Don't Miss!
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- News Mandya: ಏಪ್ರಿಲ್ 24 ರಿಂದ 26ರ ವರೆಗೆ ಮಂಡ್ಯದಲ್ಲಿ ಪ್ರತಿಬಂಧಕಾಜ್ಞೆ ಜಾರಿ
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Bigg Boss Kannada Season 9 Contestants : ಬಿಗ್ ಬಾಸ್ ಸೀಜನ್ 9: ಇಲ್ಲಿದೆ 18 ಸಂಭಾವ್ಯ ಸ್ಫರ್ಧಿಗಳ ಪಟ್ಟಿ
ಕನ್ನಡ ಬಿಗ್ಬಾಸ್ ಓಟಿಟಿ ಮೊದಲ ಆವೃತ್ತಿ ಮುಕ್ತಾಯಗೊಂಡಿದ್ದು, ಇದೀಗ ಬಿಗ್ ಬಾಸ್ ಸೀಜನ್ 9ಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. 8 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಕನ್ನಡದ ಬಿಗ್ ಬಾಸ್ 9 ಸೀಜನ್ ಮೇಲೂ ಪ್ರೇಕ್ಷಕರು ಭಾರಿ ನಿರೀಕ್ಷೆ ಹೊಂದಿದ್ದಾರೆ. ಈಗಾಗಲೇ ಬಿಗ್ ಬಾಸ್ 9ರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆರಂಭವಾಗಿದೆ.
ಕನ್ನಡ ಬಿಗ್ ಬಾಸ್ ಓಟಿಟಿ ಮೊದಲ ಆವೃತ್ತಿಯಲ್ಲಿ ಯಶಸ್ಸುಗಳಿಸಿದೆ. 16 ಜನರ ಸ್ಫರ್ಧಿಗಳನ್ನು ಬಿಗ್ ಬಾಸ್ ಓಟಿಟಿ ಮನೆಯೊಳಗೆ ಕಳುಹಿಸಲಾಗಿದ್ದು, 42 ದಿನಗಳ ಬಿಗ್ ಬಾಸ್ ಪಯಣದ ನಂತರ ಎಂಟು ಜನ ಸ್ಫರ್ಧಿಗಳು ಫೈನಲಿಸ್ಟ್ಗಳಾಗಿದ್ದರು. ಈ ಪೈಕಿ ನಾಲ್ಕು ಜನ ಬಿಗ್ ಬಾಸ್ ಸೀಜನ್ 9ರ ಆವೃತ್ತಿಗೆ ಬಡ್ತಿ ಪಡೆದಿದ್ದಾರೆ.
BBK OTT Grand Finale : ಬಿಗ್ ಬಾಸ್ ಓಟಿಟಿ ಟಾಪರ್ ಆದ ರೂಪೇಶ್ ಶೆಟ್ಟಿಗೆ ಸಿಕ್ಕ ಹಣವೆಷ್ಟು?
ಕನ್ನಡ ಬಿಗ್ ಬಾಸ್ ಓಟಿಟಿ ಸ್ಫರ್ಧಿಗಳಾಗಿದ್ದ ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್, ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಸೀಜನ್ 9ಕ್ಕೆ ಆಯ್ಕೆಯಾಗಿದ್ದಾರೆ. ಇತ್ತ ಸೀಜನ್ 9ರ ತಯಾರಿ ಕೂಡ ಭರ್ಜರಿಯಾಗಿ ನಡೆಯುತ್ತಿದ್ದು, ಕಿಚ್ಚ ಸುದೀಪ್ ಅವರನ್ನು ಒಳಗೊಂಡಂತೆ ಎರಡು ಪ್ರೋಮೋಗಳು ಬಿಡುಗಡೆಗೊಂಡಿವೆ. ಬಿಗ್ ಬಾಸ್ ಸೀಜನ್ 9ರ ಪ್ರೋಮೋ ವೈರಲ್ ಆಗುತ್ತಿದ್ದಂತೆ ಈ ಬಾರಿಯ ಸ್ಫರ್ಧಿಗಳು ಯಾರಿರಬಹುದು ಎಂದು ಕುತೂಹಲ ಆರಂಭವಾಗಿದೆ.
ಮತ್ತೆ ಬರ್ತಾರ ಪ್ರಶಾಂತ್, ದೀಪಿಕಾ, ಅನುಪಮಾ..?
ಬಿಗ್ ಬಾಸ್ ಸೀಜನ್ 9 ಪ್ರೋಮೋ ವೈರಲ್ ಆಗುತ್ತಿದ್ದು, ಪ್ರೋಮೋದಲ್ಲಿ ಹಳೆ ಸೀಜನ್ಗಳ ಸ್ಫರ್ಧಿಗಳಾದ ಅನುಪಮ, ದೀಪಿಕಾ ದಾಸ್ ಹಾಗೂ ಪ್ರಶಾಂತ್ ಸಂಬರ್ಗಿ ಕಾಣಿಸಿಕೊಂಡಿದ್ದರು. ಇದರಿಂದ ಪ್ರೇಕ್ಷಕರ ಕುತೂಹಲ ಇನ್ನೂ ಹೆಚ್ಚಾಗಿದ್ದು, ಬಿಗ್ ಬಾಸ್ ಓಟಿಟಿ ಸ್ಫರ್ಧಿಗಳ ಜೊತೆ ಹಳೆಯ ಸೀಜನ್ಗಳ ಸ್ಫರ್ಧಿಗಳು ಈ ಬಾರಿಯ ಬಿಗ್ ಬಾಸ್ ಮನೆಗೆ ಬರಲಿದ್ದಾರಾ ಎನ್ನುವ ಪ್ರಶ್ನೆ ಮೂಡಿತ್ತು. ಇನ್ನು ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್, ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಸೀಜನ್ 9ರಲ್ಲಿ ಸ್ಫರ್ಧಿಸುವುದು ಪಕ್ಕಾ ಆಗಿದ್ದು, ಇನ್ನುಳಿದ ಸ್ಫರ್ಧಿಗಳು ಯಾರು ಎನ್ನುವುದು ಇಲ್ಲಿದ ಓದಿ.
ಬಿಗ್ ಬಾಸ್ ಓಟಿಟಿ: ಅಂತಿಮ ಹಂತದಲ್ಲಿ ಸೋನು ಔಟ್, ನಾಲ್ವರು ಟಿವಿ ಬಿಗ್ ಬಾಸ್ ಗೆ; ನಂಬರ್ 1 ಯಾರು?
ಇಲ್ಲಿ 18 ಸ್ಫರ್ಧಿಗಳ ಕಂಪ್ಲೀಟ್ ಡೀಟೈಲ್ಸ್
ಬಿಗ್ ಬಾಸ್ ಸೀಜನ್ 9ರ ಸಂಭಾವ್ಯ ಪಟ್ಟಿ ಹೊರಬಿದ್ದಿದ್ದು, ಬೆಳ್ಳಿ ತೆರೆ, ಕಿರು ತೆರೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆ ಪಡೆದವರನ್ನು ಸ್ಫರ್ಧಿಗಳಾಗಿ ಆಯ್ಕೆ ಮಾಡಲಾಗಿದೆ. ಬಿಗ್ ಬಾಸ್ ಸೀಜನ್ 9ರಲ್ಲಿ ಒಟ್ಟಾರೆ 18 ಜನ ಸ್ಫರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಇದೇ ಸಪ್ಟೆಂಬರ್ 24 ರಿಂದ ರಾತ್ರಿ 9.30ರಿಂದ-10 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಮತ್ತೆ ಅಭಿಮಾನಿಗಳ ಮುಂದೆ ಬರ್ತಾರ ನಟಿ ಪ್ರೇಮ?
ಒಂದು ಕಾಲದಲ್ಲಿ ಸ್ಯಾಂಡಲ್ವುಡ್ ಯಶಸ್ವಿ ನಾಯಕಿಯಾಗಿ ಮಿಂಚಿ ಕೆಲವು ವರ್ಷಗಳಿಂದ ತೆರೆ ಮರೆಗೆ ಸರಿದಿದ್ದ ನಟಿ ಪ್ರೇಮ ಈ ಬಾರಿಯ ಕನ್ನಡ ಬಿಗ್ ಬಾಸ್ ಸೀಜನ್ 9ರಲ್ಲಿ ಸ್ಫರ್ಧಿಸಲಿದ್ದಾರೆ. ಹಿರಿಯ ನಟ ಟೆನ್ನಿಸ್ ಕೃಷ್ಣ, ನಟ ನವೀನ್ ಕೃಷ್ಣ, ಚೆಲ್ಲಾಟ ಚಿತ್ರದ ನಟಿ ರೇಖಾ ವೇದವ್ಯಾಸ್, ಬೆಳ್ಳಿ ತೆರೆ ಹಾಗೂ ಕಿರುತೆರೆ ಎರಡರಲ್ಲೂ ಸೈ ಎನಿಸಿಕೊಂಡಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿ ನಟ ದಿಲೀಪ್ ರಾಜ್, ಲವ್ ಗುರು ಚಿತ್ರದ ನಾಯಕ ತರುಣ್ ಚಂದ್ರ, ಗಂಡ-ಹೆಂಡತಿ ಚಿತ್ರದ ನಿರ್ದೇಶಕ ರವಿ ಶ್ರೀವಾಸ್ತವ ಬಿಗ್ ಬಾಸ್ ಕನ್ನಡ ಸೀಜನ್ 9ಕ್ಕೆ ಚಿತ್ರರಂಗದಿಂದ ಆಯ್ಕೆಯಾದ ಸ್ಫರ್ಧಿಗಳು ಎನ್ನಲಾಗಿದೆ.
ದೊಡ್ಮನೆಗೆ ಎಂಟ್ರಿ ಕೊಡುವ ಕಿರುತೆರೆ ಕಲಿಗಳು ಯಾರ್ಯಾರು..?
ಇನ್ನು ಕಿರು ತೆರೆ ಹಾಗೂ ಟಿವಿ ಕಾರ್ಯಕ್ರದಲ್ಲಿ ಕಾಣಿಸಿಕೊಳ್ಳುವ ಕೆಲ ಜನಪ್ರಿಯ ವ್ಯಕ್ತಿಗಳು ಕೂಡ ಈ ಬಾರಿಯ ಜನಪ್ರಿಯ ವ್ಯಕ್ತಿಗಳಾಗಿದ್ದಾರೆ. ಕಿರುತೆರೆ ಕಲಾವಿದ ಮಿಮಿಕ್ರಿ ಗೋಪಿ, ಟಿಕ್ ಟಾಕ್ ಆ್ಯಂಡ್ ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್, ಪುಟ್ಟ ಗೌರಿ ಮದುವೆ ಹಾಗೂ ನಾಗಿಣಿ ಧಾರಾವಾಹಿ ಖ್ಯಾತಿಯ ನಮೃತಾ ಗೌಡ, ಗಾಯಕಿ ಆಶಾ ಭಟ್, ಮಾಜಿ ಕ್ರಿಕೆಟಿಗ ವಿನಯ್ ಕುಮಾರ್, ನಿರೂಪಕ ಚಂದನ್ ಶರ್ಮಾ ಬಿಗ್ ಬಾಸ್ 9ರ ಆವೃತ್ತಿಯ ಸ್ಫರ್ಧಿಗಳಾಗಿದ್ದಾರೆ.