'ಬಿಗ್ ಬಾಸ್' ಆರಂಭಕ್ಕೆ ಒಂದೇ ದಿನ ಬಾಕಿ: ಸ್ಪರ್ಧಿಗಳ ಅಂತಿಮ ಪಟ್ಟಿ ಇದೇ ಇರಬಹುದು.!
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಗೆ ಕೇವಲ ಗಂಟೆಗಳು ಮಾತ್ರ ಬಾಕಿ ಇದೆ. ಭಾನುವಾರ ಸಂಜೆ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗ್ತಿದ್ದಾರೆ ಎಂದು ಅಧಿಕೃತವಾಗಿ ಬಹಿರಂಗವಾಗ್ತಿದೆ.
ಇದೀಗ ಅಂತಿಮ ಕ್ಷಣದಲ್ಲಿ 'ಬಿಗ್' ಮನೆ ಪ್ರವೇಶ ಮಾಡಲಿರುವ ಸ್ಪರ್ಧಿಗಳ ಹೆಸರು ಜೋರಾಗಿ ಸದ್ದು ಮಾಡ್ತಿದೆ. ಇದರಲ್ಲಿ ಕೆಲವರು ಹೆಸರು ಡಿಲೀಟ್ ಆಗಿದ್ರೆ, ಮತ್ತೆ ಕೆಲವರು ಹೆಸ್ರು ಸೇರಿಕೊಂಡಿದೆ.
ಈ ಹೆಸರುಗಳನ್ನ ನೋಡಿದ್ರೆ, ಇವರು ಬಿಗ್ ಬಾಸ್ ಗೆ ಹೋಗ್ತಿದ್ದಾರಾ ಎಂಬ ಅಚ್ಚರಿ ಉಂಟಾಗೋದಂತೂ ಪಕ್ಕಾ. ಯಾಕಂದ್ರೆ, ಅಷ್ಟು ಸರ್ಪ್ರೈಸ್ ಹೆಸರುಗಳು ಚರ್ಚೆಯಲ್ಲಿದೆ. ಹಾಗಿದ್ರೆ, ಬಿಗ್ ಬಾಸ್ ಕನ್ನಡ ಸೀಸನ್ 6 ರ ಮನೆ ಸೇರಲಿರುವ ಅಭ್ಯರ್ಥಿಗಳ ಹೊಸ ಸಂಭಾವ್ಯ ಪಟ್ಟಿಯಲ್ಲಿ ಯಾರು ಯಾರು ಇದ್ದಾರೆ.? ಮುಂದೆ ಓದಿ.....

ಪುಟ್ಟಗೌರಿ ರಂಜನಿ
'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ ರಾಘವನ್ ಹೆಸರು ಬಿಗ್ ಬಾಸ್ ಆರನೇ ಆವೃತ್ತಿಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಅದಕ್ಕಾಗಿ ಈಕೆ ಪುಟ್ಟಗೌರಿ ಧಾರಾವಾಹಿಯನ್ನ ಕೂಡ ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ, ರಂಜನಿ ಹೋಗೋದು ಬಹುತೇಕ ಖಚಿತವೆನ್ನಲಾಗಿದೆ.

ದರ್ಶನ್ ಅಭಿಮಾನಿ ಚೆನ್ನಪ್ಪ
'ಸರಿಗಮಪ' ರಿಯಾಲಿಟಿ ಶೋನಲ್ಲಿ ಗೆಲುವಿನ ನಗೆ ಬೀರಿದ್ದ ಚನ್ನಪ್ಪ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎನ್ನಲಾಗಿದೆ. ಇವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ. ಈ ಬಾರಿ ಬಿಗ್ ಮನೆಯಲ್ಲಿ ಸಂಗೀತ ಲಹರಿಗೆ ಸಾರಥ್ಯ ವಹಿಸಲಿದ್ದಾರಂತೆ.

'ಟಕೀಲಾ' ಕ್ವೀನ್ ಶಾಲಿನಿ
ಇನ್ನು ಚಂದನ್ ಶೆಟ್ಟಿ ಅವರ ಟಕೀಲಾ ಹಾಡಿನಲ್ಲಿ ಸೊಂಟ ಬಳುಕಿಸಿದ್ದ ಶಾಲಿನಿ ಗೌಡ ಅವರು ಹೆಸರು ಈ ಭಾರಿ ಬಿಗ್ ಬಾಸ್ ನಲ್ಲಿ ಭಾರಿ ಸದ್ದು ಮಾಡ್ತಿದೆ. ಈಕೆ ಮಾಡೆಲ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಮಿಸ್ ಕರ್ನಾಟಕ ಕೂಡ ಆಗಿದ್ದರು. ಸದ್ಯದ ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಶಾಲಿನಿ ಬಿಗ್ ಬಾಸ್ ಗೆ ಹೋಗ್ತಿಲ್ಲ. ಅದ್ರೆ, ವೈಲ್ಡ್ ಕಾರ್ಡ್ ಎಂಟ್ರಿ ಆದ್ರೆ, ಅಚ್ಚರಿಯಿಲ್ಲ.

ಸುಮನ್ ರಂಗನಾಥ್
ಎವರ್ ಗ್ರೀನ್ ಚೆಲುವೆ ಸುಮನ್ ರಂಗನಾಥ್ ಅವರು ಈ ಸಲ ಬಿಗ್ ಬಾಸ್ ಗೆ ಹೋಗಲಿದ್ದಾರೆ ಎಂಬ ಸುದ್ದಿ ಈಗಲೂ ಕೇಳಿಬರುತ್ತಿದೆ. 'ನೀರ್ದೋಸೆ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸುಮನ್ ರಂಗನಾಥ್ ಈಗ 'ದಂಡುಪಾಳ್ಯ-4' ಚಿತ್ರದಲ್ಲೂ ಅಭಿನಯಿಸ್ತಿದ್ದಾರೆ.

ತುಳಸಿ ಪ್ರಸಾದ್ ಇರಬಹುದು
ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಭಿನ್ನ ಕಂಠದಿಂದ ಗಮನ ಸೆಳೆದಿದ್ದ ತುಳಸಿ ಪ್ರಸಾದ್ ಅವರು ಹೆಸರು ಈಗಲೂ ಕೇಳಿಬರ್ತಿದೆ. ಸದ್ಯಕ್ಕೆ ಎಲ್ಲೂ ಅವರು ಹಾಡುಗಳು, ಅವರ ವಿಡಿಯೋಗಳು ಕಾಣಿಸಿಕೊಂಡಿಲ್ಲ. ಹೀಗಾಗಿ, ತುಳಸಿ ಪ್ರಸಾದ್ ಅವರು ಬಿಗ್ ಮನೆಗೆ ಹೋಗೋದು ಪಕ್ಕಾ ಎನ್ನಲಾಗಿದೆ.

'ಕುರಿ ಪ್ರತಾಪ್' ಇರಬಹುದು
ಮಜಾ ಟಾಕೀಸ್ ಮೂಲಕ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಹಾಸ್ಯ ಕಲಾವಿದ ಕುರಿ ಪ್ರತಾಪ್ ಹೆಸರು ಅಂತಿಮ ಕ್ಷಣದಲ್ಲೂ ಚಾಲ್ತಿಯಲ್ಲಿದೆ. ಆದ್ರೆ, ಕುರಿ ಪ್ರತಾಪ್ ಈ ಕಡೆ ಮಜಾ ಟಾಕೀಸ್ ನಲ್ಲೂ ಭಾಗಿಯಾಗಿದ್ದಾರೆ. ಇದು ಸಹಜವಾಗಿ ಅನುಮಾನಕ್ಕೆ ಕಾರಣವಾಗಿದೆ.

ಒಗ್ಗರಣೆ ಡಬ್ಬಿ 'ಮುರಳಿ'
'ಒಗ್ಗರಣೆ ಡಬ್ಬಿ' ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿರುವ ಮುರಳಿ ಅವರ ಹೆಸರು ಈಗಲೂ 'ಬಿಗ್ ಬಾಸ್' ಸಂಭಾವ್ಯ ಪಟ್ಟಿಯಲ್ಲಿ ಸದ್ದು ಮಾಡ್ತಿದೆ.

ಉಳಿದವರು ಯಾರು
ಈ ಎಲ್ಲಾ ಸೆಲೆಬ್ರಿಟಿಗಳ ಜೊತೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್ ಪೇಟೆ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಕವಿತಾ ಜೊತೆಗೆ ರಂಗಭೂಮಿ ನಟಿ ಅಕ್ಷತಾ ಪಾಂಡವಪುರ ಹೆಸರು ಕೇಳಿಬರುತ್ತಿದೆ. ಆದ್ರೆ, ಇದ್ಯಾವುದು ಖಚಿತವಿಲ್ಲ. ನಾಳೆ ಸಂಜೆ ಬಿಗ್ ಬಾಸ್ ವೇದಿಕೆಯಲ್ಲಿ ಅನಾವರಣವಾಗಲಿದೆ.


Click it and Unblock the Notifications











