  '96' ಸಿನಿಮಾದಲ್ಲಿ ಕೆಲವೇ ಪಾತ್ರಗಳು ಇದ್ದರೂ, ಅವು ಪರಿಣಾಮಕಾರಿಯಾಗಿದ್ದವು. ಅದರಲ್ಲಿಯೂ ನಾಯಕಿ ಪಾತ್ರ ಸಿನಿಮಾದ ಹೈಲೆಟ್ ಆಗಿತ್ತು. ಸಿನಿಮಾ ನೋಡಿದ ಬಂದ ಮೇಲೆ ಆ ಪಾತ್ರ ಕಾಡುತ್ತಿತ್ತು. ಜಾನು ಪಾತ್ರಕ್ಕೆ ತ್ರಿಷಾ ಕೃಷ್ಣನ್ ತಮ್ಮ ನಟನೆಯ ಮೂಲಕ ಜೀವಂತಿಕೆ ತಂದಿದ್ದರು.

  '96' ಸಿನಿಮಾ ಕನ್ನಡದಲ್ಲಿ : ಹೀರೋ, ಡೈರೆಕ್ಟರ್ ಇವರೇ! '96' ಸಿನಿಮಾ ಕನ್ನಡದಲ್ಲಿ : ಹೀರೋ, ಡೈರೆಕ್ಟರ್ ಇವರೇ!

  ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ ಪಾತ್ರವನ್ನ ಇಲ್ಲಿ ಗಣೇಶ್ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಮುಹೂರ್ತ ನೆರವೇರಿದೆ. ಇದೀಗ ಚಿತ್ರದ ಬಗ್ಗೆ ಹೊಸ ಸುದ್ದಿ ಬಂದಿದೆ. ಅದೇನೆಂದರೆ, ಈ ಸಿನಿಮಾಗೆ ನಾಯಕಿಯ ಆಯ್ಕೆ ಆಗಿದೆಯಂತೆ. ಮುಂದೆ ಓದಿ...

  ಜಾನು ಆದ ಭಾವನಾ

  ಜಾನು ಆದ ಭಾವನಾ

  ನಟಿ ಜಾಕಿ ಭಾವನ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. '99' ಸಿನಿಮಾದ ನಾಯಕಿ ಯಾರು? ಎನ್ನುವ ಕುತೂಹಲ ಹೆಚ್ಚಿದ್ದು, ಈ ಪಾತ್ರಕ್ಕೆ ಭಾವನ ಆಯ್ಕೆ ಆಗಿದ್ದಾರಂತೆ. ಅಲ್ಲಿ ತ್ರಿಷಾ ನಿರ್ವಹಸಿದ್ದ ಪಾತ್ರಕ್ಕೆ, ಇಲ್ಲಿ ಭಾವನ ಮರು ಜೀವ ನೀಡಲಿದ್ದಾರೆ.

  ಹೇಗಿವೆ ಈ ವಾರದ ಸಿನಿಮಾಗಳು?: ಒಂದು 'ಆರೆಂಜ್' ಮತ್ತೊಂದು ರಕ್ತ ಕೆಂಪು! ಹೇಗಿವೆ ಈ ವಾರದ ಸಿನಿಮಾಗಳು?: ಒಂದು 'ಆರೆಂಜ್' ಮತ್ತೊಂದು ರಕ್ತ ಕೆಂಪು!

  ಗಣೇಶ್ - ಭಾವನ ಜೋಡಿ

  ಗಣೇಶ್ - ಭಾವನ ಜೋಡಿ

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಭಾವನ ಈ ಸಿನಿಮಾದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಈ ಹಿಂದೆ 'ರೋಮಿಯೋ' ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಇನ್ನು ಇವರಿಬ್ಬರ ಜೋಡಿ ತೆರೆ ಮೇಲೆ ಮುದ್ದಾಗಿ ಕಾಣುತ್ತಿದೆ.

  'ಟಗರು' ನಂತರ

  'ಟಗರು' ನಂತರ

  ಶಿವರಾಜ್ ಕುಮಾರ್ ಜೋಡಿಯಾಗಿ 'ಟಗರು' ಸಿನಿಮಾದಲ್ಲಿ ನಟಿಸಿದ್ದ ಭಾವನ ಅದರ ಜೊತೆಗೆ ಪ್ರಜ್ವಲ್ ದೇವರಾಜ್ ನಟನೆಯ 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ಕಾಣಿಕೊಂಡಿದ್ದಾರೆ. ಈ ಸಿನಿಮಾಗಳ ನಂತರ '99' ಮೂಲಕ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

  ರಾಮು ನಿರ್ಮಾಣ, ಗುಬ್ಬಿ ನಿರ್ದೇಶನ

  ರಾಮು ನಿರ್ಮಾಣ, ಗುಬ್ಬಿ ನಿರ್ದೇಶನ

  ಅಂದಹಾಗೆ, ಈ ಸಿನಿಮಾವನ್ನು ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಗಣೇಶ್ ಮತ್ತು ಅವರ ಕಾಂಬಿನೇಶನ್ ನ ಹ್ಯಾಟ್ರಿಕ್ ಸಿನಿಮಾವಾಗಿದೆ. ರಾಮು ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದು, ಅರ್ಜುನ್ ಜನ್ಯ ಸಂಗೀತ ಇರಲಿದೆ.

  English summary
  Actress Bhavana will be playing female lead in '99' kannada movie. director Preetham Gubbi will be remake '96' movie in kannada. Golden Star Ganesh will be playing Vijay Sethupathi role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X