BBK 11: ಒಬ್ಬರಿಗಲ್ಲ ಇಬ್ಬರಿಗೆ ಬಿಗ್‌ ಬಾಸ್‌ ಟ್ರೋಫಿನಾ? ಹೊರಗಡೆ ಗುಲ್ಲೆದ್ದಿರೋ ಸಂಗತಿ ಏನು?

By ಫಿಲ್ಮಿಬೀಟ್ ಡೆಸ್ಕ್

ಬಿಗ್‌ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಟ್ರೋಫಿ ಗೆಲ್ಲುವುದಕ್ಕೆ ಬಿಗ್ ಬಾಸ್ ಮನೆಯೊಳಗೆ ಉಳಿದುಕೊಂಡಿರುವ ಸ್ಪರ್ಧಿಗಳು ಕೂಡ ಪೈಪೋಟಿಗೆ ಬಿದ್ದಿದ್ದಾರೆ. ಮನೆಯೊಳಗಿರುವ ಆರು ಮಂದಿ ಸ್ಪರ್ಧಿಗಳಲ್ಲಿ ಟ್ರೋಫಿ ಗೆಲ್ಲೋರು ಯಾರು? ಅನ್ನೋದು ವೀಕ್ಷಕರ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಇತ್ತೀಚೆಗೆ ಬಿಗ್‌ ಬಾಸ್ ಟ್ರೋಫಿ ಗೆಲ್ಲುವವರ ಲಿಸ್ಟ್‌ನಲ್ಲಿದ್ದ ಗೌತಮಿ ಜಾದವ್ ಹಾಗೂ ಧನರಾಜ್ ಮನೆಯಿಂದ ಹೊರ ಬಂದಿದ್ದಾರೆ. ಉಳಿದ ಆರು ಮಂದಿಯಲ್ಲಿ ಟ್ರೋಫಿಗಾಗಿ ಪೈಪೋಟಿ ಶುರುವಾಗಿದೆ. ಒಬ್ಬರಿಗಿಂತ ಒಬ್ಬರು ಟ್ರೋಫಿ ಗೆಲ್ಲುವುದಕ್ಕೆ ಕಾಂಪಿಟೇಷನ್‌ಗೆ ಬಿದ್ದಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಸುದ್ದಿ ಹರಿದಾಡುವುದಕ್ಕೆ ಶುರು ಮಾಡಿದೆ.

Bigg Boss Kannada 11 buzz is that this season trophy will be givan to two members

ಇಲ್ಲಿವರೆಗೂ ಬಿಗ್‌ ಬಾಸ್ ಕನ್ನಡದ ಯಶಸ್ಸಿಯಲ್ಲಿ 10 ಸೀಸನ್‌ಗಳನ್ನು ಮುಗಿಸಿದೆ. ಈಗ 11ನೇ ಸೀಸನ್‌ ಕೂಡ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಬಾರಿ ಬಿಗ್ ಬಾಸ್ ತನ್ನ ಗ್ರ್ಯಾಂಡ್ ಫಿನಾಲೆ ಶೈಲಿಯನ್ನು ಬದಲಿಸಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಅದೇನಂದ್ರೆ, ಈ ಬಾರಿ ಒಬ್ಬರು ಇಬ್ಬರು ವಿನ್ನರ್ ಅಂತ ಘೋಷಿಸುವ ಸಾಧ್ಯತೆಯಿದೆ ಅಂತ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜವೇ? ಇಬ್ಬರಿಗ್ಯಾಕೆ ಟ್ರೋಫಿ? ಈ ಎಲ್ಲಾ ಪ್ರಶ್ನೆಗಳಂತೂ ಹುಟ್ಟಿಕೊಂಡಿವೆ.

ಇದೂವರೆಗೆ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿ ಒಂದೇ ಟ್ರೋಫಿಯನ್ನು ಇಬ್ಬರಿಗೆ ಹಂಚಿದ ಉದಾಹರಣೆಗಳು ಇಲ್ಲ. ಫಿನಾಲೆಗೆ ಬಂದ ಇಬ್ಬರಲ್ಲಿ ಒಬ್ಬರಿಗೆ ಟ್ರೋಫಿ ಅನ್ನೋದು ವಾಡಿಕೆ. ಆದರೆ, ಈ ಬಾರಿ ಫಾರ್ ಎ ಚೇಂಜ್ ಇಬ್ಬರು ಸ್ಪರ್ಧಿಗಳಿಗೆ ಬಿಗ್ ಬಾಸ್ ಟ್ರೋಫಿಯನ್ನು ಹಂಚಲಿದ್ದಾರೆ ಅನ್ನೋ ಸುದ್ದಿಯೊಂದು ಓಡಾಡುತ್ತಿದೆ. ಇದು ನಂಬಲು ಸಾಧ್ಯವೆನಿಸಿದರೂ, ಸೋಶಿಯಲ್ ಮೀಡಿಯಾದಲ್ಲಿ ನೀಡಲಾಗುತ್ತಿರುವ ಕಾರಣಗಳು ಪುಷ್ಠಿಯನ್ನು ನೀಡುತ್ತವೆ.

Bigg Boss Kannada 11 buzz is that this season trophy will be givan to two members

ಬಿಗ್ ಬಾಸ್ ಕನ್ನಡ 11 ಆರಂಭದಲ್ಲಿಯೇ ಪ್ರೋಮೊದಿಂದ ಹಿಡಿದು ಎಲ್ಲವೂ ಡಬಲ್‌ ಥೀಮ್‌ನಲ್ಲಿ ಇದ್ದವು. ಎರಡು ಬಣ್ಣದಿಂದ ಬಿಗ್ ಬಾಸ್ ಆರಂಭಿಸಲಾಗಿತ್ತು. ಎರಡು ಥೀಮ್‌ಗಳು ಇದ್ದವು. ಎಲ್ಲವೂ ಎರಡೆರಡು ಅಂತ ಬಿಗ್‌ ಬಾಸ್ ಆರಂಭದಲ್ಲಿಯೇ ಬಿಂಬಿಸಿತ್ತು. ಸ್ವರ್ಗ ಹಾಗೂ ನರಕ ಎಂದು ಕಾನ್ಸೆಪ್ಟ್ ಇತ್ತು ಎಂದು ನೆಟ್ಟಿಗರು ಕಾರಣಗಳನ್ನು ಕೊಡುತ್ತಿದ್ದಾರೆ. ಹಾಗೇ ಸ್ವರ್ಗವಾಹಿಯಿಂದ ಒಬ್ಬರು ನರಕವಾಸಿಯಿಂದ ಒಬ್ಬರನ್ನು ಆಯ್ಕೆ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು.

ಆದ್ರಿಲ್ಲಿ ಆರಂಭದಲ್ಲಿ ನರಕದಲ್ಲಿದ್ದವರಲ್ಲಿ ಒಬ್ಬರನ್ನು ಬಿಟ್ಟರೆ, ಉಳಿದವರೆಲ್ಲರೂ ಮನೆಯಿಂದ ಹೊರ ಬಂದಿದ್ದಾರೆ. ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಮಾನಸ, ರಂಜಿತ್, ಅನುಷಾ ರೈ, ಶಿಶಿರ್ ಶಾಸ್ತ್ರಿ ಹಾಗೂ ಮೋಕ್ಷಿತಾ ಪೈ ನರಕಕ್ಕೆ ಹೋಗಿದ್ದರು. ಇವರಲ್ಲಿ ಮೋಕ್ಷಿತಾ ಪೈ ಒಬ್ಬರೇ ಉಳಿದುಕೊಂಡಿದ್ದಾರೆ. ಉಳಿದವರೆಲ್ಲರೂ ಎಲಿಮಿನೇಟ್ ಆಗಿದ್ದಾರೆ. ಹೀಗಾಗಿ ಸ್ವರ್ಗದಿಂದ ಇಬ್ಬರು ಹಾಗೂ ನರಕದಿಂದ ಒಬ್ಬರು ಗೆಲ್ಲುವುದಕ್ಕೆ ಒಂದು ಚಾನ್ಸ್ ಇರಬಹುದೇನೋ..

ಇನ್ನು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಮನೆಯೊಳಗೆ ಬಂದವರೂ ಟ್ರೋಫಿ ಗೆಲ್ಲುವವರ ಲಿಸ್ಟ್‌ನಲ್ಲಿ ಇದ್ದಾರೆ. ಹಾಗಾಗಿ ಹನುಮಂತ ಹಾಗೂ ರಜತ್ ಇಬ್ಬರು ಸ್ಟ್ರಾಂಗ್ ಸ್ಪರ್ಧಿಗಳಾಗಿದ್ದಾರೆ. ಹೀಗಾಗಿ 100 ದಿನಗಳನ್ನು ಪೂರೈಸಿದವರಿಗೊಂದು ಹಾಗೂ ವೈಲ್ಡ್ ಕಾರ್ಟ್ ಎಂಟ್ರಿಗೊಂದು ಅಂತಲೂ ಕೊಡಬಹುದು. ಸದ್ಯ ಇವೆಲ್ಲವೂ ಕೇವಲ ಊಹೆ, ಇನ್ನು ಕೆಲವರು ನೆಟ್ಟಿಗರು ಮಾಡುತ್ತಿರುವ ಚರ್ಚೆಯಷ್ಟೇ. ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಮೂವರಲ್ಲಿ ಕಾಂಪಿಟೇಷನ್ ಇದೆ ಎನ್ನಲಾಗುತ್ತಿದೆ. ಹನುಮಂತ, ಉಗ್ರಂ ಮಂಜು ಹಾಗೂ ಮೋಕ್ಷಿತಾ ಈ ಮೂವರಲ್ಲಿ ಇಬ್ಬರಿಗೆ ಕಪ್ ಅನ್ನೋದು ಚರ್ಚೆ. ಇನ್ನೊಂದು ಕಡೆ ತ್ರಿವಿಕ್ರಮ್ ಹೆಸರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

More from Filmibeat

English summary
Bigg Boss Kannada 11 buzz is that this season trophy will be givan to two members;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X