For Quick Alerts
  ALLOW NOTIFICATIONS  
  For Daily Alerts

  Bigg Boss Kannada Season 9 Contestants : ಬಿಗ್​ ಬಾಸ್ ಸೀಜನ್​ ​9: ಇಲ್ಲಿದೆ 18 ಸಂಭಾವ್ಯ ಸ್ಫರ್ಧಿಗಳ ಪಟ್ಟಿ

  |

  ಕನ್ನಡ ಬಿಗ್​ಬಾಸ್​ ಓಟಿಟಿ ಮೊದಲ ಆವೃತ್ತಿ ಮುಕ್ತಾಯಗೊಂಡಿದ್ದು, ಇದೀಗ ಬಿಗ್​ ಬಾಸ್​ ಸೀಜನ್ 9ಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. 8 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಕನ್ನಡದ ಬಿಗ್ ಬಾಸ್​ 9 ಸೀಜನ್​ ಮೇಲೂ ಪ್ರೇಕ್ಷಕರು ಭಾರಿ ನಿರೀಕ್ಷೆ ಹೊಂದಿದ್ದಾರೆ. ಈಗಾಗಲೇ ಬಿಗ್ ಬಾಸ್​ 9ರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಆರಂಭವಾಗಿದೆ.

  ಕನ್ನಡ ಬಿಗ್​ ಬಾಸ್​​ ಓಟಿಟಿ ಮೊದಲ ಆವೃತ್ತಿಯಲ್ಲಿ ಯಶಸ್ಸುಗಳಿಸಿದೆ. 16 ಜನರ ಸ್ಫರ್ಧಿಗಳನ್ನು ಬಿಗ್​ ಬಾಸ್​ ಓಟಿಟಿ ಮನೆಯೊಳಗೆ ಕಳುಹಿಸಲಾಗಿದ್ದು, 42 ದಿನಗಳ ಬಿಗ್​ ಬಾಸ್​ ಪಯಣದ ನಂತರ ಎಂಟು ಜನ ಸ್ಫರ್ಧಿಗಳು ಫೈನಲಿಸ್ಟ್​ಗಳಾಗಿದ್ದರು. ಈ ಪೈಕಿ ನಾಲ್ಕು ಜನ ಬಿಗ್​ ಬಾಸ್​ ಸೀಜನ್​ 9ರ ಆವೃತ್ತಿಗೆ ಬಡ್ತಿ ಪಡೆದಿದ್ದಾರೆ.

  BBK OTT Grand Finale : ಬಿಗ್ ಬಾಸ್ ಓಟಿಟಿ ಟಾಪರ್ ಆದ ರೂಪೇಶ್ ಶೆಟ್ಟಿಗೆ ಸಿಕ್ಕ ಹಣವೆಷ್ಟು?BBK OTT Grand Finale : ಬಿಗ್ ಬಾಸ್ ಓಟಿಟಿ ಟಾಪರ್ ಆದ ರೂಪೇಶ್ ಶೆಟ್ಟಿಗೆ ಸಿಕ್ಕ ಹಣವೆಷ್ಟು?

  ಕನ್ನಡ ಬಿಗ್​ ಬಾಸ್​ ಓಟಿಟಿ ಸ್ಫರ್ಧಿಗಳಾಗಿದ್ದ ರೂಪೇಶ್​ ಶೆಟ್ಟಿ, ಸಾನ್ಯಾ ಐಯ್ಯರ್​, ರಾಕೇಶ್​ ಅಡಿಗ ಹಾಗೂ ಆರ್ಯವರ್ಧನ್​ ಗುರೂಜಿ ಬಿಗ್​ ಬಾಸ್​ ಸೀಜನ್​ 9ಕ್ಕೆ ಆಯ್ಕೆಯಾಗಿದ್ದಾರೆ. ಇತ್ತ ಸೀಜನ್​ 9ರ ತಯಾರಿ ಕೂಡ ಭರ್ಜರಿಯಾಗಿ ನಡೆಯುತ್ತಿದ್ದು, ಕಿಚ್ಚ ಸುದೀಪ್​ ಅವರನ್ನು ಒಳಗೊಂಡಂತೆ ಎರಡು ಪ್ರೋಮೋಗಳು ಬಿಡುಗಡೆಗೊಂಡಿವೆ. ಬಿಗ್​ ಬಾಸ್​ ಸೀಜನ್​ 9ರ ಪ್ರೋಮೋ ವೈರಲ್​ ಆಗುತ್ತಿದ್ದಂತೆ ಈ ಬಾರಿಯ ಸ್ಫರ್ಧಿಗಳು ಯಾರಿರಬಹುದು ಎಂದು ಕುತೂಹಲ ಆರಂಭವಾಗಿದೆ.

   ಮತ್ತೆ ಬರ್ತಾರ ಪ್ರಶಾಂತ್​, ದೀಪಿಕಾ, ಅನುಪಮಾ..?

  ಮತ್ತೆ ಬರ್ತಾರ ಪ್ರಶಾಂತ್​, ದೀಪಿಕಾ, ಅನುಪಮಾ..?

  ಬಿಗ್​ ಬಾಸ್​ ಸೀಜನ್​ 9 ಪ್ರೋಮೋ ವೈರಲ್​ ಆಗುತ್ತಿದ್ದು, ಪ್ರೋಮೋದಲ್ಲಿ ಹಳೆ ಸೀಜನ್​ಗಳ ಸ್ಫರ್ಧಿಗಳಾದ ಅನುಪಮ, ದೀಪಿಕಾ ದಾಸ್​ ಹಾಗೂ ಪ್ರಶಾಂತ್​ ಸಂಬರ್ಗಿ ಕಾಣಿಸಿಕೊಂಡಿದ್ದರು. ಇದರಿಂದ ಪ್ರೇಕ್ಷಕರ ಕುತೂಹಲ ಇನ್ನೂ ಹೆಚ್ಚಾಗಿದ್ದು, ಬಿಗ್​ ಬಾಸ್​ ಓಟಿಟಿ ಸ್ಫರ್ಧಿಗಳ ಜೊತೆ ಹಳೆಯ ಸೀಜನ್​ಗಳ ಸ್ಫರ್ಧಿಗಳು ಈ ಬಾರಿಯ ಬಿಗ್​ ಬಾಸ್​ ಮನೆಗೆ ಬರಲಿದ್ದಾರಾ ಎನ್ನುವ ಪ್ರಶ್ನೆ ಮೂಡಿತ್ತು. ಇನ್ನು ರೂಪೇಶ್​ ಶೆಟ್ಟಿ, ಸಾನ್ಯಾ ಐಯ್ಯರ್​, ರಾಕೇಶ್​ ಅಡಿಗ ಹಾಗೂ ಆರ್ಯವರ್ಧನ್​ ಗುರೂಜಿ ಬಿಗ್​ ಬಾಸ್​ ಸೀಜನ್​ 9ರಲ್ಲಿ ಸ್ಫರ್ಧಿಸುವುದು ಪಕ್ಕಾ ಆಗಿದ್ದು, ಇನ್ನುಳಿದ ಸ್ಫರ್ಧಿಗಳು ಯಾರು ಎನ್ನುವುದು ಇಲ್ಲಿದ ಓದಿ.

  ಬಿಗ್ ಬಾಸ್ ಓಟಿಟಿ: ಅಂತಿಮ ಹಂತದಲ್ಲಿ ಸೋನು ಔಟ್, ನಾಲ್ವರು ಟಿವಿ ಬಿಗ್ ಬಾಸ್ ಗೆ; ನಂಬರ್ 1 ಯಾರು?ಬಿಗ್ ಬಾಸ್ ಓಟಿಟಿ: ಅಂತಿಮ ಹಂತದಲ್ಲಿ ಸೋನು ಔಟ್, ನಾಲ್ವರು ಟಿವಿ ಬಿಗ್ ಬಾಸ್ ಗೆ; ನಂಬರ್ 1 ಯಾರು?

   ಇಲ್ಲಿ 18 ಸ್ಫರ್ಧಿಗಳ ಕಂಪ್ಲೀಟ್​ ಡೀಟೈಲ್ಸ್​​​

  ಇಲ್ಲಿ 18 ಸ್ಫರ್ಧಿಗಳ ಕಂಪ್ಲೀಟ್​ ಡೀಟೈಲ್ಸ್​​​

  ಬಿಗ್​ ಬಾಸ್​ ಸೀಜನ್​ 9ರ ಸಂಭಾವ್ಯ ಪಟ್ಟಿ ಹೊರಬಿದ್ದಿದ್ದು, ಬೆಳ್ಳಿ ತೆರೆ, ಕಿರು ತೆರೆ ಹಾಗೂ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆ ಪಡೆದವರನ್ನು ಸ್ಫರ್ಧಿಗಳಾಗಿ ಆಯ್ಕೆ ಮಾಡಲಾಗಿದೆ. ಬಿಗ್​ ಬಾಸ್​ ಸೀಜನ್​ 9ರಲ್ಲಿ ಒಟ್ಟಾರೆ 18 ಜನ ಸ್ಫರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಇದೇ ಸಪ್ಟೆಂಬರ್​ 24 ರಿಂದ ರಾತ್ರಿ 9.30ರಿಂದ-10 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

   ಮತ್ತೆ ಅಭಿಮಾನಿಗಳ ಮುಂದೆ ಬರ್ತಾರ ನಟಿ ಪ್ರೇಮ?

  ಮತ್ತೆ ಅಭಿಮಾನಿಗಳ ಮುಂದೆ ಬರ್ತಾರ ನಟಿ ಪ್ರೇಮ?

  ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ ಯಶಸ್ವಿ ನಾಯಕಿಯಾಗಿ ಮಿಂಚಿ ಕೆಲವು ವರ್ಷಗಳಿಂದ ತೆರೆ ಮರೆಗೆ ಸರಿದಿದ್ದ ನಟಿ ಪ್ರೇಮ ಈ ಬಾರಿಯ ಕನ್ನಡ ಬಿಗ್​ ಬಾಸ್​ ಸೀಜನ್​ 9ರಲ್ಲಿ ಸ್ಫರ್ಧಿಸಲಿದ್ದಾರೆ. ಹಿರಿಯ ನಟ ಟೆನ್ನಿಸ್​ ಕೃಷ್ಣ, ನಟ ನವೀನ್​ ಕೃಷ್ಣ, ಚೆಲ್ಲಾಟ ಚಿತ್ರದ ನಟಿ ರೇಖಾ ವೇದವ್ಯಾಸ್​, ಬೆಳ್ಳಿ ತೆರೆ ಹಾಗೂ ಕಿರುತೆರೆ ಎರಡರಲ್ಲೂ ಸೈ ಎನಿಸಿಕೊಂಡಿರುವ ಹಿಟ್ಲರ್​ ಕಲ್ಯಾಣ ಧಾರಾವಾಹಿ ನಟ ದಿಲೀಪ್​ ರಾಜ್​, ಲವ್​ ಗುರು ಚಿತ್ರದ ನಾಯಕ ತರುಣ್​ ಚಂದ್ರ, ಗಂಡ-ಹೆಂಡತಿ ಚಿತ್ರದ ನಿರ್ದೇಶಕ ರವಿ ಶ್ರೀವಾಸ್ತವ ಬಿಗ್​ ಬಾಸ್​ ಕನ್ನಡ ಸೀಜನ್​ 9ಕ್ಕೆ ಚಿತ್ರರಂಗದಿಂದ ಆಯ್ಕೆಯಾದ ಸ್ಫರ್ಧಿಗಳು ಎನ್ನಲಾಗಿದೆ.

   ದೊಡ್ಮನೆಗೆ ಎಂಟ್ರಿ ಕೊಡುವ ಕಿರುತೆರೆ ಕಲಿಗಳು ಯಾರ್ಯಾರು..?

  ದೊಡ್ಮನೆಗೆ ಎಂಟ್ರಿ ಕೊಡುವ ಕಿರುತೆರೆ ಕಲಿಗಳು ಯಾರ್ಯಾರು..?

  ಇನ್ನು ಕಿರು ತೆರೆ ಹಾಗೂ ಟಿವಿ ಕಾರ್ಯಕ್ರದಲ್ಲಿ ಕಾಣಿಸಿಕೊಳ್ಳುವ ಕೆಲ ಜನಪ್ರಿಯ ವ್ಯಕ್ತಿಗಳು ಕೂಡ ಈ ಬಾರಿಯ ಜನಪ್ರಿಯ ವ್ಯಕ್ತಿಗಳಾಗಿದ್ದಾರೆ. ಕಿರುತೆರೆ ಕಲಾವಿದ ಮಿಮಿಕ್ರಿ ಗೋಪಿ, ಟಿಕ್​ ಟಾಕ್​ ಆ್ಯಂಡ್​ ರೀಲ್ಸ್​ ಸ್ಟಾರ್​ ಭೂಮಿಕಾ ಬಸವರಾಜ್​, ಪುಟ್ಟ ಗೌರಿ ಮದುವೆ ಹಾಗೂ ನಾಗಿಣಿ ಧಾರಾವಾಹಿ ಖ್ಯಾತಿಯ ನಮೃತಾ ಗೌಡ, ಗಾಯಕಿ ಆಶಾ ಭಟ್​, ಮಾಜಿ ಕ್ರಿಕೆಟಿಗ ವಿನಯ್​ ಕುಮಾರ್​, ನಿರೂಪಕ ಚಂದನ್​ ಶರ್ಮಾ ಬಿಗ್​ ಬಾಸ್​ 9ರ ಆವೃತ್ತಿಯ ಸ್ಫರ್ಧಿಗಳಾಗಿದ್ದಾರೆ.

  Read more about: bigg boss tv sudeep
  English summary
  Bigg Boss Kannada season 9 ready to kick off on September 24. Here 18 celebrities expected to contestant in BBK9,
  Tuesday, September 20, 2022, 10:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X