ಬಿಗ್ ಬಾಸ್ ಕನ್ನಡ-4: 'ಬಿಗ್' ಮನೆಯಿಂದ ಕಾರುಣ್ಯ ರಾಮ್ ಔಟ್..!

ಬಿಗ ಬಾಸ್ ಕನ್ನಡ-4 ಕಾರ್ಯಕ್ರಮದಿಂದ ಈ ವಾರ ನಟಿ ಕಾರುಣ್ಯ ರಾಮ್ ಔಟ್ ಆಗಿದ್ದಾರಂತೆ.

By Bk

ಬಿಗ ಬಾಸ್ ಕನ್ನಡ-4 ಕಾರ್ಯಕ್ರಮದಿಂದ ಈ ವಾರ ನಟಿ ಕಾರುಣ್ಯ ರಾಮ್ ಔಟ್ ಆಗಿದ್ದಾರಂತೆ. ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಲೀಕ್ ಆಗಿರುವ ಸುದ್ದಿ ಪ್ರಕಾರ, ಈ ವಾರ 'ದೊಡ್ಮನೆ'ಯಿಂದ ಕಾರುಣ್ಯ ರಾಮ್ ನಿರ್ಗಮಿಸಿದ್ದಾರೆ.

Bigg Boss Kannada 4 - Week 6: karunya Ram eliminated sources

ಕೆಲವೇ ನಿಮಿಷಗಳ ಹಿಂದೆಯಷ್ಟೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದ ಶೂಟಿಂಗ್ ಮುಗಿಯಿತು. ಅದರಲ್ಲಿ ವಾರದ ಕಿಚ್ಚನ ಕಥೆಯನ್ನಿಟ್ಟುಕೊಂಡು ಕಿಚ್ಚ ಸುದೀಪ್ ಪಂಚಾಯತಿ ನಡೆಸಿದ ಬಳಿಕ ನಟಿ ಕಾರುಣ್ಯ ರಾಮ್ ರವರನ್ನ ಹೊರಗಡೆ ಕರೆದಿದ್ದಾರೆ ಎನ್ನಲಾಗಿದೆ. ಆರು ವಾರಗಳಲ್ಲಿ ಇದೇ ಮೊದಲ ಬಾರಿಗೆ ಕಾರುಣ್ಯ ರಾಮ್ ನಾಮಿನೇಟ್ ಆಗಿದ್ದರು.['ಮಾರಿ ಹಬ್ಬ' ಶುರು: ಮಾಳವಿಕಾ, ಮೋಹನ್ ಟಾರ್ಗೆಟ್ ಆದರು.!]

ನಟಿ ಮಾಳವಿಕಾ ಅವಿನಾಶ್, ಸಂಜನಾ, ಓಂ ಪ್ರಕಾಶ್ ರಾವ್, ಶಾಲಿನಿ, ಭುವನ್ ಮತ್ತು ಪ್ರಥಮ್...ಕಾರುಣ್ಯ ರಾಮ್ ವಿರುದ್ಧ ವೋಟ್ ಮಾಡಿದ್ದರಿಂದ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಕಾರುಣ್ಯ ರಾಮ್ ನಾಮಿನೇಟ್ ಆಗಿದ್ದರು. ಕಾರುಣ್ಯ ಜೊತೆಗೆ ಮಾಳವಿಕಾ, ಮೋಹನ್, ಭುವನ್ ಗೌಡ, ಪ್ರಥಮ್ ಈ ವಾರ ನಾಮಿನೇಟ್ ಆಗಿದ್ದರು. ಇತರರಿಗಿಂತ ಅತಿ ಕಡಿಮೆ ಎಸ್.ಎಂ.ಎಸ್ ಪಡೆದ ಕಾರಣ ಕಾರುಣ್ಯ ರಾಮ್ ಹೊರಬಿದ್ದಿದ್ದಾರೆ ಅಂತ ಹೇಳಲಾಗಿದೆ. ಅಧಿಕೃತ ಘೋಷಣೆ ಇನ್ನೂ ಆಗಿಲ್ಲ.

More from Filmibeat

English summary
BBK4, WEEK 5: According to Colors Kannada Sources, Kannada Actress karunya Ram is eliminated from Bigg Boss Kannada 4 this Week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X